ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೆ ಲಭಿಸಿದ ಜಯ !

VK NEWS
By -
0

 ಧಾರ್ಮಿಕ ದತ್ತಿ ಇಲಾಖೆಯ ತಿದ್ದುಪಡಿ ಮಸೂದೆ’ ತಿರಸ್ಕರಿಸಿದ

ಮಾನ್ಯ ರಾಜ್ಯಪಾಲರ ನಿರ್ಣಯಕ್ಕೆ ಸ್ವಾಗತ ! – ಕರ್ನಾಟಕ ದೇವಸ್ಥಾನ ಮಹಾಸಂಘ


ಕೆಲವು ದಿನಗಳ ಹಿಂದೆ ಕರ್ನಾಟಕ ಸರಕಾರವು ಧಾರ್ಮಿಕ ದತ್ತಿ ಇಲಾಖೆಯ ಮಸೂದೆಗೆ ತಿದ್ದುಪಡಿ ತಂದಿದ್ದುಹೊಸ ತಿದ್ದುಪಡಿ ಮಸೂದೆಯ ಪ್ರಕಾರ ಬಿ ಗ್ರೇಡ್ ದೇವಸ್ಥಾನಗಳು 5% ಆದಾಯ ಮತ್ತು 1 ಕೋಟಿಗಿಂತ ಹೆಚ್ಚು ಆದಾಯ ತರುವ  ಗ್ರೇಡ್ ದೇವಸ್ಥಾನಗಳು 10% ಶೇತೆರಿಗೆಯನ್ನು ಸರಕಾರದ ಕಾಮನ್ ಪೂಲ್ ಫಂಡ್ ಗೆ ನೀಡುವ ಬಗ್ಗೆ ತಿದ್ದುಪಡಿಯನ್ನು ತರಲಾಗಿತ್ತುಅಷ್ಟೇ ಅಲ್ಲದೇ  ಗ್ರೇಡ್ ದೇವಾಲಯಗಳ ಮೂಲಭೂತ ಸೌಕರ್ಯದ ನೆಪದಲ್ಲಿ 9 ಜನರ ಜಿಲ್ಲಾ ಮಟ್ಟದ ಉನ್ನತ ಸಮಿತಿ ತ್ತು ರಾಜ್ಯ ಮಟ್ಟದ 14 ಜನರ ಸಮಿತಿ ರಚನೆ ಮಾಡಿತ್ತು.

 ಕಾಯ್ದೆಯನ್ನು ಕರ್ನಾಟಕ ದೇವಸ್ಥಾನ ಮಹಾಸಂಘವು ತೀವ್ರವಾಗಿ ಖಂಡಿಸಿತ್ತು ಮತ್ತು  ಕಾಯ್ದೆಯನ್ನು ರದ್ದುಗೊಳಿಸುವಂತೆ ರಾಜ್ಯದ 15 ಕ್ಕೂ ಅಧಿಕ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ನವಿ ಸಲ್ಲಿಸಲಾಗಿತ್ತುಈ ಕುರಿತು ಅನೇಕ ಕಡೆಗಳಲ್ಲಿ ಆಂದೋಲನವನ್ನೂ ನಡೆಸಲಾಗಿತ್ತು.  ಬೇಡಿಕೆಗೆ ಬುಧವಾ 20 ಮಾರ್ಚ್ ರಂದು ಪ್ರತಿಕ್ರಿಯಿಸಿದ ಮಾನ್ಯ ರಾಜ್ಯಪಾಲರು  ಪ್ರಸ್ತಾಪಿತ ಮಸೂದೆಯಲ್ಲಿ ಅನೇಕ ಅಂಶಗಳು ತಾರತಮ್ಯತೆಯಿಂದ ಕೂಡಿದೆ ಎಂದು ಹೇಳಿ ಅದನ್ನು ರಕಾರಕ್ಕೆ ವಾಪಾಸ್ ಕಳಿಸಿದ್ದಾರೆಮಾನ್ಯ ರಾಜ್ಯಪಾಲರಾದ ತಾವರ್ ಚಂದ್ ಗೆಹಲೋಟ್ ಅವರ  ಮಹತ್ವಪೂರ್ಣ ನಿರ್ಣಯವನ್ನು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಸ್ವಾಗತಿಸುತ್ತದೆ ಮತ್ತು ಹಿಂದೂ ದೇವಸ್ಥಾನಗಳ ರಕ್ಷಣೆಗಾಗಿ ಮಹಾಸಂಘವು ಇದೇ ರೀತಿ ಸನ್ನದ್ಧವಾಗಿರುವುದು ಎಂದು ರಾಜ್ಯ ಸಂಯೋಜಕರಾದ ಶ್ರೀಮೋಹನ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಕಛೇರಿಯಲ್ಲಿ ಮನವಿ




ಕೊಡಗಿನಲ್ಲಿ ನಡೆದ ಆಂದೋಲನದಲ್ಲಿ ಸಹಭಾಗಿಯಾಗಿರುವ ದೇವಸ್ಥಾನ ವಿಶ್ವಸ್ಥರು



ಕೊಡಗಿನಲ್ಲಿ ನಡೆದ ಆಂದೋಲನದಲ್ಲಿ ಸಹಭಾಗಿಯಾಗಿರುವ ದೇವಸ್ಥಾನ ವಿಶ್ವಸ್ಥರು




ರಾಯಭಾಗದ ತಾಲೂಕು ಕಛೇರಿಯಲ್ಲಿ ಮನವಿ



ಶಿವಮೊಗ್ಗ ಜಿಲ್ಲಾಡಳಿತ ಕಛೇರಿಯಲ್ಲಿ ಮನವಿ



ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವ ದೇವಸ್ಥಾನ ಮಹಾಸಂಘದ ಶ್ರೀ. ವಿಜಯ ಕುಮಾರ



Post a Comment

0Comments

Post a Comment (0)