ಬೆಂಗಳೊರು-ಮಾ.26- ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದಿಂದ ಇಂದು ವಿಶ್ವ ರಂಗಭೋಮಿ ದಿನಾಚರಣೆ ಆಯೋಜಿಸಲಾಗಿದ್ದು ನಗರದ ಜೆ.ಸಿ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿರುವ ವರ್ಣ ಆರ್ಟ ಗ್ಯಾಲರಿಯಲ್ಲಿ ದಿನಾಂಕ 27/3/2024 ಬುಧವಾರದಂದು ಸಂಜೆ 6ಗಂಟೆಗೆ ಕಾರ್ಯಕ್ರಮ ಕನ್ನಡ ಚಿತ್ರರಂಗದ ಹಿರಿಯನಟಿ ಮತ್ತು ರಂಗಭೊಮಿ ಹಿರಿಯ ಕಲಾವಿದೆ ಹಾಗೊ ವಿಧಾನ ಪರಿಷತ್ ಸದಸ್ಯರಾದ ಉಮಾ ಶ್ರೀಯವರು ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ ವಹಿಸಲಿದ್ದಾರೆ, ಗೌರವ ಅತಿಥಿಗಳಾಗಿ ಕರ್ನಾಟಕ ನಾಟಕ ಅಕೆಡಮಿ ಅಧ್ಯಕ್ಷರಾದ ಕೆ.ವಿ ನಾಗರಾಜ ಮೂೀರ್ತಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ರಂಗಭೊಮಿಯಿಂದ ಸಿನಿಮಾದೆಡೆಗೆ ವಿಷಯ ಕುರಿತು ವಿಚಾರ ಮಂಡನೆ ನಡೆಯಲಿದ್ದು ಇದರ ಸಂವಾದದಲ್ಲಿ ಹಿರಿಯ ನಟಿ ಎಂ ಎನ್ ಲಕ್ಷೀದೇವಿ. ಖ್ಯಾತ ಸಂಗೀತ ನಿರ್ದೆಶಕ ಹಂಸಲೇಖ, ಹಿರಿಯ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ, ಹಿರಿಯ ನಟರಾದ ಉಮೇಶಣ್ಣ, ಸುಂದರ್ ರಾಜ್, ಶ್ರೀನಿವಾಸ ಮೂರ್ತಿ, ದೊಡ್ಡಣ್ಣ, ರಮೇಶ್ ಭಟ್, ಮಾಲತಿಶ್ರೀ ಮೈಸೊರ್, ಸುಂದರಶ್ರೀ, ಖ್ಯಾತ ನಿರ್ದಶಕರುಗಳಾದ ಟಿಎಸ್ ನಾಗಭರಣ, ಬಿವಿ ರಾಜಾರಮ್, ಬಿ.ಸುರೇಶ್, ಸಂಗಮೇಶ್ ಉಪಾಸೆ, ಲಕ್ಷೀ ಭಾಗವತರ್, ವಿಜಯ ಕುಮಾರ್ ಚಿತೊರಿ ಭಾಗವಹಿಸಿ ವಿಷಯ ಕುರಿತು ವಿಷಯ ವಿಚಾರ ಮಂಡನೆ ಮಾಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ರಂಗಾಸಕ್ತರು ಆಗಮಿಸಿ ಸಮಾರಂಭವನ್ನ ಯಶಸ್ವಿಗೊಳಿಸಲು ಸಂಘದ ಅಧ್ಯಕ್ಷರದ ಪದ್ಮಿನಿ ನಂದಾ, ಕಾರ್ಯದರ್ಶಿ ಮೂಗ್ ಸುರೇಶ್ ಕೋರಿದ್ದಾರೆ.