ಆಚಾರ್ಯ ಶ್ರೀರಾಕುಂ ಅಂಧ ಮಕ್ಕಳ ಶಾಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ*

VK NEWS
By -
0

ಆಚಾರ್ಯ ರಾಕುಂ ಅಂಧರ ಶಾಲೆಯಲ್ಲಿ ನೂತನ ವರ್ಷದ ವರ್ಷಾಚರಣೆ ಮತ್ತು ನಿವೃತ್ತ ಐ.ಪಿ.ಎಸ್ ಅಧಿಕಾರಿ ಬಿ.ಎನ್.ಎಸ್.ರೆಡ್ಡಿರವರಿಗೆ ಅಭಿನಂದನಾ ಸಮಾರಂಭ.

ರಾಕುಂ ಸ್ವಾಮೀಜಿರವರು, ಇಂಡಿಯನ್ ಆಯಿಲ್ ರಾಜ್ಯ ಪ್ರಧಾನ ವ್ಯವಸ್ಥಾಪಕ ಸಿದ್ದಾರ್ಥ ಅಗರವಾಲ್, ಬಿ.ಎನ್.ಎಸ್ ರೆಡ್ಡಿ(IPS)ಡಿಜಿಪಿ ನಿವೃತ್ತ ಮತ್ತು ಐ.ಎನ್.ಟಿ.ಯು.ಸಿ.ಅಧ್ಯಕ್ಷರಾದ ಲಕ್ಷ್ಮಿ ವೆಂಕಟೇಶ್ ರವರು ಅಂಧ ಮಕ್ಕಳ ಜೊತೆಯಲ್ಲಿ ಕೇಕ್ ಕತ್ತರಿಸಿ ಹೊಸ ವರ್ಷದ ಅಚರಣೆ ಮಾಡಿದರು.

ಇದೇ ಸಂದರ್ಭದಲ್ಲಿ *ರಾಕುಂ ಸ್ವಾಮೀಜಿರವರು* ಮಾತನಾಡಿ ಮಾನವೀಯತೆ ಇರುವವರು ಎಲ್ಲರು ಶ್ರೀಮಂತರೆ. ಬಡತನ ಎಂಬುದು ಶಾಪವಲ್ಲ ಅದು ವರ ಎಂದು ಭಾವಿಸಿ ಜೀವನದಲ್ಲಿ ಸಾಧನೆ ಮಾಡಿದಾಗ ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ.


ಶ್ರೀಮಂತರ ಬಳಿ ಹಣವಿರಬಹುದು ಸಹಾಯ ಮಾಡುವ ಮನೋಸ್ಥಿತಿ ಇರಬೇಕು. ವಿದ್ಯೆ,ಹಣ, ಸಂಪತ್ತು ಎಲ್ಲರಿಗೂ ಸಮಾನ ಹಂಚಿಕೆಯಾಗಬೇಕು. 

ಬಡತನ ನಿವಾರಣೆಯಾಗಬೇಕಾದರೆ  ಒಬ್ಬರಿಗೆ, ಒಬ್ಬರು ಸಹಕಾರ, ಸಹಾಯ ಮಾಡುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.

*ಬಿ.ಎನ್.ಎಸ್.ರೆಡ್ಡಿರವರು* ಮಾತನಾಡಿ ಶಿಕ್ಷಣ ಎಂಬುದು ಶಕ್ತಿ, ವಿದ್ಯಾವಂತರಾದರೆ ಸಮಾಜದಲ್ಲಿ ಗೌರವ ಮಾನ್ಯತೆ ಸಿಗುತ್ತದೆ.


ಯಾವುದೇ ಕೆಲಸವಾಗಲಿ ಮೇಲು ಕೀಳು ಎಂಬುದು ಇಲ್ಲ, ಶ್ರದ್ದೆಯಿಂದ ಕೆಲಸ ಮಾಡಬೇಕು. ಸಮಾಜದಲ್ಲಿ ಇರುವ ಎಲ್ಲ ಮಕ್ಕಳಿಗೆ ಸಮಾನ ಶಿಕ್ಷಣ ಸಿಗಬೇಕು ಆಗ ಸಮಾಜ, ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.


*ಸಿದ್ದಾರ್ಥ ಅಗರವಾಲ್* ರವರು ಮಾತನಾಡಿ ದೇಶದ ಏಳಿಗೆ ಮತ್ತು ಸಮಾಜದಲ್ಲಿ ಉತ್ತಮ ಕಾರ್ಯಗಳಿಗೆ ಇಂಡಿಯನ್ ಆಯಿಲ್ ಸಹಕಾರ ನೀಡುತ್ತಿದೆ.

ಶಿಕ್ಷಣ, ಕ್ರೀಡೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಇಂಡಿಯನ್ ಆಯಿಲ್ ಸಂಸ್ಥೆಯು ಸಹಕಾರ, ಸಹಾಯ ಹಸ್ತ ನೀಡುತ್ತಾ ಬಂದಿದೆ ಎಂದು ಹೇಳಿದರು.

ಅಂಧ ಮಕ್ಕಳಿಂದ ಭರತನಾಟ್ಯ, ಗೀತೆಗಾಯನ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Post a Comment

0Comments

Post a Comment (0)