ಚಿತ್ತೂರು ಜಿಲ್ಲೆ ಆಂಧ್ರ ಪ್ರದೇಶದಲ್ಲಿ ರೆಡ್ಡಮ್ಮ ಬೆಟ್ಟ ಎಂಬ ಬೆಟ್ಟ ಇದೆ.ಅಲ್ಲಿ ರೆಡ್ಡಮ್ಮ ಎಂಬ ದೇವಿ ಇದೆ.
ರೆಡ್ಡಮ್ಮ್ ದೇವಿಯ ಮಹಾತ್ಮೆ ಎಂದರೆ ಈ ದೇವಿ ಮಕ್ಕಳ ಗದವರಿಗೆ ಸಂತಾನ ಭಾಗ್ಯ ಕರುಣಿಸುತ್ತಾಳೆ.ಅಲ್ಲಿನ ಅರ್ಚಕರು ಹಸಿರು ಸೊಪ್ಪಿನ ರಸ ಸಂತಾನಹೀನರಿಗೆ ಔಶದಿಯಾಗಿ ನೀಡುತ್ತಾರೆ.ಅದನ್ನು ತೆಗೆದುಕೊಂಡ ಮೇಲೆ ಮಾತನಾಡಬಾರದು, ನಿದ್ದೆ ಹೋಗಬಾರದು ಎಂಬ ನಿಯಮ ಇದೆ.ನಂತರ ಅವರಿಗೆ ಮಕ್ಕಳು ಹುಟ್ಟುತ್ತವೆ. ಆ ನಂತರ ಹುಟ್ಟಿದ ಮಗುವಿಗೆ ಮೊದಲು ರೆಡ್ಡಪ್ಪ, ರೆಡ್ಡಮ್ಮ ಎಂದು ಗಂಡು, ಹೆಣ್ಣು ಮಕ್ಕಳಿಗೆ ಹೆಸರು ಇಡಬೇಕು. ಈ ನಿಯಮ ಇದೆ.ಇಲ್ಲಿ ಮುಸಲ್ಮಾನರು ಕೂಡಾ ಔಷಧಿ ಸೇವಿಸಿ ತದ ನಂತರ ಹುಟ್ಟಿದ ಮಕ್ಕಳಿಗೆ ರೆಡ್ಡಮ್ಮಾ, ರೆಡ್ಡಪ್ಪ ಎಂದು ಹೆಸರು ಇಡುತ್ತಾರೆ.
ಈ ದೇವಿಗೆ ಸೋಬಲಕ್ಕಿ ನೀಡಬಹುದು.ಮುಂಚೆ ಅಲ್ಲಿ ಬೆಟ್ಟಕ್ಕೆ ಹೋಗಲು ಮೆಟ್ಟಲು ಇರಲಿಲ್ಲವಂತೆ.ಯಾವ ಸರಿಯಾದ ವ್ಯವಸ್ಥೆಯು ಇರಲಿಲ್ಲವಂತೆ. ಈಗ ಈ ಎಲ್ಲ ವ್ಯವಸ್ಥೆ ಇದೆ.
ಅಲ್ಲಿಗೆ ಬರುವ ಸಂತಾನ ಅಪೇಕ್ಷಿತ ಮಹಿಳೆಯರು ಅವರ ಹಣೆಯಲ್ಲಿ ಸಂತಾನ ಭಾಗ್ಯ ಇಲ್ಲದ್ದಿದ್ದರೆ ಬೆಟ್ಟದ ಬಳಿ ಇರುವ ಮರದ ಬಳಿಯಿಂದ ಮುಂದೆ ಹೋಗಲು ಸಾಧ್ಯವಾಗದಂತೆ ಆಗುತ್ತದೆ ಯಂತೆ.ಅವರು ಬಹುಶಃ ರಜಸ್ವಲೆಯಾಗುತ್ತಾರೆ.ಇಲ್ಲದ್ದಿದ್ದರೆ ಏನಾದರೂ ಒಂದು ಅಡ್ಡಿ ಆಗಿ ದೇವಾಲಯದ ಬಳಿಗೆ ಹೋಗದಂತೆ ಆಗುತ್ತದೆ.
ಸಂತಾನ ಪಡೆದವರು ಅವರ ಮಕ್ಕಳ ಮೂರು ತಲೆಮಾರಿನವರು ತಮ್ಮ ಹೆಸರಿಗೆ ಮುಂಚೆ ರೆಡ್ಡಪ್ಪ, ರೆಡ್ಡಮ್ಮಾ ಎಂದು ಹೆಸರು ಇಟ್ಟುಕೊಳ್ಳಬೇಕಂತೆ.ಇಲ್ಲದಿದ್ದರೆ ಏನಾದರೂ ಅನಾಹುತ ಮಕ್ಕಳಿಗೆ ಜರುಗುವುದಂತೆ.
ಈ ದೇವಿಯ ಹಿನ್ನೆಲೆ ಕುತೂಹಲಕಾರಿಯಾಗಿದೆ.ತುಂಬಾ ಹಿಂದೆ ರೆಡ್ಡಮ್ಮಾ ಎಂಬ ಉಳ್ಳವರ ಮನೆಯ ಹುಡುಗಿ ಈ ಪ್ರಾಂತದಲ್ಲಿ ಇದ್ದಳಂತೆ ಅವಳ ದೈವಭಕ್ತಿ, ಪರೋಪಕಾರ ಮನೆ ಮಾತಾಗಿತ್ತಂತೆ.ಆಗೆಲ್ಲ ಆಂಧ್ರ ಪೂರ ಮುಸಲ್ಮಾನರ ಆಳ್ವಿಕೆ ಕಾಲ.ಆಗ ಒಮ್ಮೆ ರೆಡ್ಡಮ್ಮಾ ಬೆಟ್ಟದಲ್ಲಿ ತಿರುಗಾಡುತ್ತಿದ್ದಾಗ ಒಬ್ಬ ಮುಸಲ್ಮಾನ ಕುದುರೆ ಸವಾರ ಬಹುಶಃ ಸಿಪಾಯಿ ಈಕೆಯನ್ನು ನೋಡಿ ಬಯಸಿ ಹಿಡಿದುಕೊಳ್ಳಲು ಬಂದನಂತೆ.ಅವನಿಂದ ತಪ್ಪಿಸಿಕೊಳ್ಳಲು ರೆಡ್ಡಮ್ಮಾ ಬೆಟ್ಟವೆಲ್ಲ ತಿರುಗಿ ಕಡೆಗೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಳಂತೆ.ಆಗ ಅಲ್ಲಿನ ಬಂಡೆ ಇಬ್ಭಾಗವಾಗಿ ಅವಳು ಅಲ್ಲಿ ಸೇರಿಕೊಂಡಳಂತೆ.ಅವಳ ಜಡೆ ಈಗಲೂ ನೋಡಬಹುದು ಎಂಬ ದಂತ ಕಥೆ ಇದೆ.
ಈ ಕಥೆ ನಮಗೆ ಕರ್ನಾಟಕ ಪ್ರಾಂತದ ಕೋಳ್ಯೂರು ಕೊಡಗೂಸು ಹಾಗು ಹೊನ್ನಾಳಮ್ಮನ ಕಥೆಯನ್ನು ನೆನಪಿಸುತ್ತದೆ.
ಹೀಗೆ ದೇವರ ಕೃಪೆಯಿಂದ ಬಂಡೆ ಸೇರಿದ ರೆಡ್ಡಮ್ಮ ಅಲ್ಲಿನ ಭಕ್ತರಿಗೆ ಬಯಸಿದ್ದೆಲ್ಲ ಕೊಡುತ್ತಿದ್ದಾಳೆ.ಮುಂದೆ ಈ ಬೆಟ್ಟ ಕೂಡಾ ರೆಡ್ದ್ದಮ್ಮ ಕೊಂಡ ಎಂದೇ ಹೆಸರಾಯಿತಂತೆ.
ಅಲ್ಲಿ ಕೊಡುವ ಗಿಡ ಮೂಲಿಕಾ ಔಷಧಿ ಬಗ್ಗೆ ಸಂಶೋಧನೆ ಅಗತ್ಯವಾಗಿದೆ.
ನನ್ನ ಪತಿ ಕೂಡಾ ಈ ಅಮ್ಮನ ವರಪ್ರಸಾದದಿಂದ ಜನಿಸಿದ್ದು.
ಚಿತ್ತೂರು ಕಡೆ ಹೋದರೆ ಒಮ್ಮೆ ಈ ದೇವಿ ದರ್ಶನ ಮಾಡಿ.ಅಲ್ಲಿ ಜಾತ್ರೆ ಸಹಿತ ಚೆನ್ನಾಗಿ ನಡೆಯುತ್ತಡೆಯಂತೆ.
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com