ಕೆಂಗೇರಿ ಉಪನಗರದ ಗಣೇಶ ಆಟದ ಮೈದಾನದಲ್ಲಿ ಆದ್ದೂರಿ ಮಹಾ ಶಿವರಾತ್ರಿ

VK NEWS
By -
0

 ಕೆಂಗೇರಿ : ಕೆಂಗೇರಿ ಉಪನಗರದ ಗಣೇಶ ಆಟದ ಮೈದಾನದಲ್ಲಿ ಆದ್ದೂರಿಯಾಗಿಮಹಾ ಶಿವರಾತ್ರಿ  ಆಜರಿಸಲಾಯಿತು.

ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್  ಅವರ ಅದ್ಯಕ್ಷತೆಯಲ್ಲಿ ಶಿವನ ಮೂರ್ತಿಗೆ ಪೂಜೆ ಸಲ್ಲಿಸುವುದರೊಂದಿಗೆ ಶಿವ ವೈಭವಕ್ಕೆ ಚಾಲನೆ ನೀಡಲಾಯಿತು.

ಮಹಾ ಶಿವರಾತ್ರಿ ಪ್ರಯುಕ್ತ ಅಮರನಾಥ ಹಿಮ ಜ್ಯೋತಿಲಿಂಗ ಅದಿಯೋಗಿ ಶಿವನ ದರ್ಶನ ಹಾಗೂ 12 ಬಗೆಯ ಲಿಂಗಗಳನ್ನ ಪ್ರತಿಷ್ಟಾಪಿಸಲಾಗಿತ್ತು ಸಾವಿರಾರು ಶಿವನ ಭಕ್ತರು ಸರದಿಯಲ್ಲಿ ನಿಂತು ಶಿವನ ದರ್ಶನ ಪಡೆದರು ಶಿವನ ದರ್ಶನಕ್ಕೆ ಬಂದ ಎಲ್ಲಾ ಭಕ್ತರಿಗೂ ಕಾಶಿಯಿಂದ ವಿಶೇಷವಾಗಿ ಪೂಜಿಸಿ ತಂದಿದ್ದ ರುದ್ರಾಕ್ಷಿ, ಗಂಗಾ ಜಲ ಹಾಗೂ ಶಿವನಿಗೆ ಪ್ರಿಯವಾದ ತಂಬಿಟ್ಟನ್ನು ಹಾಗೂ ಉಪಿಟ್ಟನ್ನು ನೀಡಲಾಯಿತು. ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಗದಂತೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕಳೆದ ಜನವರಿಯಲ್ಲಿ ಸಹ ಶಾಸಕರು ಅದ್ದೂರಿಯಾಗಿ ಸುಗ್ಗಿ ಸಂಭ್ರಮವನ್ನೂ ಆಚರಿದ್ದರು.


ಸಂಜೆ ಕಾರ್ಯಕ್ರಮ ದಲ್ಲಿ ಶಮಿತ ಮಲ್ನಾಡ್,ಅನುರಾಧ ಭಟ್ ಹಾಗೂ ಕಲರ್ಸ್ ಕನ್ನಡ ಖ್ಯಾತಿ ಯ ಜಗ್ಗಿ ಮಾಸ್ಟರ್ ಅವರ ರಸ ಮಂಜರಿ ಹಾಡು ನೃತ್ಯ ಪ್ರದರ್ಶನ ರಾತ್ರಿ 12 ಗಂಟೆಯವರೆಗೂ ನೆರೆದಿದ್ದ ಸಾವಿರಾರು ಶಿವನ ಭಕ್ತರು ಆನಂದಿಸಿದರು.

Advertisement




Post a Comment

0Comments

Post a Comment (0)