*
ಇಂದು ಬೆಂಗಳೂರಿನ ಜೆ ಸಿ ರಸ್ತೆಯ ಕನ್ನಡ ಭವನದ ವರ್ಣ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘ (ರಿ) ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆಯನ್ನ ಆಯೋಜಿಸಲಾಗಿತ್ತು. ರಂಗ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ
ಸಂಘದ ಅಧ್ಯಕ್ಷರಾದ ಪದ್ಮಿನಿ ನಂದಾ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಹಿರಿಯ ನಟ ಮೂಗ್ ಸುರೇಶ್ ಪ್ರಸ್ತಾವಿಕವಾಗಿ ಮಾತನಾಡಿದರು, ಸಮಾರಂಭದ ಅಧ್ಯಕ್ಷತೆಯನ್ನ ಹಿರಿಯ ನಟ ದೊಡ್ಡಣ್ಣ ವಹಿಸಿದ್ದರು. ಗೌರವ ಅತಿಥಿಯಾಗಿ ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಾದ ಕೆ ವಿ ನಾಗರಾಜ್ ಮೂರ್ತಿ ವಹಿಸಿದ್ದರು. ಹಿರಿಯ ಕಲಾವಿದೆ ಎಂ ಎನ್ ಲಕ್ಷ್ಮಿ ದೇವಿ ಜ್ಯೋತಿ ಬೆಳಗಿಸುವ ಮುಖಾಂತರ ವಿಶ್ವ ರಂಗಭೂಮಿ ಸಮಾರಂಭಕ್ಕೆ ಚಾಲನೆ ನೀಡಿದರು.
ರಂಗ ಭೂಮಿಯಿಂದ ಬೆಳ್ಳಿ ತೆರೆಗೆ ಬಂದಿರುವ ಹಿರಿಯ ಕಲಾವಿದರುಗಳಾದ ರಮೇಶ್ ಭಟ್, ಎಂ ಎಸ್ ಉಮೇಶಣ್ಣ, ಸುಂದರ್ ರಾಜ್, ಮಾಲಾತಿಶ್ರೀ ಮೈಸೂರ್, ಸುಂದರಶ್ರೀ, ಹಿರಿಯ ರಂಗ ಕರ್ಮಿ ಹಾಗೂ ರಂಗ ತಜ್ಞ ಜಿ. ಶ್ರೀನಿವಾಸ್ ಕಪ್ಪಣ್ಣ, ರಂಗಭೂಮಿಯ ನಿರ್ದೇಶಕ ಚಿಂದೊಡಿ ಬಂಗಾರೇಶ್, ಕಿರುತೆರೆ ಹಾಗೂ ಹಿರಿತೆರೆ ನಿರ್ದೇಶಕ ಬಿ ಸುರೇಶ್, ರಂಗಕಾರ್ಮಿಗಳು, ಖ್ಯಾತ ಸಂಗೀತ ನಿರ್ದೇಶಕ ನಾಧ ಬ್ರಹ್ಮ ಹಂಸಲೇಖರವರು, ಸಮಾರಂಭಕ್ಕೆ ಆಗಮಿಸಿ ಭಾಗವಹಿಸಿ *ರಂಗಭೂಮಿಯಿಂದ ಸಿನಿಮಾದೆಡೆಗೆ* ವಿಷಯ ಕುರಿತು ತುಂಬಾ ಅರ್ಥಪೂರ್ಣವಾಗಿ ವಿಷಯ ಮಂಡಿಸಿ ಮಾತನಾಡುತ್ತ "ಅನೇಕ ಕಲಾವಿದರು ರಂಗಭೂಮಿಯಲ್ಲಿ ಪಳಗಿ ಸಿನಿಮಾ ರಂಗಕ್ಕೆ ಬಂದಿದ್ದಾರೆ ಆದರೆ ಅವರು ರಂಗ ಭೂಮಿಯನ್ನ ಬಿಡದೆ ಮುಖ ಮಾಡಿರಬೇಕು, ನಟನೆಯ ಗಟ್ಟಿ ನೆಲೆ ರಂಗಭೂಮಿ, ಡಾ. ರಾಜ್ ಕುಮಾರ್ ಜನಪ್ರಿಯ ನಟರಾದರೂ ರಂಗಭೂಮಿಯಿಂದ ದೊರಗಿರಲಿಲ್ಲ, ರಂಗ ಭೂಮಿಯಲ್ಲಿ ಶಾಂತಿಯಿದೆ. ಮಹಾತ್ಮ ಗಾಂಧೀಜಿಯಂತೆ ಶಾಂತಿ ಮಂತ್ರದಿಂದ ಎಲ್ಲವನ್ನು ಗೆಲ್ಲಬೇಕು, CLEAR -NUCLEAR ಘೋಷಣೆಯಲ್ಲಿ ರಂಗಭೂಮಿ ಮತ್ತು ಸಿನಿಮಾ ಸಾಗಬೇಕು. ಪೋಷಕ ಕಲಾವಿದರು ಕಷ್ಟದಲ್ಲಿದ್ದಾರೆ ಅವರಿಗೆ ಸರ್ಕಾರದಿಂದ ನೆರವು ದೊರೆಯಬೇಕು ಆದರೂ ಕೆಲಾವಿದರು ಎದೆಗುಂದದೆ ಮುನ್ನುಗ್ಗುಬೇಕು ಎನ್ನುವ ಸಾರಾಂಶವನ್ನ ವ್ಯಕ್ತಪಡಿಸಿದರು, ಸುಮಾರು
ಎರಡೂವರೆ ಗಂಟೆಗಳ ಕಾಲ ನಡೆದ ಸಮಾರಂಭದಲ್ಲಿ 200 ಕ್ಕು ಹೆಚ್ಚು ಕಲಾವಿದರು, ಕಲಾಸಕ್ತರು ಕಿಕ್ಕಿರಿದು ಸೇರಿದ್ದರು. ರಂಗಭೂಮಿಯಿಂದ ಹಿರಿ -ಕಿರುತೆರೆಗೆ ಬಂದ ಕಲಾವಿದರಿಗೆ, ಸಂಗೀತ ನಿರ್ದೇಶಕ ಶ್ರೀ ಹಂಸಲೇಖ ಅವರಿಗೆ ಚಿತ್ರ ನಿರ್ದೇಶಕರಿಗೆ ಸಂಘದಿಂದ ಹೃದಯಸ್ಪರ್ಶ ಆತ್ಮೀಯವಾಗಿ ಸತ್ಕಾರಿಸಲಾಯಿತು. . ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ನಾಧ ಬ್ರಹ್ಮ ಹಂಸಲೇಖರವರು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘಕ್ಕೆ 50025/- ರೊಪಾಯಿಗಳ ದೇಣಿಗೆ ನೀಡುವುದಾಗಿ ಘೋಷಿಸಿದರು. ಶಿವಮೊಗ್ಗ ಭಾಸ್ಕರ್ ಮತ್ತು ನಾಗರಾಜ್ ಕಾರ್ಯಕ್ರಮ ನಿರೋಪಿಸಿದರು. ಕಾರ್ಯಕ್ರಮವನ್ನ ಸಂಘದ ಪರವಾಗಿ ನಟ ಶ್ರೀ ಮೂಗ್ ಸುರೇಶ್ ಸಂಯೋಜಿಸಿದ್ದರು ನಟ ದೊಡ್ಡಣ್ಣನವರು ಮಾರ್ಗದರ್ಶನ ನೀಡಿದ್ದರು.