ಪದ್ಮನಾಭ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿ ಸ್ವಾಮಿಗಳ 430ನೇ ವರ್ಧಂತಿ ನಡೆಯಿತು.
ಪದ್ಮನಾಭ ನಗರದ ಮುಖ್ಯ ರಸ್ತೆಯಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವೃಂದವನ ದೇವಸ್ಥಾನದಲ್ಲಿ ಇಂದು ಇಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 430ನೇ ವರ್ಧಂತಿ ನಿಮಿತ್ತ ಅನೇಕ ಧಾರ್ಮಿಕ ಪೂಜಾ ಕಾರ್ಯಗಳಾದ ಕನಕಭಿಷೇಕ, ಎಳೇನೇರು ಅಭಿಷೇಕ ಪಂಚಾಬ್ರುತ ಅಭಿಷೇಕ ನಡೆಸಲಾಯಿತು.
ದೇವರಿಗೆ ವಿಶೇಷ ಅಲಂಕಾರ ಪೂಜೆ ಮತ್ತು ಸಂಜೆ ತೊಟ್ಟಿಲ ಸೇವೆ ನಡೆಯಿತು, ಮದ್ಯಾಹ್ನ ತೀರ್ಥ ಮತ್ತು ಮಹಾ ಪ್ರಸಾದ, ಅಕ್ಷತೆ ವಿತರಣೆ ನಡೆಯಿತು. ಸಾವಿರಾರು ಭಕ್ತರು ಆಗಮಿಸಿ ಭಾಗವಹಿಸಿದ್ದರು.