2024 ರ ಸುಪ್ರೀಂ ಕೋರ್ಟ್ ಆದೇಶವನ್ನ ಉಲ್ಲೇಖಿಸಿ ಹೊಸ ಸುತ್ತೋಲೆ…!
ತಮ್ಮ ಇಲಾಖೆಯಲ್ಲಿ ಯಾವುದೇ ಮುಂಜಾಗ್ರತೆ ಇಲ್ಲದೆ ಸಿಬ್ಬಂದಿಗಳು ಸಾಯ್ತಿದ್ರು. ಸರ‍್ವಜನಿಕರಿಗೆ ತೊಂದರೆ ಆಗ್ತಿದ್ರು. ಲೋಡ್ ಶೆಡ್ಡಿಂಗ್ ನಿಂದ ರೈತರು ಸಂಕಷ್ಟವಾಗುತ್ತಿದ್ರು. ಯಾವುದೇ ತಲೆಕೆಡೆಸಿ ಕೊಳ್ತಿಲ್ಲ. ಆದ್ರೆ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ
ಕರ್ನಾಟಕದ ಜನರಿಗೆ ಬಂಪರ್ ಶಾಕ್ ಕೊಡೋಕೆ ಇಂದನ ಇಲಾಖೆ ಮುಂದಾಗಿದೆಯೇ?.
ರಾಜ್ಯಾದ್ಯಂತ ಯಾವುದೇ ವಾಣಿಜ್ಯ, ವಸತಿ ಕಟ್ಟಡಗಳು ಸ್ವಾಧೀನಾನುಭವ ಪತ್ರ (ಒಸಿ) ಹೊಂದಿಲ್ಲದಿದ್ದರೆ ವಿದ್ಯುತ್ ಸಂರ‍್ಕ ನೀಡಬಾರದು ಎಂದು ಸುಪ್ರೀಂಕರ‍್ಟ್ ತರ‍್ಪನ್ನು ಉಲ್ಲೇಖಿಸಿ ರ‍್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೊರಡಿಸಿರುವ ಆದೇಶವನ್ನು ಪಾಲಿಸುವ ಕುರಿತಾಗಿ ಬೆಸ್ಕಾಂ ಅಧಿಕೃತ ನೋಟಿಫಿಕೇಶನ್ ಒಂದನ್ನ ಈಗ ಹೊರಡಿಸಿದೆ.
ರಾಜ್ಯದ ಎಲ್ ಎಸ್ಕಾಂಗಳು ಇದನ್ನು ಪಾಲಿಸಬೇಕಾಗಿದೆ. ಸುಪ್ರೀಂ ಕರ‍್ಟ್ ತನ್ನ 2024ರ ಡಿ.17ರ ಆದೇಶದಲ್ಲಿ ಅನಧಿಕೃತವಾಗಿ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನರ‍್ಮಾಣಗೊಳ್ಳುತ್ತಿರುವ ಕಟ್ಟಡಗಳ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆದೇಶ ಮಾಡಿದೆ. ಅದರಂತೆ ಬೆಂಗಳೂರಿನ ಬೆಸ್ಕಾಂ, ಮಂಗಳೂರು, ಹುಬ್ಬಳ್ಳಿ, ಚಾಮುಂಡೇಶ್ವರಿ, ಕಲಬುರಗಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸರಬರಾಜು ಸಹಕಾರ ಸೊಸೈಟಿ ಸೇರಿ ಆರೂ ಎಸ್ಕಾಂಗಳು ಒಸಿ ಪ್ರಮಾಣಪತ್ರ ಇಲ್ಲದಿದ್ದರೆ ವಿದ್ಯುತ್ ಸಂರ‍್ಕ ನೀಡಬಾರದು. ಈ ಬಗ್ಗೆ ಸುಪ್ರೀಂ ಕರ‍್ಟ್ ಹೊರಡಿಸಿರುವ ಎಲ್ಲಾ ನಿಯಮಗಳನ್ನು ಸ್ಪಷ್ಟವಾಗಿ ಎಸ್ಕಾಂಗಳು ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಹಿಂದೆ 2016 ರಲ್ಲೇ ಬೆಸ್ಕಾಂ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡಕ್ಕೆ ವಿದ್ಯುತ್ ಸಂಪರ‍್ಕ ಪಡೆಯಲು ಸ್ವಾಧೀನಾನುಭವ ಪತ್ರ ಕಡ್ಡಾಯ ಮಾಡಲಾಗಿತ್ತು. ಬಿಬಿಎಂಪಿಯು ನಕ್ಷೆ ಮಂಜೂರಾತಿ ಪಡೆಯದೆ ಕಟ್ಟಡ ನರ‍್ಮಾಣ ಮಾಡಿರುವವರಿಗೆ ಅಥವಾ ಮಂಜೂರಾದ ನಕ್ಷೆ ಉಲ್ಲಂಘಿಸಿ ಕಟ್ಟಡ ನರ‍್ಮಿಸುವವರಿಗೆ ಸ್ವಾಧೀನಾನುಭವ ಪತ್ರ ನೀಡಿರಲಿಲ್ಲ. ಇದರಿಂದ 3 ಸಾವಿರಕ್ಕೂ ಹೆಚ್ಚು ಕಟ್ಟಡಗಳಿಗೆ ವಿದ್ಯುತ್ ಸಂರ‍್ಕ ದೊರೆತಿರಲಿಲ್ಲ.
2022ರಲ್ಲಿ ನಗರಾಭಿವೃದ್ಧಿ ಇಲಾಖೆ ಈ ನಿಯಮ ಸಡಿಲಿಸಿ ವಿದ್ಯುತ್ ಸಂರ‍್ಕ ಪಡೆಯಲು ಇನ್ನು ಮುಂದೆ ಗುರುತಿನ ಚೀಟಿ ಹಾಗೂ ಸ್ವತ್ತಿನ ದಾಖಲೆ ಇದ್ದರೆ ಸಾಕು ಎಂದು ಮಾಡಿತ್ತು. ಇದೀಗ ಸುಪ್ರೀಂ ಕರ‍್ಟ್ ನಕ್ಷೆ ಮಂಜೂರಾತಿ ಉಲ್ಲಂಘಿಸಿ ಅಕ್ರಮವಾಗಿ ಕಟ್ಟಡಗಳನ್ನು ನರ‍್ಮಿಸುತ್ತಿರುವ ಬಗ್ಗೆ ಹಾಗೂ ಕಾನೂನುಬಾಹಿರ ಕಟ್ಟಡಗಳಿಗೆ ವಿದ್ಯುತ್, ಕುಡಿಯುವ ನೀರು, ಒಳಚರಂಡಿ ಸಂರ‍್ಕ ನೀಡುತ್ತಿರುವ ಬಗ್ಗೆ ಬಿಬಿಎಂಪಿ ರ‍್ವೆ ನಡೆಸಿದ್ದು ಅಕ್ರಮ ಕಟ್ಟಡಗಳ ಪಟ್ಟಿ ಸಿದ್ದ ಗೊಳಿಸಿದೆ.
ಸುಪ್ರೀಂ ಕೋರ್ಟ್ ಹೇಳಿರುವುದೇನು....
ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನರ‍್ಮಾಣ ಮಾಡುವಂತಿಲ್ಲ.
ಅಧಿಕಾರಿಗಳು ನರ‍್ಮಾಣ ಆಗುತ್ತಿರುವ ಕಟ್ಟಡ ಪರಿಶೀಲನೆ ನಡೆಸಬೇಕು.
ನಕ್ಷೆ ಉಲ್ಲಂಘನೆ ಆಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಕಟ್ಟಡ ನರ‍್ಮಾಣ ಸ್ಥಳದಲ್ಲಿ ನಕ್ಷೆ ಮಂಜೂರಾತಿ ಪ್ರತಿ ಪ್ರರ‍್ಶಿ ಸುವುದು
ಕಟ್ಟಡ ನರ‍್ಮಾಣ ಪರ‍್ಣಗೊಂಡ ಬಳಿಕ ಸ್ಥಳ ಪರಿಶೀಲನೆ ನಡೆಸಿದ ಬಳಿಕವಷ್ಟೇ ಸ್ವಾಧೀನಾನುಭವ ಪತ್ರ ವಿತರಣೆ ಮಾಡುವುದು
ನಕ್ಷೆ ಮಂಜೂರಾತಿ ನಿಯಮ ಉಲ್ಲಂಘಿಸಿ ನರ‍್ಮಾಣ ಆಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು.
‘ಒಸಿ’ ವಿತರಣೆ ಬಳಿಕವಷ್ಟೇ ನೀರಿನ ಸಂರ‍್ಕ, ವಿದ್ಯುತ್ ಸಂರ‍್ಕ, ಒಳಚರಂಡಿ ಸಂರ‍್ಕ ಕಲ್ಪಿ¸ಸುವುದು