ಹಾಸನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಬೆಂಗಳೂರು ತಂಡದ ಟೀ ಶರ್ಟ್ ಅನಾವರಣ

VK NEWS
By -
0

 ಹಾಸನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಬೆಂಗಳೂರು ತಂಡದ ಟೀ ಶರ್ಟ್ ಅನಾವರಣ : ವೈ.ಎಸ್.ಎಲ್. ಸ್ವಾಮಿ ಸಾರಥ್ಯದ ತಂಡ ಹ್ಯಾಟ್ರಿಕ್ ಸಾಧನೆ ಮಾಡಲಿ – ಶಿವಾನಂದ ತಗಡೂರು

ಬೆಂಗಳೂರುಏ,11; ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ-KUWJ) ದಿಂದ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಏ.12 ಮತ್ತು 13ರಂದು ಏರ್ಪಡಿಸಿರುವ ಕ್ರಿಕೆಟ್ ಪಂದ್ಯಾವಳಿಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬೆಂಗಳೂರು ತಂಡದ ಟೀ ಶರ್ಟ್ ಹಾಗೂ ಕ್ರೀಡಾ ಪರಿಕರಗಳನ್ನು ಅನಾವರಣಗೊಳಿಸಿದರು.



ನಗರದ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಆಟಗಾರರಿಗೆ ಟೀ ಶರ್ಟ್, ಶೂ ವಿತರಿಸಿ ಮಾತನಾಡಿದ ಅವರು, ಕ್ರೀಡಾ ಹಬ್ಬದಲ್ಲಿ ಬೆಂಗಳೂರು ಕಾರ್ಯನಿರತ ಸಂಘದ ತಂಡ ವೈ.ಎಸ್.ಎಲ್ ಸ್ವಾಮಿ ಸಾರಥ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಹ್ಯಾಟ್ರಿಕ್ ಸಾಧನೆ ಮಾಡುವಂತಾಗಲಿ. ಈಗಾಗಲೇ ಮಂಡ್ಯ ಮತ್ತು ಮಂಗಳೂರಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೆಂಗಳೂರು ತಂಡ ಗದ್ದಿದೆ. ಸತತ ಮೂರನೇ ಬಾರಿಗೆ ವಿಜಯಶಾಲಿಯಾಗುವಂತೆ ಹಾರೈಸಿದರು.

ಈ ಬಾರಿ ಎಲ್ಲಾ ತಂಡಗಳು ಉತ್ತಮ ಅಭ್ಯಾಸ ನಡೆಸುತ್ತಿದ್ದು, ಪಂದ್ಯಾವಳಿ ಅತ್ಯಂತ ಕಠಿಣ ಪೈಪೋಟಿಯಿಂದ ಕೂಡಿರಲಿದ್ದು, ಉತ್ತಮ ಪಂದ್ಯಗಳಿಗೆ ಟೂರ್ನಿ ಸಾಕ್ಷಿಯಾಗಲಿದೆ. ಹಾಸನದಲ್ಲಿ ಪ್ರತಿಯೊಬ್ಬರ ಪತ್ರಕರ್ತರು ಕ್ರೀಡಾ ಸ್ಫೂರ್ತಿ ಮೆರೆಯುವಂತಾಗಲಿ ಎಂದರು.

Adversisement


ಈ ಸಂದರ್ಭದಲ್ಲಿ ಬೆಂಗಳೂರು ಕಾರ್ಯನಿರತ ಸಂಘದ ತಂಡದ ಸದಸ್ಯರಾದ ವಿ. ನಂಜುಂಡಪ್ಪ.ವಿ. ಧ್ಯಾನ್ ಪೊಣ್ಣಚ್ಚ, ಮಂಜುನಾಥ್, ಗಿರೀಶ್ ಗರಗ, ಶಿವರಾಜ್, ಭಾರತಿ ರಾಜನ್ ಮತ್ತಿತರರು ಉಪಸ್ಥಿತರಿದ್ದರು.


Post a Comment

0Comments

Post a Comment (0)