ಬೆಂಗಳೂರು ನಗರದ ಮಹದೇವಪುರ ಪೊಲೀಸ್ ಠಾಣಾ ಸರಹದ್ದಿನ ಪಿರ್ಯಾದುದಾರರ ಮನೆಯಲ್ಲಿ ದಿನಾಂಕ:19/03/2024 ರಂದು ಯಾರು ಇಲ್ಲದ ಸಮಯದಲ್ಲಿ ಡೋರ್ ಪಕ್ಕದಲ್ಲಿ ಇಟ್ಟಿದ್ದ ಕೀ ಮುಖಾಂತರ ಬಾಗಿಲನ್ನು ತೆಗೆದು ಮನೆಯಲ್ಲಿದ್ದ ಸುಮಾರು ₹ 6,00,000/- ಬೆಲೆ ಬಾಳುವ ಒಟ್ಟು 103 ಗ್ರಾಂ ಚಿನ್ನಾಭಾರಣಗಳನ್ನು ಯಾರೋ ಅಪರಿಚಿತರು ಕಳವು ಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಮನೆ ಕಳವು ಪ್ರಕರಣ ದಾಖಲು ಮಾಡಿರುತ್ತಾರೆ.
ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ₹ 6,00,000/- ಬೆಲೆ ಬಾಳುವ ಒಟ್ಟು 103 ಗ್ರಾಂ ಚಿನ್ನಾಭಾರಣಗಳನ್ನು ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ. ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಕ್ಕೆ ಪಡೆದ ವ್ಯಕ್ತಿಯು ಎಮ್‍ಓಬಿ (ಒಔಃ) ವ್ಯಕ್ತಿಯಾಗಿದ್ದು, ಈತನ ಮೇಲೆ ರಾಮಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಲ್ಯಾಪ್‍ಟಾಪ್ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ವಿಚಾರಣೆ ವೇಳೆ ಸದರಿ ವ್ಯಕ್ತಿಯು ಮಖ್ಯವಾಗಿ ಮಹದೇವಪುರ, ಮಾರತ್ತಹಳ್ಳಿ. ಬೆಳಂದೂರು, ಕೆ.ಆರ್ ಪುರ ಕಡೆಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ದೂರದಿಂದಲೇ ಖಾತರಿಪಡಿಸಿಕೊಂಡು ಯಾರೂ ಇಲ್ಲದೇ ಇರುವ ಸಮಯದಲ್ಲಿ ಮನೆಯ ಲಾಕ್ ತೆಗೆದು ಮನೆಯಲ್ಲಿದ್ದ ಬೆಲೆ ಬಾಳುವ ಚಿನ್ನಾಭಾರಣಗಳನ್ನು ಕಳ್ಳತನ ಮಾಡುವ ಪ್ರವೃತ್ತಿವುಳ್ಳವನಾಗಿರುವ ಬಗ್ಗೆ ತಿಳಿದು ಬಂದಿರುತ್ತದೆ. ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ವೈಟ್‍ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ಶಿವಕುಮಾರ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀಮತಿ. ಕವಿತಾ.ಎಂ.ಸಿ, ಸಹಾಯಕ ಪೊಲೀಸ್ ಆಯುಕ್ತರು, ವೈಟ್‍ಫೀಲ್ಡ್ ಉಪ ವಿಭಾಗ ರವರ ನೇತೃತ್ವದಲ್ಲಿ, ಮಹದೇವಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.