ಶಿವಲಿಂಗ ಹೊತ್ತ ಗಜರಾಜನಿಗೆ ಕಾಟನ್ ಪೇಟೆ ರಸ್ತೆಗಳಲ್ಲಿ ಸಾರ್ವಜನಿಕರಿಂದ ಪುಷ್ಪರ್ಚನೆ
ಗಾಂಧಿನಗರ ವಿಧಾನಸಭಾ ಕ್ಷೇತ್ರ: ಕಾಟನ್ ಪೇಟೆ ತುಳಸಿ ತೋಟದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಲೋಕ ಕಲ್ಯಾಣರ್ಥಕ್ಕಾಗಿ ಸಾಧು ಸಂತರು, ನಾಗಸಾಧುಗಳು, ಅಘೋರಿಗಳಿಂದ ಮಹಾಶತರುದ್ರಯಾಗ ಮತ್ತು ಕಾಟನ್ ಪೇಟೆ ಪ್ರಮುಖ ಬೀದಿಗಳಲ್ಲಿ ಆನೆ ಮೇಲೆ ಶಿವಲಿಂಗ ಇಟ್ಟು ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ಕಾರ್ಯಕ್ರಮ.
ಸಾಧು, ಸಂತರು, ನಾಗಸಾಧುಗಳು,ಅಘೋರಿಗಳು, ಮಹರ್ಷಿ ಆನಂದ್ ಗುರೂಜಿರವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರು, ಕಾಟನ್ ಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ಮೂರ್ತಿರವರು ಮಹಾಶತ್ರರುದ್ರಯಾಗದಲ್ಲಿ ಭಾಗವಹಿಸಿದ್ದರು.
ಮಹರ್ಷಿ ಆನಂದ್ ಗುರೂಜೀರವರು ಮಾತನಾಡಿ ನಾವು ಮಾಡಿದ ಪಾಪ, ಕರ್ಮದಿಂದ ಮುಕ್ತಿ ಪಡೆಯಲು ಮತ್ತು ಪುಣ್ಯ ಪ್ರಾಪ್ತಿ ಮಾಡಲು ಶಿವ ನಾಮಸ್ಮರಣೆ ಮಾಡಬೇಕು.
ನಾಗಸಾಧುಗಳು, ಅಘೋರಿಗಳ ಬಂದಿರುವುದರಿಂದ ಸ್ಥಳವು ಪುಣ್ಯಸ್ಥಳವಾಗಿದೆ.
ಭಾರತೀಯ ಹಿಂದೂ ಸಂಪ್ರಾದಯದ ಶಿವ ಧ್ಯಾನ ಮಾಡುವುದರಿಂದ 72ಸಾವಿರ ನರ ನಾಡಿಗಳು ಜಾಗೃತವಾಗುತ್ತದೆ.
ಸಚಿವರಾದ ದಿನೇಶ್ ಗುಂಡೂರಾವ್ ರವರು ಮಾತನಾಡಿ ಉತ್ತರಪ್ರದೇಶದಿಂದ ಸಾಧು, ಸಂತರು ಮತ್ತು ಅಘೋರಿಗಳು ನಾಡಿನ ಜನರಿಗೆ ಆಶೀರ್ವಾದ ಮಾಡಲು ಬಂದಿದ್ದಾರೆ.
ರಾಜ್ಯದಲ್ಲಿ ಸುಖ, ಶಾಂತಿ ನೆಮ್ಮದ್ದಿ ಲಭಿಸಲಿ ಹಾಗೂ ರೈತರಿಗೆ ಉತ್ತಮ ಮಳೆ, ಬೇಳೆಯಾಗಲಿ ಎಂದು ಹೋಮ ಮಾಡಲಾಗುತ್ತಿದೆ. ಮಹಾಶಿವನಾ ಆಶೀರ್ವಾದ, ಕೃಪೆ ಎಲ್ಲರ ಮೇಲಿರಲಿ ಎಂದು ಹೇಳಿದರು.
ಭವ್ಯ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ ಮತ್ತು ವಿವಿಧ ಕಲಾತಂಡಗಲು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳು ಮತ್ತು ಮಾಜಿ ಪಾಲಿಕೆ ಸದಸ್ಯ ರಾಮಚಂದ್ರ,ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸರವಣನ್, ಗ್ಯಾರಂಟಿ ಯೋಜನೆಗಳು ಅನುಷ್ಠಾನ ಸಮಿತಿ ಅಧ್ಯಕ್ಷರಾದ ಉಮೇಶ್ ಬಾಬು, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ರಘು,ನವೀನ್ ಕುಮಾರ್ ರಾಥೋಡ್, ರಾಜ್ ಕಾರ್ತಿಕ್ ರವರು ಉಪಸ್ಥಿತರಿದ್ದರು.
ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮತ್ತು ಹಾಸ್ಯ ರಸದೌತಣ ನಗೆ ಜಾಗರಣೆ ಕಾರ್ಯಕ್ರಮದಲ್ಲಿ ಎಂ.ಎಸ್.ನರಸಿಂಹಮೂರ್ತಿ, ಪ್ರೊ.ಕೃಷ್ಣೆಗೌಡರು, ದಯಾನಂದ್, ಮಿಮಿಕ್ರಿಗೋಪಿರವರ ಕಾರ್ಯಕ್ರಮ.