ಸಾರ್ವಜನಿಕರಿಗೆ ಪಿತ್ತಕೋಶ, ಪ್ನ್ಯಾಕ್ರಿಯಾಸ್, ಮೂತ್ರಕೋಶ, ಮೂತ್ರನಾಳ ಕಲ್ಲಿನ ಕುರಿತು ಸಾರ್ವಜನಿಕರಿಗೆ ಉಚಿತ ತಪಾಸಣೆ, ಜಾಗೃತಿ ಅಭಿಯಾನ

VK NEWS
By -
0



ಪುಣ್ಯ ಆಸ್ಪತ್ರೆ ವತಿಯಿಂದ ಜನರಿಗೆ ದೇಹದಲ್ಲಿ ಸ್ಚೋನ್(ಕಲ್ಲು)ಗಳು ಶೇಖರಣೆಯಾಗಿ ಮಾನವನ ದೇಹಕ್ಕೆ ತೊಂದರೆ ಉಂಟು ಮಾಡುತ್ತದೆ ಅದ್ದರಿಂದ ಸಾರ್ವಜನಿರಿಗೆ ಸ್ಟೋನ್ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ.

ಕಿಡ್ನಿ ಸ್ಟೋನ್, ಪಿತ್ತಕೋಶ ಕಲ್ಲು, ಮೆೋದೋಜಿರಕ ಗ್ರಂಥಿ ಅಂಗದಲ್ಲಿ(ಪ್ನ್ಯಾಕ್ರಿಯಾಸ್ )ಕಲ್ಲು, ಮೂತ್ರಕೋಶ, ಮೂತ್ರನಾಳದಲ್ಲಿ ಸಾಮಾನ್ಯವಾಗಿ ದೇಹದಲ್ಲಿ ಸಂಗ್ರಹವಾಗುತ್ತದೆ ಇದರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಪುಣ್ಯ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ||ನಾಗಾರಾಜ್ ಪುಟ್ಟಸ್ವಾಮಿರವರು, ಡಾ||ಪುಣ್ಯವತಿ ನಾಗರಾಜ್ ರವರು, ಡಾ||ಕುಶಾಲ್, ಡಾ||ಆನಿಲ್ ಕುಮಾರ್, ಡಾ||ನಿಶೋರ್, ಡಾ||ರಕ್ಷಿತಾ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಇದೇ ಸಂದರ್ಭದಲ್ಲಿ ಡಾ||ಪುಣ್ಯವತಿ ನಾಗರಾಜ್ ರವರು ಮಾತನಾಡಿ ಮನುಷ್ಯ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು, ವಯೋಸಹಜದಿಂದ ಖಾಯಿಲೆ ಬರುವ ಸಾಧ್ಯತೆ ಇದೆ.

ದೇಹದಲ್ಲಿ  ಪ್ನ್ಯಾಕ್ರಿಯಾಸ್, ಕಿಡ್ನಿಸ್ಟೋನ್ ಮತ್ತು ಮೂತ್ರಕೋಶ, ಮೂತ್ರನಾಳದಲ್ಲಿ ಕಲ್ಲು ಸಂಗ್ರಹವಾಗುತ್ತದೆ. ತಪಾಸಣೆ ಮಾಡಿ ಔಷಧಿ ಮಾತ್ರೆಗಳಿಂದ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಕಲ್ಲುಗಳನ್ನು ಕರಗುವುದು ಮತ್ತು ತೆಗೆಯಲಾಗುವುದು.


ಪ್ರತಿಯೊಬ್ಬರು ಒಂದು ಗಂಟೆ ಕಾಲ ಉತ್ತಮ ಆಹಾರ ಪದ್ದತಿ, ವ್ಯಾಯಮಾ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಹಾಗೂ ಕಾಲೇಜುಗಳಲ್ಲಿ ಮತ್ತು ನಮ್ಮ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಕೊಂಡು ಬರಲಾಗುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಾಣವಾದಗ ಮಾತ್ರ ದೇಶ ಸಮೃದ್ದವಾಗಿ ಬೆಳಯುತ್ತದೆ ಎಂದು ಹೇಳಿದರು.

ಡಾ||ನಾಗರಾಜ್ ಪುಟ್ಟಸ್ವಾಮಿ ರವರು ಮಾತನಾಡಿ ನಮ್ಮ ದೇಶದಲ್ಲಿ ವೈದ್ಯರನ್ನ ದೇವರಂತೆ ಕಾಣುತ್ತಾರೆ, ಅವರ ನೋವುಗಳಿಗೆ, ಮಾನಸಿಕ ತೊಂದರೆಗಳಿಗೆ ವೈದ್ಯರ ಬಳಿ ಹೇಳುತ್ತಾರೆ. ರೋಗಿಯ ರೋಗ ವಾಸಿ ಮಾಡುವ ಜೊತೆಯಲ್ಲಿ ಅವರ ಆತ್ಮಸ್ಥರ್ಯ ತುಂಬುವ ಕೆಲಸ ವೈದ್ಯರು ಮಾಡುತ್ತಾರೆ.ಕ್ಯಾಲಿಯಂ ಮತ್ಕು ಯೂರಿಯ್ ಆಸಿಡ್ ಕಾರಣದಿಂದ ದೇಹದಲ್ಲಿ ಕಲ್ಲು ಶೇಖರಣೆಯಾಗುತ್ತದೆ.


ವೈದ್ಯರುಗಳಿಂದ ತಪಾಸಣೆ ಮಾಡಿಸಿಕೊಳ್ಳಿಬೇಕು, ಯಾವ ಕಾರಣದಿಂದ ಕಲ್ಲು ಸಂಗ್ರಹವಾಗಿದೆ ಎಂದು ಸ್ಯಾನಿಂಗ್ ನಿಂದ ತಿಳಿಯುತ್ತದೆ. ಮಾತ್ರೆ ಅಥವಾ ಅಪರೇಷನ್ ಮೂಲಕ ಕಲ್ಲುಗಳನ್ನು ತೆಗೆದು ರೋಗ ಗುಣಪಡಿಸಬಹುದು.


ಕಳೆದ 25ವರ್ಷಗಳಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಿಕೊಂಡು ಬರಲಾಗುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂಬುದು ಪುಣ್ಯ ಆಸ್ಪತ್ರೆಯ ಗುರಿಯಾಗಿದೆ. ಇ.ಸಿ.ಜಿ.ಮತ್ತು ರಕ್ತ ಪರೀಕ್ಷೆ, ಸ್ಯಾನಿಂಗ್ , ಏಕ್ಸರೇ ಸಂಪೂರ್ಣವಾಗಿ  ಉಚಿತವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

Post a Comment

0Comments

Post a Comment (0)