ಬೆಂಗಳೂರು : ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ ನವರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ (ಕರ್ನಾಟಕ ಸರ್ಕಾರ), ಸಂಸ್ಕೃತಿ ನಿರ್ದೇಶನಾಲಯ (ಭಾರತ ಸರ್ಕಾರ) ಮತ್ತು ಸಂಗೀತ ನಾಟಕ ಅಕಾಡೆಮಿ (ಭಾರತ ಸರ್ಕಾರ) ಇವುಗಳ ಸಹಯೋಗದೊಂದಿಗೆ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರ(ಅಂಚೆ ಕಚೇರಿ ಹತ್ತಿರ)ದಲ್ಲಿ ಸೆಪ್ಟೆಂಬರ್ 10, ಮಂಗಳವಾರ ಸಂಜೆ 6-15ಕ್ಕೆ ವಿದ್ವಾನ್ ಎಂ.ಎ. ಕಾರ್ತೀಕ್ ಇವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ ಏರ್ಪಡಿಸಿದೆ. ಇವರ ಗಾಯನಕ್ಕೆ ವಿದ್ವಾನ್ ಎಸ್. ಜನಾರ್ಧನ್ ಪಿಟೀಲು ವಾದನದಲ್ಲಿ, ವಿದ್ವಾನ್ ಅಪ್ರಮೇಯ ಭಾರಧ್ವಾಜ್ ಮೃದಂಗ ವಾದನದಲ್ಲಿ ಮತ್ತು ವಿದ್ವಾನ್ ಎಸ್. ಉತ್ತಮ್ ಘಟ ವಾದನದಲ್ಲಿ ಸಹಕರಿಸಲಿದ್ದಾರೆ ಎಂದು ಟ್ರಸ್ಟಿನ ಪದಾಧಿಕಾರಿ ಡಾ|| ಭಾಷ್ಯಂ ಚಕ್ರವರ್ತಿ ತಿಳಿಸಿದ್ದಾರೆ.