ನಗರ್ತಪೇಟೆ : ಸೌಹಾರ್ದತೆ, ಶಾಂತಿ ಕಾಪಾಡಲು ಮನವಿ

VK NEWS
By -
0

ಬೆಂಗಳೂರಿನ ನಗರ್ತ ಪೇಟೆ, ಸಿದ್ದಣ್ಣ ಗಲ್ಲಿಯಲ್ಲಿನ ಮೊಬೈಲ್ ಅಂಗಡಿ ಮಾಲಿಕ ಯುವಕ ಮತ್ತು ಒಂದು ಗುಂಪಿನ ನಡುವೆ ನಡೆದ ಘರ್ಷಣೆಅಂಗಡಿ ಮಾಲೀಕನ ಮೇಲೆ ನಡೆದ ಹಲ್ಲೆ ಘಟನೆ ಮತ್ತು ನಂತರದ ಬೆಳವಣಿಗೆಗಳ ಬಗ್ಗೆ 'ಸೌಹಾರ್ದ ಕರ್ನಾಟಕತೀವ್ರ ಆತಂಕವನ್ನು ವ್ಯಕ್ತಪಡಿಸುತ್ತದೆ  ಘಟನೆಯನ್ನು ಕೋಮುದ್ವೇಷವನ್ನು ಹರಡುವುದಕ್ಕೆ ಪೂರಕವಾಗಿ ತಿರುಚಿ ಕೋಮುವಾದೀಕರಿಸುವ ಪ್ರಯತ್ನವನ್ನು ‘ಸೌಹಾರ್ದ ಕರ್ನಾಟಕವು ತೀವ್ರವಾಗಿ ಖಂಡಿಸುತ್ತದೆ.

 ಮಾರ್ಚ್ 17 ಸಂಜೆ ನಗರ್ತಪೇಟೆಯ ಮೊಬೈಲ್ ಅಂಗಡಿ ಮಾಲೀಕ ಮತ್ತು ಯುವಕರ ಗುಂಪಿನ ನಡುವೆ ಬಿಸಿಯಾದ ಮಾತುಕತೆ ಬಳಿಕ ನಡೆದ ಹಲ್ಲೆ ಪ್ರಕರಣ ಈಗಾಗಲೇ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದುಪೋಲಿಸರು ಆರೋಪಿಗಳಲ್ಲಿ ಐವರನ್ನು ಈಗಾಗಲೇ ಬಂಧಿಸಿದ್ದಾರೆ.. ಉಳಿದವರ ಬಂಧನದ ಪ್ರಯತ್ನವನ್ನು ಮುಂದುವರಿಸಿದ್ದಾರೆ.

    ಮೊಬೈಲ್ ಅಂಗಡಿಯ ಮಾಲಿಕರು ಮೊದಲು ಪೋಲಿಸ್ ಠಾಣೆಯಲ್ಲಿ ದೂರು ಕೊಟ್ಟಾಗ ಈಗ ಕೆಲವರು ಆರೋಪಿಸುತ್ತಿರುವಂತೆ ಹನುಮಾನ್ ಚಾಲೀಸ್ ಹಾಡು ಹಾಕಿದ್ದಕ್ಕೆ ಆಕ್ಷೇಪಿಸಿ ಆರೋಪಿಗಳು ಹಲ್ಲೆ ನಡೆಸಿದರು ಎಂದು ದೂರು ನೀಡಿರುವುದಿಲ್ಲ ಎಂದು ತಿಳಿದುಬಂದಿದೆ ಘಟನೆ ನಡೆದ ಬಳಿಕ ಆರೋಪಿಸಲಾದಂತೆ ಎರಡನೆಯ ದೂರನ್ನು ದಾಖಲಾಗಿಸಿರುವುದು ಕೂಡ ಇಲ್ಲಿ ಗಮನಿಸಬೇಕಾಗಿದೆಮಾಲೀಕನ ಮೇಲೆ ಹಲ್ಲೆ ನಡೆಸಿದರೂ ಎನ್ನಲಾದ ಅರೋಪಿಗಳಲ್ಲಿ ಮುಸ್ಲೀಮರಲ್ಲದೇ ಇಬ್ಬರು ಹಿಂದೂ ಯುವಕರೂ ಇದ್ದಾರೆ..  ವಿವರಗಳು ಮೇಲ್ನೋಟಕ್ಕೆ ಇದು ಕೋಮು ಘರ್ಷಣೆ ಅಲ್ಲ ಎಂಬುದನ್ನು ಸೂಚಿಸುತ್ತದೆಆದರೆ ಭಾರತೀಯ ಜನತಾ ಪಕ್ಷದ ಶಾಸಕರುಸಂಸದರುಮುಖಂಡರು ಹಾಗೂ ಹಿಂದೂ ಜಾಗರಣ ವೇದಿಕೆಭಜರಂಗದ ದಳಗಳ ಮುಖಂಡರು  ವಿಷಯದಲ್ಲಿ ಮಧ್ಯ ಪ್ರವೇಶ ಮಾಡಿದ ಮೇಲೆ ಅಂಗಡಿಯಲ್ಲಿ ಹನುಮಾನ್ ಚಾಲೀಸ ಹಾಕಿದ್ದಕ್ಕಾಗಿ ಆಕ್ಷೇಪ ಎತ್ತಿ ಹಲ್ಲೆ ನಡೆಸಿಕೊಲೆಗೆ ಯತ್ನಿಸಲಾಗಿದೆ ಎಂದು ಹೊಸ ದೂರು ದಾಖಲಿಸಿದ್ದಾರೆ ಎಂಬುದೂ ತಿಳಿದು ಬಂದಿದೆ.   ವಿಷಯದಲ್ಲಿ ಸ್ಥಳೀಯರು ಅಂಗಡಿಯಲ್ಲಿ ಹಾಕಿದ್ದದ್ದುಹಿಂದಿ ಭಕ್ತಿ ಗೀತೆಗಳು ಎಂದು ಮಾಹಿತಿ ನೀಡಿದ್ದಾರೆಂದುವಿಚಾರಣೆ ನಡೆಯುತ್ತಿದೆ ಎಂದೂ ಪೋಲಿಸರು ತಿಳಿಸಿದ್ದಾರೆಮೊಬೈಲ್ ವ್ಯವಹಾರದಲ್ಲಿ ಬಂದಿರುವ ಸಮಸ್ಯೆಗಳು ಸಹ  ವಾಗ್ವಾದ ಮತ್ತು ಜಗಳಕ್ಕೆ ಕಾರಣವೆಂದು ಸಹ ಹೇಳಲಾಗುತ್ತಿದೆ  ಒಟ್ಟು ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ಆಳವಾದ ತನಿಖೆಯನ್ನು ಪೊಲೀಸ್ ಇಲಾಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮವನ್ನು ಜರುಗಿಸಬೇಕೆಂದು 'ಸೌಹಾರ್ದ ಕರ್ನಾಟಕ'ವು ಒತ್ತಾಯಿಸುತ್ತದೆ.

 

ಯಾವುದೇ ವಿವಾದಪ್ರಕರಣವನ್ನು ಸಂಕುಚಿತ ರಾಜಕೀಯ ಲಾಭಗಳಿಗಾಗಿ ಕೋಮುವಾದೀಕರಿಸುವ ಕೆಲಸವನ್ನು ಸಂಘ ಪರಿವಾರವು ನಿರಂತರವಾಗಿ ನಡೆಸುತ್ತಿದ್ದುಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ  ಪ್ರಯತ್ನಗಳನ್ನು ತೀವ್ರಗೊಳಿಸಿರುವುದು ದುರದೃಷ್ಟಕರವಾಗಿದೆಅತ್ಯಂತ ಮಹತ್ವದ ಸಾರ್ವತ್ರಿಕ ಚುನಾವಣೆಗಳು ಘೋಷಿತವಾದ  ಸಂದರ್ಭದಲ್ಲಿ ಕೋಮು ಉದ್ರಿಕ್ತತೆಯನ್ನ ಹೆಚ್ಚಿಸಿ ಅದರ ದುರ್ಲಾಭ ಪಡೆಯುವ ಶಕ್ತಿಗಳ ಮೇಲೆ ಚುನಾವಣಾ ಆಯೋಗವು ಅತ್ಯಂತ ಕಠಿಣವಾದಂತ ಕ್ರಮಗಳನ್ನು ಜರುಗಿಸಬೇಕು ಎಂದು ಅಗ್ರಹಿಸುತ್ತದೆ.

  ಪ್ರಸಕ್ತ ಪ್ರಕರಣದಲ್ಲಿ ಪೋಲಿಸ್ ಇಲಾಖೆಯ ತ್ವರಿತವಾದದಕ್ಷವಾದನಿಸ್ಪಕ್ಷಪಾತವಾದ ತನಿಖೆಯ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಖಾತ್ರಿ ಪಡಿಸಬೇಕೆಂದು ಸೌಹಾರ್ದ ಕರ್ನಾಟಕವು ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.

 

  ಅದೇ ಸಮಯದಲ್ಲಿ ರಾಜ್ಯದ ಜನತೆ ಕೋಮುವಾದಿ ವಿಭಜನೆಯ ಸಂಕುಚಿತ ರಾಜಕಾರಣದ ತಂತ್ರಗಳಿಗೆ ಬಲಿಯಾಗದೇ ಶಾಂತಿಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು ವಿನಂತಿಸುತ್ತದೆ.

 

ಸೌಹಾರ್ದ ಕರ್ನಾಟಕದ ಪರವಾಗಿ  ಮಾವಳ್ಳಿ ಶಂಕರ್ಡಾ.ಎಸ್.ವೈಗುರುಶಾಂತ್ಡಾಆರ್.ಮೋಹನ್ ರಾಜ್,

ಬಡಗಲಪುರ ನಾಗೇಂದ್ರಬಿರಾಜಶೇಖರಮೂರ್ತಿಆರ್ರಾಮಕೃಷ್ಣಮಲ್ಲಿಗೆಜ್ಯೋತಿ ಅನಂತ ಸುಬ್ಬರಾವ್ಎಸ್ಶೋಭಡಾಮನೋಹರ ಚಂದ್ರಪ್ರಸಾದ್ಪೆರಿಕೋ ಪ್ರಭುರಾಜಶೇಖರ ಕಿಗ್ಗ ಒತ್ತಾಯಿಸಿದ್ದಾರೆ.

Post a Comment

0Comments

Post a Comment (0)