ಬಿಜೆಪಿ ಪಕ್ಷದ ಬೆಂಗಳೂರು ಉತ್ತರ ಲೋಕಸಭಾ ಚುನಾವಣಾ ಕಚೇರಿಯ ಪೂಜೆಯನ್ನು ಗುರುವಾರ ಬೆಳಗ್ಗೆ ಯಶವಂತಪುರ ಸರ್ಕಲ್ ಹತ್ತಿರವಿರುವ ಮೇವಾರ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗೋವಿಗೆ ಪೂಜೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರಿ ಶೋಭಾ ಕರಂದ್ಲಾಜೆ, ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರು ಎಸ್. ಮುನಿರಾಜು, ಬೆಂಗಳೂರು ಉತ್ತರ ಜಿಲ್ಲೆ ಅಧ್ಯಕ್ಷರು ಎಸ್. ಹರೀಶ್, ಸಂಚಾಲಕರು ಸಚ್ಚಿದಾನಂದ ಮೂರ್ತಿ, ಮಾಜಿ ಪಾಲಿಕೆ ಸದಸ್ಯರು ಎನ್.ಜೈಪಾಲ್, ಪಕ್ಷದ ಮುಖಂಡರುಗಳಾದ ಶ್ರೀಮತಿ ಆಶಾ ಲೋಹಿತ್, ಕೃಷ್ಣಮೂರ್ತಿ ಉಪ್ಪಾರ್, ರಾಘವೇಂದ್ರ ಶೆಟ್ಟಿ, ಮಂಡಲ ಉಪಾಧ್ಯಕ್ಷರು ಗೌತಮ್ ಜೈನ್, ವಸಂತಕುಮಾರ್, ಮುನಿರಾಜು ಜಿಲ್ಲಾ ಮತ್ತು ಮಂಡಲದ ಪದಾಧಿಕಾರಿಗಳು ಮೋರ್ಚಾ, ಹಾಗೂ ಪ್ರಕೋಷ್ಟಗಳ ಪದಾಧಿಕಾರಿಗಳು ಮತ್ತು ಎಲ್ಲ ಮಂಡಲದ , ಎಲ್ಲಾ ಕಾರ್ಯಕರ್ತರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.