“ಮಹಿಳೆ ಅಬಲೆಯಲ್ಲ…ಸಬಲೆ…” ಶ್ರೀಮತಿ ಸವಿತಾ ಗಣೇಶ್‌ ಪ್ರಸಾದ್

VK NEWS
By -
0

ಒಂದೇ ಕಾರ್ಯಕ್ರಮದಲ್ಲಿ 130ನೇ ಪುಟ್ಟ ಮಗು ಕಥೆ ಕೇಳು ವಿಶೇಷ ಸಂಚಿಕೆ, ಜ್ಞಾನಶಿವದರ್ಶನ ಮತ್ತು ವಿಶ್ವ ಮಹಿಳಾ ದಿನಾಚರಣೆಯೂ ಸೇರಿದಂತೆ ಮೂರು ವಿಶೇಷಣಗಳ ಹೂರಣ… ಈ ಅಕ್ಷರ, ಕಥೆ ಗೀತ ಗಾಯನದ ಸಿಹಿಯೂಟದೊಳು ಮಿಂದೆದ್ದ ಸಭಿಕರು. 9.03.202


4 ರ ಶನಿವಾರದಂದು ಶಿವರಾತ್ರಿಯ ಅಂಗವಾಗಿ “ಜ್ಞಾನಶಿವದರ್ಶನ” ವಿಶ್ವಮಹಿಳಾ ದಿನಾಚರಣೆಯ ಸಂಭ್ರಮಾಚಣೆ ಹಾಗೂ ಎಂದಿನಂತೆ ಯಶಸ್ವಿ 13ನೇ ಪುಟ್ಟ ಮಗು ಕಥೆ ಕೇಳು ವಿಶೇಷ ಸಂಚಿಕೆಯ ಪ್ರಯುಕ್ತ ಖ್ಯಾತ ಸಾಹಿತಿಗಳಾದ ಡಾ|| ಅನುಸೂಯಾದೇವಿ, ಖ್ಯಾತ ವಾಗ್ಮಿಗಳಾದ ಶ್ರೀಮತಿ ಶಕುಂತಲಾ ಅಯ್ಯರ್‌, ವೈಧ್ಯ ರತ್ನ ಡಾ|| ಸಿ.ಎ.ಕಿಶೋರ್‌, ಜನಪ್ರಿಯ ವೈದ್ಯರಾದ ಶ್ರೀಮತಿ ಪ್ರಜ್ಞಾ ಹುಣಸೆ, ಕಾರ್ಪೋರೇಷನ್‌ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ರವಿಕುಮಾರ್‌, ಖ್ಯಾತ ರೇಖಿ ಚಿಕಿತ್ಸಕರಾದ ಶ್ರೀ ಚಂದ್ರಶೇಖರಯ್ಯ  ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಜಾನಪದ ಗಾಯಕಿ ಶ್ರೀಮತಿ ಸವಿತಾ ಗಣೇಶ್‌ ಪ್ರಸಾದ್‌ ರವರ ಉಪಸ್ಥಿತಿಯಲ್ಲಿ ಇಡೀ ಕಾರ್ಯಕ್ರಮ ವಿಶೇಷ ಕಳೆ ಕಟ್ಟುವಲ್ಲಿ ಯಶಸ್ವಿಯಾಗಿತ್ತು. 

ಕಳೆದ 25 ವರ್ಷಗಳಿಂದ ನಮ್ಮ ರಾಜ್ಯ, ಪರರಾಜ್ಯ, ನಮ್ಮ ದೇಶ, ವಿದೇಶಗಳಲ್ಲೂ ಸೇರಿದಂತೆ ಈವರೆವಿಗೂ ಹತ್ತು ಸಾವಿರಕ್ಕೂ ಹೆಚ್ಚು ಜಾನಪದ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ, ಒಂದೂಕಾಲು ತಾಸಿನ, 30 ಪದ್ಯಗಳನ್ನೊಳಗೊಂಡ “ಉಧೋ ಉಧೋ ಎಲ್ಲವ್ವ” ಏಕವ್ಯಕ್ತಿ ರಂಗ ಕಲಾ ವೈಭವದ, ಭಾರತ ಸರ್ಕಾರದಿಂದ ತಮ್ಮ ಹೆಸರಿನ ಅಂಚೆ ಚೀಟಿಯನ್ನು ಹೊರ ತಂದಿರುವಂತಹ ಸಾಧನೆಯ ಸಾಧಕಿ ಖ್ಯಾತಿಯ ಸವಿತಕ್ಕ ಎಂದೇ ಖ್ಯಾತರಾಗಿರುವ ಶ್ರೀಮತಿ ಸವಿತಾರವರು ಸೋಜುಗಾದ ದುಂಡು ಮಲ್ಲಿಗೆ ಮಾದಪ್ಪ ನಿನ್ನ ಮಂಡೆ ಮ್ಯಾಲ ಮಾಲಾ ಸೂಜಿ ಮಲ್ಲಿಗೆ ಎನ್ನುತ್ತಲೇ  ಮಾತನ್ನು ಆರಂಭಿಸಿ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಹೆತ್ತ ತಂದೆ, ಒಡಹುಟ್ಟಿದ ಅಣ್ಣ ಹೀಗೆ ಎಲ್ಲರೂ ಕೈಬಿಟ್ಟಾಗ ಸ್ವತ: ಗಾಯಕಿಯಾಗಿದ್ದ ತಮ್ಮ ತಾಯಿಯವರಾದ ಶ್ರೀಮತಿ ನೀಲಾಂಬಿಕೆರವರು ಹೇಗೆ ಆರ್ಥಿಕವಾಗಿ, ಮಾನಸಿಕವಾಗಿ ಬೆನ್ನೆಲುಬಾಗಿ ನಿಂತರು. ಈಗ ಸ್ವತ: ಕೀಬೋರ್ಡ್‌ ವಾದಕರಾಗಿರುವ ತಮ್ಮ ಪತಿ ಶ್ರೀ ಗಣೇಶ್‌ ಪ್ರಸಾದ್‌ ರವರು ಹೇಗೆ ಹೆಗಲಿಗೆ ಹೆಗಲು ನೀಡುತ್ತಿದ್ದಾರೆಂದು ಸ್ಮರಿಸುತ್ತಾ, ತಾಳ್ಮೆ ಹಾಗೂ ಛಲವಿದ್ದಲ್ಲಿ, ಮಾನಾಪಮಾನಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವಿದ್ದಲ್ಲಿ ಯಾವ ಹೆಣ್ಣು ಬೇಕಾದಾರೂ ಏನು ಬೇಕಾದರೂ ಸಾಧಿಸಬಹುದು. ಹೆಣ್ಣು ಎಂದಿಗೂ ಅಬಲೆಯಲ್ಲ ಆಕೆ ಎಂದಿಗೂ ಸಬಲೆ ಎನ್ನುತ್ತಾ ಕೇವಲ ಒಂದು ದಿನಕ್ಕೆ ಮಾತ್ರ ಮಹಿಳಾ ದಿನಾಚರಣೆ ಮೀಸಲಾಗಬಾರದು ನಿತ್ಯ ನೂತನವಾಗಬೇಕೆಂಬ ತಮ್ಮ ತುಂಬು ವಿಶ್ವಾಸದ  ಮಾತುಗಳಲ್ಲಿ ವ್ಯಕ್ತಪಡಿಸಿದರು. ನಂತರ “ನಿಂಬಿಯಾ ಬನಾದ ಮ್ಯಾಗಳ ಚಂದಮ ಚೆಂಡಾಡಿದ” ಜಾನಪದ ಗೀತೆಯನ್ನು ಹಾಡಿ ರಂಜಿಸಿದರಲ್ಲದೇ ಅಬಾಲವೃದ್ಧರಾಗಿ ಕಿಕ್ಕಿರಿದು ನೆರೆದಿದ್ದ ಸಭಿಕರ ಕೈಲೂ ಹಾಡಿಸಿದ್ದು ವಿಶೇಷವೆನಿಸಿತು. 



ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಅತಿಥಿಗಳೂ ತಮ್ಮ ಭಾಷಣದಲ್ಲಿ ಮರೆಯಾಗುತ್ತಿರುವ ಕಥೆ ಹೇಳುವ ಅಥವಾ ಕಥೆ ಕೇಳುವ ಇತಿಹಾಸವನ್ನು ತಮ್ಮದೇ ಆದ ಸ್ವಾನುಭವಾಮೃತದಲ್ಲಿ ನೆನಪಿಸಿಕೊಂಡರು. ಹೇಗೆ ಪರಮೇಶ್ವರ  ಅರ್ಧನಾರೀಶ್ವರನಾಗುವಲ್ಲಿ ತನ್ನ ದೇಹದ ಒಂದು ಭಾಗವನ್ನು ಪೂರ್ಣವಾಗಿ ಪತ್ನಿ ಪಾರ್ವತಿಗೆ ಅರ್ಪಿಸಿ  ತನ್ನ ಹೆಸರು ಹೇಳುವಲ್ಲಿ ಪಾರ್ವತಿ ಪರಮೇಶ್ವರ, ಉಮಾ ಮಹೇಶ್ವರ ಎಂದು ಕರೆಸಿಕೊಳ್ಳುವ ಪರಶಿವನ ಬಗ್ಗೆ ಪ್ರಸ್ತಾಪಿಸಿದರು. ಹೆಣ್ಣಿನ, ಹೆಣ್ತನದ ಮಹತ್ವದ ಹಿರಿಮೆಯನ್ನು ಹತ್ತು ಹಲವು ದೃಷ್ಟಾಂತಗಳಿಂದ  ಬಣ್ಣಿಸಿದರು.  ತವರು ಮನೆಯ ಸುಖ, ಸಂಭ್ರಮವವನ್ನೇ ಕಾಣದ ಕೆಲವು ಅತಿಥಿ ಗಣ್ಯರು ಈ ಗ್ರಂಥದ ಗುಡಿಯನ್ನೇ ತಮ್ಮ ತವರಮನೆಯೆಂದು ಹೆಮ್ಮೆಯಿಂದ ಹೇಳಿಕೊಂಡರು. 

ಸಂಭ್ರಮ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಸಂಜೆಯ ಕುಮಾರಿ ಕೃತಿ ಎಸ್.ಶರ್ಮಾರ, ಕುಮಾರಿ ಸಂಜನಾ ಆಚಾರ್‌ ಹಾಗೂ ಬೇಬಿ ಶಾರ್ವರಿ ಯರ ನೃತ್ಯ ನೃತ್ಯ ವೈಭವದಲ್ಲಿಝಗಮಗಿಸಿತು. ವೃತ್ತಿಪರ ಜಾನಪದ ಗಾಯಕರಿಂದ ಪುಳಕಿತಗೊಳಿಸುವ ಹಾಡುಗಾರಿಕೆ,  84ರ ಹರೆಯದ ಶ್ರೀ ಸುಬ್ರಮಣ್ಯಾಚಾರ್‌ ರವರಿಂದ ಪುಟ್ಟ ಮಕ್ಕಳಿಗೆ ಕಥೆ ಹೇಳಿದ ರೀತಿ, ಎಂದಿನಂತೆ ಎ.ವಿ.ಗೋಪಾಲ್‌ ರವರಿಂದ ಒಗಟು, ಗಾದೆಗಳ ಪ್ರಸ್ತುತಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಖ್ಯಾತ ಆಕ್ಯುಪ್ರಶರ್‌ ಥೆರಪಿಸ್ಟ್‌ ಶ್ರೀ ಜಿ.ಎಂಚಂದ್ರಶೇಖರಯ್ಯ ರವರಿಂದ ಉಚಿತ ರೇಖಿ ಚಿಕಿತ್ಸೆ ಮತ್ತು ಪರಿಹಾರ, ಪಾಲ್ಗೊಂಡಿದ್ದ ಎಲ್ಲಾ ಅತಿಥಿಗಣ್ಯರಿಗೂ ಅತ್ಯಂತ ಆತ್ಮೀಯತೆಯ, ಆಪ್ಯಾಯತೆಯ ಸನ್ಮಾನ, ಸತ್ಕಾರ,  ನೆರೆದಿದ್ದ ಎಲ್ಲಾ ಮಹಿಳೆಯರಿಗೂ ಅರಿಶಿನ ಕುಂಕುಮ ಫಲತಾಂಬೂಲ ಸಮರ್ಪಣೆ, ಕೊನೆಯಲ್ಲಿ ಬಿಸಿ ಬಿಸಿ ಚೌಚೌಬಾತ್‌ ಸೇವನೆ ಹೀಗೆ ಹತ್ತು ಹಲವು ವೈಶಿಷ್ಠಪೂರ್ಣ, ಭಿನ್ನ ಭಿನ್ನ ಕಾರ್ಯಕ್ರಮಗಳು  ಈ ಎಲ್ಲಾ ಕಾರ್ಯಕ್ರಮಗಳ ರೂವಾರಿ ನಾಡಿನ ಶ್ರೇಷ್ಠ ಗ್ರಂಥಪಾಲಕರಾದ ಶ್ರೀ ಎಸ್.‌ ಆನಂದ್‌ರವರ, ರಂಗಸಾಗರ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ಶ್ರೀ ಆರ್.ದೇವರಾಜ್‌, ಸಂಭ್ರಮ ಸಾಂಸ್ಕೃತಿಕ ವೇದಿಕೆಯ ಶ್ರೀ ಪ್ರಕಾಶ್ ಸ್ವಸ್ಥ ಸಮೃದ್ಧ ಭಾರತದ ಡಾ.ಸಿ.ಎ.ಕಿಶೋರ್‌ ಮೊದಲಾದ ಮಹನೀಯರು ಸೇರಿ ಹಮ್ಮಿಕೊಂಡಿದ್ದ ಈ ಯಶಸ್ವಿ ಕಾರ್ಯಕ್ರಮಗಳ ಸೆಳೆತ ಎಷ್ಟರಮಟ್ಟಿಗಿತ್ತೆಂದರೆ ರಾತ್ರಿ ಗಂಟೆ ಹತ್ತಾಗಿದ್ದು ತಿಳಿಯಲೇ ಇಲ್ಲ.  

-ವಿ.ಎಸ್.ಕುಮಾರ್. ಎಂ.ಎ.ಕನ್ನಡ.

78923 46105 / 98446 04465


Post a Comment

0Comments

Post a Comment (0)