ವಿಶ್ವ ಮಹಿಳೆಯರ ದಿನದ ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಡಾ ಅಂಬಿಕಾ ಸಿ ಮತ್ತು ಸಂಸ್ಥೆಯವರು ದಿನಾಂಕ 6.3.2025 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಮಹಿಳಾ ದಿನದ ಅಂಗವಾಗಿ ಸಮಾಜ ಸೇವೆ, ಶಿಕ್ಷಣ,ಉದ್ಯಮ, ಕಲೆ, ಸಂಗೀತ, ಫ್ಯಾಷನ್, ಸಿನಿಮಾ, ಯೋಗ ಮತ್ತು ಆರೋಗ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ಮಹಿಳೆಯರಾದ ಡಾ ದೇವಿಕಾ ನಾಗರಾಜು, ಶ್ವೇತಾ ಬಿ ಎಂ, ಸಂಗೀತ ಮಹೇಶ್ ದೇಶಪಾಂಡೆ, ಮಧುರ ಅಶೋಕ್ ಕುಮಾರ್, ಉಮಾಮಹೇಶ್ವರಿ, ಅನುಜ ಸೋನಿ, ಸರಿತಾಬಾಯಿ ಬಿಎಲ್, ರೋಷಿಣಿ ಗೌಡ, ಮಹಾಲಕ್ಷ್ಮಿ ಎಸ್ ಸಿ, ರಾಧಾ ಜಿ ಟಿ ರವರುಗಳಿಗೆಪ್ರಶಸ್ತಿ ನೀಡಿ ಗೌರವಿಸಿದರು .
ವಿಶೇಷವಾಗಿ ಮಹಿಳೆಯರಿಗೆ ಸಾಮಾಜಿಕವಾಗಿ ಗೌರವಿಸಿ, ಪ್ರೋತ್ಸಾಹಿಸಿದ ಕೆಲವು ಸಮಾಜ ಸೇವಕ ಪುರುಷರಿಗೂ ಕೂಡ ಗೌರವಿಸಿ ಸನ್ಮಾನಿಸಲಾಗಿತ್ತು,
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ - ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಇಂದು ಸಂಜೆ ಪತ್ರಿಕೆಯ ಮುಖ್ಯ ಸಂಪಾದಕಿ ಡಾ ಪದ್ಮ ನಾಗರಾಜ್, ಹಿರಿಯ ಪತ್ರಕರ್ತೆ ಶಾಂತಕುಮಾರಿ, ಮತ್ತು ಸಂಪಾದಕ ಹಾಗೂ ಪತ್ರಕರ್ತ ಶಿವರಾಜು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರವಹಿಸಿದರು,
ಕಾರ್ಯಕ್ರಮವು ಭರತನಾಟ್ಯ, ಹೆಣ್ಣು ಮಕ್ಕಳ ರಕ್ಷಣೆ ಆಧಾರಿತ ನೃತ್ಯ, ಗೋಷ್ಠಿ ಗಾಯನ, ಹಾಗೂ ವಿಶೇಷವಾಗಿ ಗುಲಾಬಿ ಬಣ್ಣದ ಸೀರೆ ಮತ್ತು ಕೂಲಿಂಗ್ ಗ್ಲಾಸ್ ಧರಿಸಿದ ಮಹಿಳೆಯರು ಸಂಭ್ರಮದಿಂದ ಆನಂದವಾಗಿ ಮಾಡಿದ ಸಮೂಹೃತ್ಯ ಅದ್ಭುತವಾಗಿತ್ತು...