‘ಎಲ್.ಎಸ್.ಎಸ್‌. ಜನ್ಮ ಶತಮಾನೋತ್ಸವ ಗೌರವ

VK NEWS
By -
0

ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕ ನಿರ್ದೇಶಕರಾದ  ಕನ್ನಡ ಪ್ರೇಮಿ ಶ್ರೀ ನಿತಿನ್ ಷಾ ಅವರಿಗೆ ಕನ್ನಡ ಗೆಳೆಯರ ಬಳಗವು 27-ಫೆಬ್ರವರಿ-2025 ರಂದು ‘ಎಲ್.ಎಸ್.ಎಸ್‌. ಜನ್ಮ ಶತಮಾನೋತ್ಸವ ಗೌರವ’ವನ್ನು  ಸಪ್ನ ಪುಸ್ತಕಾಲಯದಲ್ಲಿ ಮಾಡಿತು. (ಇದೇ ಫೆ-17ರಂದು ನಡೆದ ಪ್ರೊಎಲ್.ಎಸ್.ಶೇಷಗಿರಿರಾವ್ ಜನ್ಮ ಶತಮಾನೋತ್ಸವ ಸಮಾರೋಪದಲ್ಲಿ  ವಿವಿಧ ಕ್ಷೇತ್ರಗಳ 10 ಸಾಧಕರಿಗೆ ಎಲ್.ಎಸ್.ಎಸ್‌. ಜನ್ಮ ಶತಮಾನೋತ್ಸವ ಗೌರವಾರ್ಪಣೆ ಮಾಡಿತ್ತು.ಅಂದು ಕಾರ್ಯಕ್ರಮದಲ್ಲಿ ನಿತಿನ್ ಷಾ ಅವರು ಅನಿವಾರ್ಯ ಕಾರಣದಿಂದ ಗೌರವ ಸ್ವೀಕರಿಸಲು ಆಗಿರಲ್ಲಿ)ಕನ್ನಡ ಗೆಳೆಯರ ಬಳಗದ ಪರವಾಗಿ . ರಾ.ನಂ. ಚಂದ್ರಶೇಖರ  ನಿತಿನ್ ಷಾ ಅವರಿಗೆ ಗೌರವಾರ್ಪಣೆ ಪ್ರಶಸ್ತಿ ಫಲಕ, ಶಾಲು,ಹಾರ, ಮೈಸೂರು ಪೇಟ ಮತ್ತು ಫಲ ತಾಂಬೂಲ ನೀಡಿ ಗೌರವಿಸಿದರು. 

ಸಪ್ನದ ಕನ್ನಡ ವಿಭಾಗದ ಆರ್. ದೊಡ್ಡೆಗೌಡ, ಹಿರಿಯ ಸಂಶೋಧಕ ಡಾ. ಆರ್. ಶೇಷ ಶಾಸ್ತ್ರಿ, ಕನ್ನಡ ಗೆಳೆಯರ ಬಳಗದ ಪದಾಧಿಕಾರಿಗಳಾದ ಬಾ.ಹ. ಉಪೇಂದ್ರ, ಮ. ಚಂದ್ರಶೇಖರ, ಎಚ್.ಎನ್ ರಮೇಶ್ ಬಾಬು, ಆರ್. ರಾಮಸ್ವಾಮಿ, ಹೊಸೂರು ನಾಗರಾಜ್ ಉಪಸ್ಥಿತರಿದ್ದರು.

Post a Comment

0Comments

Post a Comment (0)