ಚಿಂತಾಜನಕ ಸ್ಥಿತಿಯಲ್ಲಿ ಬೆಂಗಳೂರಿನ ಆಸ್ಪತ್ರೆಗಳು! ದುಪ್ಪಟ್ಟು ದರದ ಟ್ಯಾಂಕರ್ ನೀರೇ ಆಧಾರ
By -
March 11, 2024
0
ನೀರಿನ ಅಭಾವ ಯಾವೆಲ್ಲಾ ರೀತಿಯ ಸಂಕಷ್ಟಗಳನ್ನು ಸೃಷ್ಟಿಸಬಹುದು ಎಂದು ಊಹಿಸೋದಕ್ಕೂ ಸಾಧ್ಯವಿಲ್ಲ. ಆಸ್ಪತ್ರೆಗಳಲ್ಲಂತೂ ನೀರಿನ ಅಗತ್ಯತೆ ತುಂಬಾನೇ ಇರುತ್ತೆ. ಆದರೆ ಸೂಕ್ತವಾಗಿ ನೀರು ಪೂರೈಕೆ ಆಗದೆ ವೈದ್ಯರು ವೈದ್ಯಕೀಯ ಸೇವೆಗಳನ್ನು ಸುಗಮವಾಗಿ ನೀಡಲು ಸಾಧ್ಯವಾಗ್ತಿಲ್ಲ. ಜಲಮಂಡಳಿ ನೀರು ಬಿಡ್ತಿಲ್ಲ, ಬೋರ್‌ವೆಲ್‌ಗಳಲ್ಲಿ ನೀರಿಲ್ಲ.. ಇಂಥಾ ಸಂದಿಗ್ಧ ಸನ್ನಿವೇಶವೇ ಟ್ಯಾಂಕರ್ ಮಾಲೀಕರಿಗೆ ವರವಾಗಿದ್ದು, ದುಬಾರಿ ದರ ವಿಧಿಸಿ ನೀರು ಪೂರೈಸುತ್ತಿದ್ದಾರೆ. ಹೀಗಾಗಿ, ಆಸ್ಪತ್ರೆ ಆಡಳಿತ ಮಂಡಳಿ ಒತ್ತಡಕ್ಕೆ ಸಿಲುಕಿದೆ