ಬೆಂಗಳೂರು : ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ರಾಘವೇಂದ್ರ ಸ್ವಾಮಿಗಳ 430ನೇ ಜನ್ಮದಿನೋತ್ಸವದ ಪ್ರಯುಕ್ತ ಇಂದು ಬೆಳಗ್ಗೆ (ಮಾರ್ಚ್ 6, ಗುರುವಾರ) ಗುರುಗಳ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣ ಸಹಿತ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಕನಕಾಭಿಷೇಕ, ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದದೊಂದಿಗೆ ಸಂಪನ್ನಗೊಂಡಿತು.
ಸಂಜೆಯ ಕಾರ್ಯಕ್ರಮದಲ್ಲಿ ವಿದ್ಯಾರಣ್ಯಪುರದ ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿ ಮತ್ತು ಮಲ್ಲೇಶ್ವರದ ಸ್ತುತಿ ವಾಹಿನಿ ಭಜನಾ ಮಂಡಳಿಯ ಸದಸ್ಯರಿಂದ ಹರಿ ಭಜನೆ, ಅಷ್ಟಾವಧಾನ, ರಥೋತ್ಸವ ಕಾರ್ಯಕ್ರಮಗಳು ಜರುಗಿದವು ಎಂದು ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಸುಬ್ಬುನರಹಸಿಂಹ ಅವರು ತಿಳಿಸಿದ್ದಾರೆ.