ಓದುಗರೇ...
ನಿಮಗೆಲ್ಲ ತಿಳಿದಿರುವ ಹಾಗೆ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿವಸ.ಆದರೆ ಮಾರ್ಚ್ ತಿಂಗಳೆಲ್ಲ ಮಹಿಳೆಯರು ಈ ಸಂಭ್ರಮ ಆಚರಿಸುತ್ತಾರೆ.ಅದರಂತೆ ಮಾರ್ಚ್ 16 ರಂದು BPac ಸಂಸ್ಥೆಯು CGI ಸಹಯೋಗದಲ್ಲಿ ರಂಗೋಲಿ ಮೆಟ್ರೋ ಆರ್ಟ್ ಸೆಂಟರ್, ಮೆಟ್ರೋ ಸ್ಟೇಷನ್ MG ರಸ್ತೆ ಯಲ್ಲಿ ಒಂದು ಸಮಾರಂಭ ಏ ರ್ಪಡಿಸಿತ್ತು.ಆ ದಿನ ಸಾಧಕಿಯರಿಗೆ ಸನ್ಮಾನ ಏ ರ್ಪಾಟಗಿತ್ತು.ಮಾರ್ಚ್ 16 ರ ದಿನದ ಸಮಾರಂಭದ ಮುಖ್ಯ ಅತಿಥಿ ಶ್ರೀಮತಿ ಪ್ರಿಯಾಂಕ ಉಪೇಂದ್ರ ರವರು.ಹಾಗೆಯೇ ಷಣ್ಮುಖ ಪ್ರಿಯ ಅಶೋಕನ್, ಶ್ರೀವಿದ್ಯಾ ನಟರಾಜ್,ಸುಮತಿ ಕೃಷ್ಣವನ್ನನ್,ರವರುಗಳು CGI ಪರವಾಗಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದರು.ಮಿಮಿ ಪಾರ್ಥಸಾರಥಿ ಹಾಗೂ ಪ್ರಸಾದ್ ಬಿಡಪ,ರವರುಗಳು ಮುಖ್ಯ ಅತಿಥಿಗಳಾಗಿದ್ದರು.ಸಮಾರಂಭ 10 :30 ಗಂಟೆ ಸುಮಾರಿಗೆ ಬೆಳಿಗ್ಗೆ ಆರಂಭವಾಯಿತು.ಸುಮಾರು 25 ಉಚಿತ ಸ್ಟಾಲ್ ಗಳಿಗೆ ಮಹಿಳ ಉದ್ಯಮಿಗಳಿಗೆ ಅವಕಾಶ ನೀಡಲಾಗಿತ್ತು.ಸಮಾರಂಭ ಉದ್ಘಾಟನೆ ನಂತರ ಅತಿಥಿ ಗಳೆಲ್ಲ ಮಾತನಾಡಿದರು.ಶ್ರೀಮತಿ ಪ್ರಿಯಾಂಕ ರವರು ಸ್ವಚ್ಚ ಕನ್ನಡ ದಲ್ಲಿ ಮಾತನಾಡಿದ್ದು ನಮಗೆಲ್ಲ ಖುಷಿ ತಂದಿತು.ನಂತರ ಇಬ್ಬರೂ ಮಹಿಳಾ bike ಸವಾರರು,ಇಬ್ಬರೂ ಮಹಿಳಾ ಆಟೋ ಚಾಲಕರು ಹಾಗೂ ಇಬ್ಬರು ಮಹಿಳಾ ಕಂಟೆಂಟ್ ಕ್ರೀಯೇಟರ್ಗಳಿಗೆ ಸಾಧಕಿ ಯರೆಂದು ಸನ್ಮಾನ ಮಾಡಲಾಯಿತು.
ನಂತರ CGI band ನಿಂದ ಸಂಗೀತ, ಸ್ಪಷ್ಟ ತಂಡದಿಂದ ನೃತ್ಯ, ಬೀದಿ ನಾಟಕ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಸೋನು ವೇಣುಗೋಪಾಲ್ ರವರಿಂದ ಹಾಸ್ಯ ಕಾರ್ಯಕ್ರಮವು ಇತ್ತು.
ನಡುವೆ ಸ್ಟಾಲ್ ಗಳಿಗೆ ಜನರು ಬೇಟಿ ನೀಡುತ್ತಿದ್ದರು.ಸಂಜೆಗೆ ಕಾರ್ಯಕ್ರಮದ ಕಡೆಯಲ್ಲಿ ಎಲ್ಲ ಸಹಭಾಗಿಗಳಿಗೆ ಗೌರವಿಸಲಾಯಿತು.
ಒಟ್ಟಿನಲ್ಲಿ ಮಹಿಳೆಯರಿಗಾಗಿ ಒಳ್ಳೆಯ ಸಮಾರಂಭ ಹಾಗೂ ಮಹಿಳಾ ಉದ್ಯಮಿಗಳಿಗೆ ಉಚಿತ ಸ್ಟಾಲ್ ನೀಡಿದ್ದು ಅವರಿಗೆಲ್ಲ ಒಳ್ಳೆಯ exposure ಸಿಕ್ಕಂತಾಯಿತು.
B Pac ಮುಂಬರುವ ದಿನಗಳಲ್ಲಿ ಇನ್ನೂ ಒಳ್ಳೆಯ ಸಮಾರಂಭ ನಡೆಸಲಿ.ಒಳ್ಳೆಯ ಸಹಭಾಗಿತ್ವ ಇವರಿಗೆ ಸಿಗಲಿ ಎಂದು ನಾವೂ ಆಶಿಸೋಣ.ಹಾಗೂ ನಾವು ಇವರಿಗೆ ಬೆಂಬಲ ನೀಡೋಣ.
ರಾಧಿಕ ಜಿ ಎನ್ 7019990492