ಕ್ಷಯ ಕುರಿತು ಜಾಗೃತಿ ಮೂಡಿಸುವ ದೃಷ್ಟಿಯಿಂದ ಸರ್ಕಾರಿ ಶಾಲೆ ಅಂಚೆಪಾಳ್ಯದಲ್ಲಿ ಬೀದಿ ನಾಟಕ ಒಂದನ್ನ ಪ್ರದರ್ಶಿಸಲಾಯಿತು. ಭಗವಾನ್ ಬುದ್ಧ ಹೋಮಿಯೋಪತಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಮತ್ತು ಡಾ. ಆದಿ ಹೋಮಿಯೋಪತಿ ಹೆಲ್ತ್ ಸೆಂಟರ್ ರವರ ಸಂಯೋಗದಲ್ಲಿ ಈ ಜಾಗೃತ ಆಂದೋಲನ ನಡೆಯಿತು.
ಕುಂಬಳಗೋಡು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರಾಮಕೃಷ್ಣ ಮಣ್ಣಿನ ಮಗ ರವರು ಈ ಸಂದರ್ಭದಲ್ಲಿ ಮಾತನಾಡಿ ಎಲ್ಲರ ಆರೋಗ್ಯ ದೃಷ್ಟಿಯಿಂದ ಇಂತಹ ಬಿದಿ ನಾಟಕಗಳು ನಮ್ಮ ಸಮಾಜಕ್ಕೆ ಅಗತ್ಯವಾಗಿವೆ ಎಂಬುದನ್ನು ಬಿಂಬಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯೋಗರಾಜ್, ಡಾಕ್ಟರ್ ಆದಿ ಹೋಮಿಯೋಪತಿಕ್ ಹೆಲ್ತ್ ಸೆಂಟರ್ ಮುಖ್ಯಸ್ಥರಾದ ಶಾಮ್ ಸುಂದರ್ ಆದಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಅಣ್ಣೇಗೌಡ್ರು, ಭಗವಾನ್ ಬುದ್ಧ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಡಾಕ್ಟರ್ ಸುನಿತಾ, ಡಾಕ್ಟರ್ ಶರತ್ ಕುಮಾರ್, ಡಾ. ಶಾಂತಕುಮಾರ್, ಡಾಕ್ಟರ್ ವೆಂಕಟೇಶ್, ಡಾ. ವರಲಕ್ಷ್ಮಿ ಹಾಗೂ ವೈದ್ಯಕೀಯ ಕಾಲೇಜಿನ ಕೊನೆ ವರ್ಷದ ಇಂಟರ್ನಲ್ ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.