26 ಲಕ್ಷ ನಕಲಿ ಕಾರ್ಡ್‍ ಗಳು ರದ್ದು: ಸಚಿವ ಸಂತೋಷ ಲಾಡ್

VK NEWS
By -
0

ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್‍ ಗಳಲ್ಲಿ ತಪಾಸಣೆ ನಡೆಸಿ 26 ಲಕ್ಷ ನಕಲಿ ಕಾರ್ಡ್‍ಗಳನ್ನು ರದ್ದುಪಡಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಸದನಕ್ಕೆ ತಿಳಿಸಿದರು.


ಸದಸ್ಯ ಮಹೇಷ ಟೆಂಗಿನಕಾಯಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಇನ್ಮುಂದೆಯೂ ಸಹ ನಕಲಿ ಕಾರ್ಡ್‍ಗಳನ್ನು ತಪಾಸಣೆ ನಡೆಸಿ ರದ್ದುಪಡಿಸಲಾಗುವುದು ಎಂದು ಅವರು ಹೇಳಿದರು. 2022ರಿಂದ ಈವರೆಗೆ ಮದುವೆ ಧನ ಸಹಾಯಕ್ಕಾಗಿ 1,57,174 ಅರ್ಜಿಗಳು ಬಂದಿದ್ದು, 1,06,091 ಅರ್ಜಿಗಳನ್ನು ಮಂಜೂರು ಮಾಡಲಾಗಿದೆ ಎಂದರು. ತಿರಸ್ಕರಿಸಿದ ಅರ್ಜಿಗಳಿಗೆ ಸಹ ಕಾರಣವನ್ನು ನಮೂದಿಸಲಾಗಿರುತ್ತದೆ ಎಂದು ಸದಸ್ಯರ ಮತ್ತೊಂದು ಪ್ರಶ್ನೆಗೆ ಅವರು ಉತ್ತರಿಸಿದರು.

 ಕೆಲದಿನಗಳಲ್ಲಿ ಅಂಬೇಡ್ಕರ್ ಸೇವಾ ಕೇಂದ್ರಗಳನ್ನು ಶೀಘ್ರ ಆರಂಭಿಸಲಾಗುತ್ತಿದ್ದು, ಅವುಗಳಿಗೆ ಒದಗಿಸಲಾಗಿರುವ ವಾಹನಗಳ ಮೂಲಕ ಅರ್ಜಿ ಸಲ್ಲಿಸಿದವರ ಮನೆಗೆ ತೆರಳಿ ಪರಿಶೀಲಿಸಿ ಶಿಫಾರಸ್ಸು ಮಾಡಲಾಗುತ್ತದೆ ಎಂದರು.

Post a Comment

0Comments

Post a Comment (0)