ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ (ರಿ) ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ

VK NEWS
By -
0

 ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ (ರಿ) ವತಿಯಿಂದ 2024-25ನೇ ಸಾಲಿನ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಮತ್ತು ಕರ್ನಾಟಕ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ "ಅಪರಾಧ ತಡೆ” ಮಾಸಾಚರಣೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ದಿನಾಂಕ : 15-01-2025 ಬುಧವಾರ, ಸಮಯ : ಬೆಳಗ್ಗೆ 11.00ಕ್ಕೆ ಗಾಂಧಿ ಭವನ, ಮೊದಲೇ ಮಹಡಿ, ಕಸ್ತೂರಬಾ ಸಭಾಂಗಣ, ಕುಮಾರ ಪಾರ್ಕ್, ಬೆಂಗಳೂರು ಇಲ್ಲಿ, ಇಂದು ಸಂಜೆ” ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ  ಪದ್ಮ ನಾಗರಾಜುರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. 




ಪೊಲೀಸ್ ಆಯುಕ್ತ ಬಿ. ದಯಾನಂದರವರು ತಮ್ಮ ಅಮೃತ ಹಸ್ತದಿಂದ ಸಂಘದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನಂತರ, ಸಂಘದ ಉಪಾಧ್ಯಕ್ಷರಾದ ಡಾ: ಸಿದ್ದಪ್ಪ ನೇಗಿಲಾಲ ಅವರ ಭಾವಚಿತ್ರಕ್ಕೆ ಶ್ರದ್ದಾಂಜಲಿ ಪೂರ್ವಕವಾಗಿ ಪುಷ್ಪವನ್ನು ಅರ್ಪಿಸಲಾಯಿತು. ನಂತರ ಪೊಲೀಸ್‌ ಆಯುಕ್ತರು ಉದ್ಘಾಟನೆಯ ಭಾಷಣವನ್ನು ಹೊಸ ವರ್ಷದ ಹಾಗೂ ಸಂಕ್ರಾತಿ ಹಬ್ಬದ ಶುಭಾಶಯಗಳನ್ನು ನೆರದಿದ್ದ ಎಲ್ಲ ಪತ್ರಕರ್ತರಿಗೂ ಕೋರಿದರು. ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟ ತಮಗೆಲ್ಲರಿಗೂ ಅಭಿನಂದನೆಗಳು ಎಂದು ಹೇಳಿ ಅಪರಾದ ತಡೆ ಮಾಸಾಚರಣೆಯನ್ನು ಮೂಡಿಸುವಂತಹ ವಿಚಾರವನ್ನು ಕಬ್ಬನ್‌ ಪಾರ್ಕ್‌, ಬೆಂಗಳೂರು, ಎ.ಸಿ.ಪಿ.  ಸಿ.ಬಾಲಕೃಷ್ಣ ರವರು ನಡೆಸಿಕೊಡುತ್ತಾರೆ ಎಂದು ಹೇಳಿದರು. ನಂತರ ಮಾನ್ಯ ಆಯುಕ್ತರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಾಗೆಯೇ ವೃದ್ದಾಶ್ರಮ ಮತ್ತು ಅನಾಥಾಶ್ರಮಗಳನ್ನು ನಡೆಸುತ್ತಿರುವ ಐದು ಆಶ್ರಮಗಳನ್ನು ಗುರುತಿಸಿ ಅವರಿಗೆ ಅಕ್ಕಿಮೂಟೆಯನ್ನು  ಮಾನ್ಯ ಪೊಲೀಸ್‌ ಆಯುಕ್ತರು  ವಿತರಿಸಿದರು.

ನಂತರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಕಲಾವಿದ ವಿಷ್ಣು ಅವರು ಪ್ರಾಸ್ತಾವಿಕ ಹಿತನುಡಿಗಳನ್ನು ಹೇಳಿದರು. 

ಕಬ್ಬನ್‌ ಪಾರ್ಕ್‌, ಬೆಂಗಳೂರು, ಎ.ಸಿ.ಪಿ.  ಸಿ.ಬಾಲಕೃಷ್ಣ ರವರು "ಅಪರಾಧ ತಡೆ” ಮಾಸಾಚರಣೆ ವಿಷಯವಾಗಿ ತಮ್ಮ ಕುಟುಂಬದಲ್ಲಿ ನಡೆದಿರುವಂತಹ ಅಪರಾಧಗಳನ್ನೇ ವಿಷಯವನ್ನಾಗಿ ತಿಳಿಸಿ, ನಂತರ ನಾನು ಪೊಲೀಸ್‌ ಇಲಾಖೆಗೆ ಬಂದನಂತರ ಈ ಅಪರಾಧಗಳನ್ನು ಯಾವ ರೀತಿ ತಡೆಯಬೇಕು ಎಂಬುದನ್ನು ಅರಿತೆ.  ನಂತರ ಈಗಿನ ವಾತಾವರಣದಲ್ಲಿ ಎಲ್ಲರೂ ಬಹಳ ಎಚ್ಚರಿಕೆಯಿಂದ ಇದ್ದಾರೆ, ಆದರೂ ಕೆಲವು ಬಾರಿ ಹಣ ಕಳೆದುಕೊಳ್ಳುವಂತಹ ಪ್ರಕರಣಗಳು ಎದುರಾಗುತ್ತಿವೆ.  ಇಂತಹ ಅಪರಾಧಗಳನ್ನು ನಿಯಂತ್ರಣಗೊಳಿಸುವ ಸಲುವಾಗಿ  ಪೊಲೀಸ್‌ ಇಲಾಖೆ ವತಿಯಿಂದ ವ್ಯಾಟ್ಸ್‌ಆಪ್‌  / ಸಭೆಗಳನ್ನು ನಡೆಸುವ ಮುಖಾಂತರ ಜನಸಾಮಾನ್ಯರಿಗೆ ಮನದಟ್ಟು ಮಾಡುತ್ತಿರುತ್ತೇವೆ ಎಂದು ಹೇಳಿದರು.  ನಂತರ, ಪ್ರಗತಿ ಚಾರಿಟಬಲ್‌ ಟ್ರಸ್ಟಿನ ಅಧ್ಯಕ್ಷರಾದ ರೋಟರಿ ಶ್ರೀ ಬಿ.ಎಲ್.‌ ಶಿವಕುಮಾರ್‌ ರವರು ಪರಿಸರದ ಜಾಗೃತಿ ಬಗ್ಗೆ ವಿಷಯವನ್ನು ಮಂಡಿಸಿದರು. 

ಸಂಘದ ಕಾರ್ಯಕ್ರಮದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2024-25ನೇ ಸಾಲಿನ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಲಾಯಿತು. ನಂತರ ಸಂಘದ ಅಧ್ಯಕ್ಷರಾದ ಜಿ. ನಾಗರಾಜ್‌ ರವರು ಹೊಸ ವರ್ಷದ ಹಾಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಎಲ್ಲರಿಗೂ ಕೋರುತ್ತಾ; ಪತ್ರಕರ್ತರು ಹಗಲು-ರಾತ್ರಿ ಎನ್ನದೆ ಸುದ್ಧಿ ಪ್ರಸಾರ ಮಾಡುವಲ್ಲಿ ನಿರಂತರ ಶ್ರಮ ವಹಿಸುತ್ತಿದ್ದಾರೆ.  ಇಂತಹ ಪತ್ರಕರ್ತರುಗಳಿಗೆ ವಯಸ್ಸು  60 ವರ್ಷಗಳು ದಾಟಿದರೂ ಕೂಡ ಸರ್ಕಾರದ ವತಿಯಿಂದ ಯಾವುದೇ ಪಿಂಚಣೆ ಸೌಲಭ್ಯ ಇರುವುದಿಲ್ಲ.  ಆದರೆ, ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಶಾಸಕರಿಗೆ, ಸಚಿವರಗಳಿಗೆ ಐದು ವರ್ಷಗಳ ಸೇವೆ ಪೂರ್ಣಗೊಳಿಸಿದ ನಂತರ ಸರ್ಕಾರದ ವತಿಯಿಂದ ಪಿಂಚಣಿ ಸೌಲಭ್ಯ ದೊರೆಯುತ್ತದೆ.  

ಪತ್ರಕರ್ತರು  ರಾಜಕೀಯದ ಬಗ್ಗೆ ರಾಜಕಾರಣಿಗಳ ಬಗ್ಗೆ ಸಾರ್ವಜನಿಕ ಸುದ್ಧಿಗಳನ್ನು ಮಾಡುವಲ್ಲಿ ತಮ್ಮ ಜೀವದ ಹಂಗು ತೊರೆದು ಸುದ್ಧಿಗಳನ್ನು ಪ್ರಕಟಗೊಳಿಸುತ್ತಿರುವ ಪತ್ರಕರ್ತರ ಸೇವೆಯನ್ನು ಪರಿಗಣಿಸಿ, 60 ವರ್ಷಗಳು  ದಾಟಿದ ಎಲ್ಲಾ ಪತ್ರಕರ್ತರಿಗೆ  ಮಾಸಿಕ ಪಿಂಚಣಿಯನ್ನು ಮಂಜೂರು ಮಾಡುವ ಕ್ರಮದ ಬಗ್ಗೆ ಸರ್ಕಾರವು ಸೂಕ್ತ ಗಮನ ಹರಿಸುವುದು  ಅತ್ಯಂತ ಅವಶ್ಯಕ.  ಈ ನಿಟ್ಟಿನಲ್ಲಿ, ವಾರ್ತಾ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ, 60 ವರ್ಷ ದಾಟಿದ ಪತ್ರಕರ್ತರಿಗೆ ಯಾವುದೇ ಷರತ್ತು/ನಿಯಮಗಳನ್ನು ವಿಧಿಸದೆ  ಪತ್ರಿಕೋದ್ಯಮದಲ್ಲಿ ಸಲ್ಲಿಸಲಾಗಿರುವ ಸೇವೆಯನ್ನು ಪರಿಗಣಿಸಿ ಹಾಗೂ ಅವರ ಆಧಾರ್‌ ಕಾರ್ಡ್‌ಗಳನ್ನು ಪರಿಶೀಲಿಸಿ 60 ವರ್ಷ ಆಗಿದೆಯೆಂದು ಖಚಿತಪಡಿಸಿಕೊಂಡು ಮಾಸಿಕ ಪಿಂಚಣಿ ಸೌಲಭ್ಯವನ್ನು ನೀಡುವುದು ಸೂಕ್ತವೆಂದು ಈ ಸಂದರ್ಭದಲ್ಲಿ ಜಿ. ನಾಗರಾಜ್‌ ರವರು ತಿಳಿಸಿದರು. 

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರಾದ ಶ್ರೀ ಎಂ. ಸಿದ್ದರಾಜುರವರು,  ನಿಕಟ ಪೂರ್ವ ಅಧ್ಯಕ್ಷರಾದ   ಶ್ರೀ ಸದಾಶಿವ ಶೆಣೈ ರವರು, ಟಿ.ಎಸ್.ಆರ್ ಪ್ರಶಸ್ತಿ ಪುರಸ್ಕೃತರಾದ ಶ್ರೀ ಗಂಗಾಧರ ಮೊದಲಿಯಾರ್‌ ರವರು;, “ಇಂದು ಸಂಜೆ” ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ  ಶ್ರೀಮತಿ ಪದ್ಮ ನಾಗರಾಜು ರವರು; ಹಾಗೂ ರೋಟರಿ ಜಿಲ್ಲಾ ಗೌವರ್ನರ್‌ ಆದಂತಹ ಶ್ರೀ ರವಿಶಂಕರ್‌  ಡಾಕೋಜು ರವರು, ಹಾಗೂ ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ   ಶ್ರೀ ವೆಂಕಟನಾರಾಯಣ, ಹಿರಿಯ ಪತ್ರಕರ್ತರು;, ಶ್ರೀ ಸಚಿವ ಶ್ರೀಧರ್, ಹಿರಿಯ ಪತ್ರಕರ್ತರು;  ಶ್ರೀ ಕೆ ಎಲ್ ವೆಂಕಟೇಶ್, ಸಂಪಾದಕರು ಇಂಜಿನಿಯರ್ಸ್ ಮಿತ್ರ, ಹಾಗೂ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಪತ್ರಕರ್ತರ  ಉಪಸ್ಥಿತಿಯಲ್ಲಿ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.  ಕಾರ್ಯಕ್ರಮದ ನಿರೂಪಣೆಯನ್ನು ಕಲಾವಿದರಾದ ವೆಂಕಟರಾಜು ಹಾಗೂ ಪತ್ರಕರ್ತರಾದ ಮೌರ್ಯಪೂಜಾರಿ ರವರು ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.  

ಇದೇ ಸಂದರ್ಭದಲ್ಲಿ ಗೌರವ ಸನ್ಮಾನವನ್ನು ಹೂವಿನ ಕುಂಡಗಳನ್ನು ನೀಡುವುದರ ಮೂಲಕ ಎಲ್ಲರನ್ನೂ ಗೌರವಿಸಲಾಯಿತು. 

ಸಂಘದ ಪ್ರಧಾನ ಕಾರ್ಯದರ್ಶಿಯಾದ ವಿಶ್ವನಾಥ್‌ ರವರು ಹಾಗೂ ಸುಮಾ, ಕಾರ್ಯದರ್ಶಿ ಹಾಗೂ ಸಂಘದ ಪದಾಧಿಕಾರಿಗಳು  ಇವರು  ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.   ಈ ಕಾರ್ಯಕ್ರಮಕ್ಕೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು.


Post a Comment

0Comments

Post a Comment (0)