ಬೆಂಗಳೂರು:ಕ್ಯಾಪಿಟಲ್ ಹೋಟೆಲು ಸಭಾಂಗಣ ಇಂಡಿಯನ್ ಮೂವ್ ಮೆಂಟ್ ಪಾರ್ಟಿ ವತಿಯಿಂದ 7 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಮಾರಂಭ.
ಇಂಡಿಯನ್ ಮೂವ್ ಮೆಂಟ್ ಪಾರ್ಟಿ ರಾಜ್ಯಾಧ್ಯಕ್ಷರಾದ ಮಹದೇವ್ ಉರಗಾಂವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ರಿಸ್ಟೋಫರ್ ರಾಜ್ ಕುಮಾರ್, ಜೆಡಿಯು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರಷೀಧಾ ಬೇಗಂರವರು ಭಾಗವಹಿಸಿದ್ದರು.
ಮಹದೇವ್ ಉರಗಾಂವಿ ರವರು ಮಾತನಾಡಿ ಸ್ವಾತಂತ್ರ್ಯ ಬಂದರು ದೇಶದ ಜನರ ಪರಿಸ್ಥಿತಿ ಸುಧಾರಣೆಯಾಗಿಲ್ಲ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಪಕ್ಷದಿಂದ ದೇಶ ಅಭಿವೃದ್ದಿಯಾಗುವುದಿಲ್ಲ , ಜಾತಿ, ಜಾತಿ ನಡುವೆ ಸಂಘರ್ಷ ತಂದಿಟ್ಟು ಈ ಪಕ್ಷಗಳು ದೇಶವನ್ನು ಗಂಡಾಂತರ ತಂದಿದ್ದಾರೆ.
ಇದೆಲ್ಲ ಪರಿಹಾರ ಕಂಡಿಕೊಳ್ಳುಲು ಇಂಡಿಯನ್ ಮೂವ್ ಮೆಂಟ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುಲ್ ಸುಭಾನ್ ರವರ ನೇತೃತ್ವದಲ್ಲಿ ಪಾರ್ಟಿ ಸದೃಢವಾಗಿದೆ.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿದ್ದಾಂತದಂತೆ ಎಲ್ಲ ವರ್ಗ, ಧರ್ಮ ಜಾತಿಯವರನ್ನ ಸರಿಸಮಾನ ಕಂಡು ಅಭಿವೃದ್ದಿಯತ್ತ ಸಾಗುವುದು ಇಂಡಿಯನ್ ಮೂವ್ ಮೆಂಟ್ ಪಾರ್ಟಿಯ ಉದ್ದೇಶ.
ಜನಸಾಮಾನ್ಯರ ಬದುಕು ಹಸನಾಗಬೇಕು, ಬಡವರು, ಕೂಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಆರ್ಥಿಕ ಭದ್ರತೆ ಮತ್ತು ಆಶ್ರಯ ಸಿಗಬೇಕು ಎಂದು ಇದು ನಮ್ಮ ಹೋರಾಟ. ಇಂದು ಅಡುಗೆ ಆನಿಲ್ ಪೆಟ್ರೋಲ್ ಮತ್ತು ದಿನಬಳಕೆ ಆಹಾರ ಪದಾರ್ಥಗಳು ಬೆಲೆ ಏರಿಕೆಯಿಂದ ಜನ ಜೀವನ ಸಂಕಷ್ಟದಲ್ಲಿ ಇದ್ದಾರೆ.
ಅದ್ದರಿಂದ ಇಂಡಿಯನ್ ಮೂವ್ ಮೆಂಟ್ ಪಾರ್ಟಿ ಜನ ಸಾಮಾನ್ಯರಿಗೆ ನೋವಿಗೆ ಧ್ವನಿಯಾಗಿ, ಅವರ ಸಂಕಷ್ಟ ನಿವಾರಣೆ ಮಾಡಲು ಅಧಿಕಾರದಲ್ಲಿ ನಮ್ಮ ಪಾರ್ಟಿಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ.
ಈಗ 7ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಮೊದಲನೇಯ ಪಟ್ಟಿ ಬಿಡುಗಡೆ ಮಾಡಲಾಗಿದೆ ಎರಡನೇಯ ಪಟ್ಟಿಯಲ್ಲಿ 8ಕ್ಷೇತ್ರ ಮತ್ತು ದೇಶದ್ಯಾಂತ 150ಗಳಲ್ಲಿ ಅಭ್ಯರ್ಥಿಗಳು ನಮ್ಮ ಪಕ್ಷದಿಂದ ನಿಲ್ಲುತ್ತಿದ್ದಾರೆ.
ಕರ್ನಾಟಕ ರೈತ ಸಂಘ, ಕನ್ನಡ ಪರ ಸಂಘಟನೆಗಳು ಮತ್ತು ಸ್ವಯಂ ಸೇವ ಸಂಘಟನೆಗಳು ನಮ್ಮ ಪಾರ್ಟಿಯ ಲೋಕಸಭಾ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರಕ್ಕೆ ಕೈಜೋಡಿಸಿದ್ದಾರೆ ಎಂದು ಹೇಳಿದರು. ಇಂಡಿಯನ್ ಮೂವ್ ಪಾರ್ಟಿ ವತಿಯಿಂದ 1)ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ-ಕ್ರಿಸ್ಟೋಫರ್ ರಾಜ್ ಕುಮಾರ್, 2)ಕೋಲಾರ-ಹರ್ಷ 3)ಬೆಂಗಳೂರು ಕೇಂದ್ರ-ಉಮಾ ಸಿ. 4) ಚಿತ್ರದುರ್ಗ ಎಸ್.ಸಿ.ಮೀಸಲು ಬಿ.ಟಿ.ರಾಮಸುಬ್ಬಯ್ಯ, 5)ದಕ್ಷಿಣ ಕನ್ನಡ-ಸುಪ್ರೀತ್ ಕುಮಾರ್ ಪೂಜಾರಿ. 6) ಚಾಮರಾಜನಗರ ಎಸ್.ಸಿ.ಮೀಸಲು ಕುಡಲೂರು ಆರ್ ಶ್ರೀಧರ್ ಮೂರ್ತಿ. 7) ಚಿಕ್ಕಬಳ್ಳಾಪುರ- ಕೋದಂಡರೆಡ್ಡಿರವರನ್ನು ಅಧಿಕೃತ ಅಭ್ಯರ್ಥಿಗಳ ಎಂದು ಘೋಷಣೆ ಮಾಡಲಾಯಿತು.