ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ: ಬಿಜೆಪಿ ಜನಸಂಪರ್ಕ ಕಛೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ 100ನೇ ಹುಟ್ಟುಹಬ್ಬದ ಪ್ರಯುಕ್ತ ಸುಶಾಸನ ದಿನ, ಅಟಲ್ ಜೀ ಜೀವನ ಚರಿತ್ರೆಯ ಛಾಯಾಚಿತ್ರ ಪ್ರದರ್ಶನ ಮತ್ತು ಬಿಜೆಪಿ ಹಿರಿಯ ಮುಖಂಡರುಗಳಿಗೆ ಸನ್ಮಾನ ಕಾರ್ಯಕ್ರಮ.
ದಕ್ಷ್ಮಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು,ಮಾಜಿ ಪಾಲಿಕೆ ಸದಸ್ಯರುಗಳಾದ ಗಂಗಭೈರಯ್ಯ, ರಾಮಪ್ಪ, ಜಯರತ್ನರವರು ದೀಪ ಬೆಳಗಿಸಿ, ಅಟಲ್ ಜೀರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ ಮಾಡಿದರು.
*ಕೆ.ಉಮೇಶ್ ಶೆಟ್ಟಿರವರು* ಮಾತನಾಡಿ ಅಜಾತಶತ್ರು ,ಸರ್ವಶೇಷ್ಠ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿರವರು 100ನೇ ವರ್ಷದ ಹುಟ್ಟುಹಬ್ಬದ ಶುಭಾದಿನವನ್ನು ಸುಶಾಸನ ದಿನವಾಗಿ ಅಚರಿಸಲಾಗುತ್ತಿದೆ.
ಬಿಜೆಪಿ ಪಕ್ಷ ದೇಶ ಮೊದಲು ಎಂದು ರಾಷ್ಟ್ರ ಭಕ್ತಿ ಕಲಿಸಿದ ಪಕ್ಷ.
ಸುಶಾಸನ ದಿನದ ಶುಭಾ ಸಂದರ್ಭದಲ್ಲಿ ಬಿಜೆಪಿ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ಬಿಜೆಪಿ ಹಿರಿಯ ಮುಖಂಡರುಗಳಾದ ವಿಶ್ವನಾಥ, ಗಂಗಭೈರಯ್ಯ, ಶಿವರಾಂ, ಗೌರಮ್ಮ ರವರಿಗೆ ಸನ್ಮಾನಿಸಲಾಗುತ್ತಿದೆ.
ಅಟಲ್ ಜೀ ಹೆಸರಿನಲ್ಲಿ ಶಕ್ತಿ ಇದೆ, ಮೂರು ಬಾರಿ ದೇಶದ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದರು. ಕಾಶ್ಮೀರದಿಂದ ಕನ್ಯಾಕುಮಾರಿವರಗೆ ಉತ್ತಮ ರಸ್ತೆಗಳು ಇದೆ ಎಂದರೆ ಅಟಲ್ ಜೀ ನೀಡಿದ ಉತ್ತಮ ಆಡಳಿತ ಕಾರಣ, ಕವಿ, ಸಾಹಿತಿ, ಪತ್ರಕರ್ತ ಶೇಷ್ಠ ರಾಜಕಾರಣಿಯಾಗಿ ದೇಶದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದರು.
ಅಟಲ್ ಜೀರವರು ಕಟ್ಟಿಬೆಳಸಿದ ಪಕ್ಷದಲ್ಲಿ ಲಕ್ಷಾಂತರ ಜನ ಇಂದು ನಾಯಕರಾಗಿ ಹೊರಹೊಮ್ಮಿದ್ದಾರೆ.
ಪಕ್ಷ ಕಟ್ಟಲು ನಾಯಕರಿಂದ ಮಾತ್ರ ಸಾಧ್ಯವಿಲ್ಲ, ಕಾರ್ಯಕರ್ತರು ಮುಖ್ಯ. ಗೋವಿಂದರಾಜ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಯಶ್ವಸಿಯಾಗಿ ನೇರವೆರಿದೆ.
ಅಟಲ್ ಬಿಹಾರಿ ವಾಜಪೇಯಿ, ನರೇಂದ್ರಮೋದಿ, ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪರವರು ಸಾಮಾನ್ಯ ಕಾರ್ಯಕರ್ತರಾಗಿದ್ದರು. ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನು ಸಹ ಉನ್ನತ ಸ್ಥಾನ ಅಲಂಕರಿಸಬಹುದು. ಕಾರ್ಯಕರ್ತನೆ ಪಕ್ಷದ ಜೀವಾಳ.
ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ 70ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅಯುಷ್ಮಾನ್ ಭಾರತ್ 5ಲಕ್ಷ ರೂಪಾಯಿವರಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆಯ ಹೆಲ್ತ್ ಕಾರ್ಡ್ ಸಹ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರುಗಳಾದ ಡೊಡ್ಡಯ್ಯ, ಲಕ್ಷ್ಮಿನಾರಾಯಣ್, ಜಯದೇವ, ಶಾಮಣ್ಣ, ಮೋಹನ್ ಕುಮಾರ್, ಶಿವಣ್ಣ,ಆರ್.ವೆಂಕಟೇಶ್, ಬಿಜೆಪಿ ಕಾರ್ಯಕರ್ತರುಗಳು ಭಾಗವಹಿಸಿದ್ದರು.