*ಪ್ರಗತಿ ತಂಡದಿಂದ ವಿಸಿಬಿ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ*

VK NEWS
By -
0

ಬೆಂಗಳೂರು : ಸರ್ ಎಂ ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್ ನ 2025-2030 ನೇ ಸಾಲಿಗೆ ನಡೆಯುತ್ತಿರುವ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಗತಿ ತಂಡದ ಹದಿನೈದು ಸದಸ್ಯರು ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಪ್ರಗತಿ ತಂಡದ ಪ್ರಮುಖರಾದ ಮಾಜಿ ಸಿಇಒ ಎಲ್ ಗಣೇಶ್ ನೇತೃತ್ವದಲ್ಲಿ ವಕೀಲರಾದ ಎಸ್ ಎಸ್ ಶ್ರೀನಿವಾಸರಾವ್. ಅನೂಪ್ ಹಾರನಹಳ್ಳಿ. ವಿಸಿಬಿಯ ನಿವೃತ್ತ ಅಧಿಕಾರಿಗಳಾದ ಸೂರ್ಯನಾರಾಯಣ ಎಲ್ ಸಿ. ಗೋಪಿನಾಥ್ ಹೆಚ್ ಎನ್.  ಎಸ್ ರಘು, ಹಿರಿಯ ಪತ್ರಕರ್ತ ಎನ್ ಎಸ್ ಸುಧೀಂದ್ರ ರಾವ್, ಮಾಜಿ ಉಪಾಧ್ಯಕ್ಷ ಶ್ರೀಪತೀರಾವ್, ಪ್ರಧ್ಯಾಪಕ ಕೆ ಎನ್ ವೆಂಕಟೇಶ್, ಎಸ್ ಲಕ್ಷ್ಮೀನಾರಾಯಣ,ಮಹಿಳಾ ಸದಸ್ಯತ್ವಕ್ಕೆ ಪಿ ಎಸ್ ಮೃಣಲಾ, ಬೀ. ಎಸ್. ವೇದವ್ಯಾಸ ಮತ್ತು ಎ ಎಸ್ ಮಮತ ಅವರು ಚುನಾವಣಾಧಿಕಾರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.

ಇದಕ್ಕೂ ಮುನ್ನ ದೊಡ್ಡ ಗಣಪತಿ ಮತ್ತು ಶಂಕರಮಠದ ಶ್ರೀ ಶಾರದಾ ದೇವಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಗತಿ ತಂಡಕ್ಕೆ ಅನೇಕ ಗಣ್ಯರು ಹಾಗು ಅಭಿಮಾನಿಗಳು ಶುಭ ಕೋರಿದರು.

Post a Comment

0Comments

Post a Comment (0)