ಮಧ್ಯಮ ವರ್ಗದ ಜನತೆ ತಮ್ಮ ಮಕ್ಕಳಿಗೆ ಕಲಿಸುವ ಪಾಠಗಳು ಅವರ ಜೀವನದಲ್ಲಿ ಪ್ರಮುಖ ಪರಿಣಾಮವನ್ನು ಬೀರುತ್ತವೆ ಹಾಗೂ ಭವಿಷ್ಯವನ್ನು ರೂಪಿಸುತ್ತವೆ. ಈ ಪಾಠಗಳು ಅವರ ನಡವಳಿಕೆ, ಜೀವನಕ್ಕೆ ಅವರು ನೀಡುವ ಮೌಲ್ಯಗಳು ಮತ್ತು ನೋಡುವ ದೃಷ್ಟಿಕೋನವನ್ನು ರೂಪಿಸಿ ಅವರನ್ನು ಯಶಸ್ವಿ ಮತ್ತು ನೆಮ್ಮದಿನ ಭವಿಷ್ಯದತ್ತ ಕರೆದೊಯ್ಯುತ್ತವೆ.
ಭಾರತೀಯ ಮಧ್ಯಮ ವರ್ಗದ ಪೋಷಕರು ತಮ್ಮ ಖರ್ಚುಗಳನ್ನು ಅತ್ಯಂತ ನೈಪುಣ್ಯದಿಂದ ನಿಭಾಯಿಸುವವರಾಗಿದ್ದಾರೆ. ಹೆಚ್ಚಿನ ಕುಟುಂಬಗಳಲ್ಲಿ ಮಾಸಿಕ ಖರ್ಚುಗಳನ್ನು ಮಾಡಬೇಕಾದ ಡೈರಿಯೂ ಇರುತ್ತದೆ. ಈ ವಿವರಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವ ಮೂಲಕ ಮಕ್ಕಳು ದುಂದುವೆಚ್ಚವನ್ನು ಮಾಡದಿರಲು ಕಲಿಯುತ್ತಾರೆ ಹಾಗೂ ಕಷ್ಟದ ದಿನಗಳಲ್ಲಿ ತಮ್ಮ ಪಾಲಿನ ಸಹಕಾರವನ್ನು ನೀಡಲು ಮಾನಸಿಕರಾಗಿ ದೃಢರಾಗುತ್ತಾರೆ ಹಾಗೂ ಹಣಕ್ಕೆ ತಾವು ನೀಡಬೇಕಾದ ಮಹತ್ವ ಮತ್ತು ಆದ್ಯತೆಗಳನ್ನೂ ಕಲಿತುಕೊಳ್ಳುತ್ತಾರೆ.
ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳು ಯಶಸ್ಸನ್ನು ಸಾಧಿಸುವಲ್ಲಿ ಪಾಲಿಸಬೇಕಾದ ಶ್ರದ್ಧೆ ಮತ್ತು ಪರಿಶ್ರಮದ ಮಹತ್ವವನ್ನು ಒತ್ತಿಹೇಳುತ್ತಾರೆ. ಅವರು ತಮ್ಮ ಮಕ್ಕಳಿಗೆ ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಸವಾಲು ಎದುರಾದಾಗ ಹಿಮ್ಮೆಟ್ಟದಿರಲು ಕಲಿಸುತ್ತಾರೆ.