ಮಂತ್ರಾಲಯ ಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆಶೀರ್ವಾದದೊಂದಿಗೆ ಬೆಂಗಳೂರಿನ ಯುವ ಗಾಯಕಿ ಕು|| ರಚನಾ ಶರ್ಮಾ ಜನವರಿ 2, ಗುರುವಾರದಂದು ಸಲ್ಲಿಸಿದ ಗಾಯನ ಸೇವೆಯಲ್ಲಿ ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸರ ಪದಗಳನ್ನು ಪ್ರಸ್ತುತ ಪಡಿಸಿದರು.
ವಾದ್ಯ ಸಹಕಾರದಲ್ಲಿ ಬೆಂಗಳೂರಿನವರೇ ಆದ ವಿದ್ವಾನ್ ಮೈಸೂರು ಸಂಜೀವ್ ಕುಮಾರ್ ಪಿಟೀಲು ವಾದನದಲ್ಲಿ ಹಾಗೂ ವಿದ್ವಾನ್ ಮುರಳಿ ನಾರಾಯಣರಾವ್ ಮೃದಂಗದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದ ನಂತರ ಶ್ರೀಪಾದಂಗಳವರು ಎಲ್ಲಾ ಕಲಾವಿದರಿಗೂ ಫಲ ಮಂತ್ರಾಕ್ಷತೆ ಮತ್ತು ಅನುಗ್ರಹ ಪತ್ರ ನೀಡಿ ಆಶೀರ್ವದಿಸಿದರು. ಈ ಕಾರ್ಯಕ್ರಮವನ್ನು ಶ್ರೀ ಪದ್ಮನಾಭಾಚಾರ್ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.