ಹಿಂದೂಗಳು ವಿಶೇಷವಾಗಿ ಬ್ರಾಹ್ಮಣರಲ್ಲಿ ಸ್ತ್ರೀಯರಿಗೆ ಸ್ವತಂತ್ರ ಇಲ್ಲ ಎನ್ನುವವರಿಗೆ ನನ್ನ ಪುಟ್ಟ ಬರಹ.ಹಿಂದೂಗಳಲ್ಲಿ ಮೊದಲ ಮೂರು ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ಇವರಿಗೆಲ್ಲ ಉಪನಯನ ಸಂಸ್ಕಾರ ಇದೆ.ನಂತರ ಮಾಡುವ ಸಂಧ್ಯಾವಂದನೆಯ ಅಧಿದೇವತೆ ಗಾಯತ್ರಿ, ಒಬ್ಬ ಸ್ತ್ರೀ ದೇವತೆ. ಶೂದ್ರ ಹಾಗೂ ಇತರೆ ಪಂಚಮರಲ್ಲಿ ಈ ಸಂಸ್ಕಾರ ಇಲ್ಲ.ಈಗ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಇಲ್ಲದ ಕೂಗು ಹಬ್ಬಿಸುತ್ತಿರುವುದು ಇವರುಗಳೇ.ನಮ್ಮ ಮಹತ್ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತ ನಡೆದಿದ್ದೇ ಸ್ತ್ರೀ ಮರ್ಯಾದಾ ರಕ್ಷಣೆಗೆ ಧಕ್ಕೆ ಬಂದಾಗ.ಇವತ್ತು ಯಾವ ದಶಾವತಾರ ಕಥೆಗಳನ್ನು ನಮ್ಮ ಬಯೋಲಾಜಿಕಲ್ evolution ಎನ್ನುತೇವೆ ಅಲ್ಲಿಯೂ ನಾವು ಸ್ತ್ರೀ ಪಾತ್ರ ಗಳಿಗೆ ಪ್ರಾಮುಕ್ಯತೆ ಕಾಣಬಹುದು.ಆರ್ಯರು ಪುರುಷ ಪ್ರಧಾನ ಸಮಾಜ ಎನ್ನುವುದು ತಪ್ಪು ಕಲ್ಪನೆ.ಆರ್ಯರ ಭಾಷೆ ಎಂದೇ ಪರಿಗಣಿಸಲ್ಪಟ್ಟ ಸಂಸ್ಕೃತದಲ್ಲಿ ಮೊತ್ತ ಮೊದಲು ನಾವು ಕೇಳುವುದೇ ಮಾತೃ ದೇವೋಭವ ಎಂದು.ದ್ರಾವಿಡ ರಲ್ಲಿ ಹೆಣ್ಣು ಸಂತತಿ ಹಾಗೂ ಗೋತ್ರ ಗಳ ಮುಂದುವರಿಕೆ ಇದೆ ಎನ್ನುವ ವಿಚಾರ ಕುಟುಂಬದಲ್ಲಿ ಹಾಗೂ ದೈನಂದಿನ ಕಾರ್ಯಗಳಲ್ಲಿ ಅವರ ಕೊಡುಗೆ ಇಂದ ಬಂದಿದ್ದಿರಬಹುದು.
ಸ್ತ್ರೀಯರಿಗೆ ಬೆಂಬಲ ನೀಡಿ.ಅ ಶ್ಟು ಸಾಕು.ಮಿಕ್ಕಿದ್ದನ್ನು ಅವರೇ ನೋಡಿಕೊಳ್ಳುತ್ತಾರೆ.
-ರಾಧಿಕಾ ಜಿ ಎನ್
7019990492