ಮಾಧ್ಯಮ ಮಿತ್ರರ ಗಮನಕ್ಕೆ :

VK NEWS
By -
0

ಚುನಾವಣಾ ಜರೂರು



ಭಾರತ ಚುನಾವಣಾ ಆಯೋಗವು, ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆ – 2024ರ ಪೂರ್ವಭಾವಿ ತಯಾರಿ ಆರಂಭಿಸಿದ್ದು, ಚುನಾವಣಾ ಸಂದರ್ಭದಲ್ಲಿ ಮತದಾನ ಮತ್ತು ಮತ ಎಣಿಕೆಯ ವರದಿಗಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ಪತ್ರಗಳನ್ನು ನೀಡಲು ಅನುಕೂಲವಾಗುವಂತೆ ಮಾಧ್ಯಮದವರ ಮಾಹಿತಿಯನ್ನು ಒದಗಿಸುವಂತೆ ಚುನಾವಣಾ ಆಯೋಗವು ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮಾನ್ಯತೆ ಹೊಂದಿದ  (Accreditation Card Holder)  ಹಾಗೂ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳ ಮಾಧ್ಯಮ ಪ್ರತಿನಿಧಿಗಳು ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ ಹೆಸರು, ಪದನಾಮ, ಮೊಬೈಲ್ ಸಂಖ್ಯೆ,      ಇ-ಮೇಲ್ ವಿಳಾಸ  ಹಾಗೂ 4 ಭಾವಚಿತ್ರಗಳೊಂದಿಗೆ ಈ ಪತ್ರಕ್ಕೆ ಲಗತ್ತಿಸಿರುವ ನಮೂನೆಯಲ್ಲಿ ಸಿದ್ದಪಡಿಸಿ,  ದಿನಾಂಕ : 15-03-2024ರ ಒಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಯಲ್ಲಿ ಸಲ್ಲಿಸುವುದು. ತಡವಾಗಿ ಸಲ್ಲಿಸುವ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ.  

ವಿಶೇಷ ಸೂಚನೆ:
1. ಮಾಧ್ಯಮ ಪ್ರತಿನಿಧಿಗಳ ಪಟ್ಟಿಯನ್ನು ಭಾರತ ಚುನಾವಣಾ ಆಯೋಗಕ್ಕೆ ಕಳುಹಿಸಬೇಕಾಗಿರುವ ಕಾರಣ ಎಲ್ಲಾ ಕಾಲಂಗಳನ್ನು ಆಂಗ್ಲ ಭಾμÉಯಲ್ಲಿಯೇ ತುಂಬತಕ್ಕದ್ದು. ಮಾಧ್ಯಮ ಪ್ರತಿನಿಧಿಗಳು ಕಡ್ಡಾಯವಾಗಿ 4 ಭಾವಚಿತ್ರಗಳನ್ನು ಸಲ್ಲಿಸುವುದು. 4 ಭಾವಚಿತ್ರಗಳನ್ನು ಸಲ್ಲಿಸದ ಮಾಧ್ಯಮ ಪ್ರತಿನಿಧಿಗಳ ಹೆಸರನ್ನು ಶಿಫಾರಸ್ಸು ಮಾಡಲು ಸಾಧ್ಯವಾಗುವುದಿಲ್ಲ. ನಿಗದಿತ ಸಮಯದ ನಂತರ ಸಲ್ಲಿಸುವ  ಮಾಧ್ಯಮ ಪ್ರತಿನಿಧಿಗಳ ಪಟ್ಟಿಯನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲ.  


2. ಮಾಧ್ಯಮ ಪ್ರತಿನಿಧಿಗಳ ಎರಡು ಪಟ್ಟಿಯನ್ನು ಸಿದ್ದಪಡಿಸಿ ಎರಡೂ ಪಟ್ಟಿಗೂ ಮಾಧ್ಯಮ ಪ್ರತಿನಿಧಿಗಳ ಭಾವಚಿತ್ರವನ್ನು ಲಗತ್ತಿಸಿ ಒಂದು ಮೂಲ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ  ಹಾಗೂ ಇನ್ನೊಂದು ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕಾಗಿರುತ್ತದೆ. ಉಳಿದ ಎರಡು ಭಾವಚಿತ್ರಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ಚುನಾವಣಾ ಪ್ರವೇಶ ಪತ್ರ ಪಡೆದ ನಂತರ ಒಂದು ಭಾವಚಿತ್ರವನ್ನು Polling Pass     ಗೆ ಮತ್ತು ಇನ್ನೊಂದು ಭಾವಚಿತ್ರವನ್ನು  Counting Pass  ಗೆ ಲಗತ್ತಿಸಿ ಚುನಾವಣಾ ಆಯೋಗವು ಸೂಚಿಸುವ ಸಂಬಂಧಿಸಿದ ಚುನಾವಣಾಧಿಕಾರಿಗಳಿಂದ ಸಹಿ ಮತ್ತು ಮೊಹರು ಪಡೆಯಬೇಕಾಗಿರುವುದರಿಂದ ಕಡ್ಡಾಯವಾಗಿ 4 ಭಾವಚಿತ್ರಗಳನ್ನು ಸಲ್ಲಿಸುವುದು.

Post a Comment

0Comments

Post a Comment (0)