ಕು|| ಸಹನಾ ಹೊಸಮನಿ ಭಾಸ್ಕರ್" ಭರತನಾಟ್ಯ ರಂಗಪ್ರವೇಶ"

VK NEWS
By -
0

ಬೆಂಗಳೂರು : ನೃತ್ಯ ದಿಶಾ ಟ್ರಸ್ಟ್ ರೂವಾರಿ 'ಕಲಾಭೂಷಿಣಿ ಗುರು ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ಕು|| ಸಹನಾ ಹೊಸಮನೆ ಭಾಸ್ಕರ್ ಭರತನಾಟ್ಯ ರಂಗ ಪ್ರವೇಶಕ್ಕೆ ಆಣೆಯಾಗಿದ್ದಾರೆ . ಇದೇ ಮಾರ್ಚ್ 31, ಭಾನುವಾರ ಸಂಜೆ 5:00 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ .

ಭರವಸೆಯ ಪ್ರತಿಭೆ : ಕು|| ಸಹನಾ ಕಳೆದ 15 ವರ್ಷಗಳಿಂದ ನೃತ್ಯ ಅಭ್ಯಸಿಸುತ್ತಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಜೂನಿಯರ್, ಸೀನಿಯರ್ ಹಾಗೂ ಗಂಧರ್ವ ಪರೀಕ್ಷೆ ಮಧ್ಯಮ ಪೂರ್ಣ ಗಳನ್ನು ಉತ್ತಮ ದರ್ಜೆಯಲ್ಲಿ ಮುಗಿಸಿದ್ದಾರೆ. ಪ್ರಸ್ತುತ ವಿದ್ವತ್ ಅಂತ್ಯ ತಯಾರಿಯಲ್ಲಿರುವ ಸಹನಾ ಭರವಸೆಯ ನೃತ್ಯ ಕಲಾವಿದೆ.

 ನೃತ್ಯ ದಿಶಾ ಸಂಸ್ಥೆಯ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಸಹನಾ ಸಂಸ್ಥೆಯ ನೃತ್ಯ ನೀರಾಜನ, ನೃತ್ಯ ಸಂಭ್ರಮ ಒಳಗೊಂಡು ಹಂಪಿ ಉತ್ಸವ, ದಸರಾ ಉತ್ಸವ, ದುಬೈನಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮ, G20 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

 ಎಂಬಿಎ ಪದವಿಧರೆ ಸಹನಾ ಪ್ರಸ್ತುತ ವೃತ್ತಿ ನಿರತರಾಗಿದ್ದಾರೆ. 

ಇವರ ರಂಗಪ್ರವೇಶಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಎಂ ಸೂರ್ಯ ಪ್ರಸಾದ್, ಶ್ರೀ ಎಸ್ ಕುಮಾರ್ ಬಂಗಾರಪ್ಪ , ಶ್ರೀ ಸೈಯದ್ ಸಲಾಉದ್ದೀನ್ ಪಾಶ, ಗುರು ಶ್ರೀ ಪ್ರಕಾಶ್ ಎಸ್ ಅಯ್ಯರ್, ಶ್ರೀ ಕೃಷ್ಣಮೂರ್ತಿ ಲಕ್ಷ್ಮಣ ಆಗಮಿಸಲಿದ್ದಾರೆ . 

 ಸಹನಾ ರಂಗ ಪ್ರವೇಶ ಪ್ರಸ್ತುತಿಗೆ ಗುರು ಶ್ರೀಮತಿ ದರ್ಶನಿ ಮಂಜುನಾಥ್ (ನಟ್ಟುವಾಂಗ), ವಿದುಷಿ ಶ್ರೀಮತಿ ಭಾರತಿ ವೇಣುಗೋಪಾಲ್ (ಗಾಯನ ), ವಿದ್ವಾನ್ ಎಸ್ ವಿ ಗಿರಿಧರ್ ( ಮೃದಂಗ ), ವಿದ್ವಾನ್ ಎಚ್.ಎಸ್. ವೇಣುಗೋಪಾಲ್ (ಕೊಳಲು), ವಿದ್ವಾನ್ ಕಾರ್ತಿಕ್ ವೈದಾತ್ರಿ (ರಿದಂ ಪ್ಯಾಡ್) ನಲ್ಲಿ ಸಹಕರಿಸಲಿದ್ದಾರೆ.

 ಈ ಕಾರ್ಯಕ್ರಮದಲ್ಲಿ ಕಲಾ ಪ್ರೋತ್ಸಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯುವ ಕಲಾವಿದೆಯನ್ನು ಆಶೀರ್ವದಿಸಬೇಕೆಂದು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಂಜುನಾಥ್ ರವರು ವಿನಂತಿಸಿದ್ದಾರೆ .

Post a Comment

0Comments

Post a Comment (0)