*ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸೆಪ್ಟೆಂಬರ್ 18ರಂದು ಸರ್.ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಮತ್ತು ಸಾಧಕ/ಸಾಧಕಿ ಇಂಜನಿಯರ್ ಗಳಿಗೆ ಸರ್.ಎಂ.ವಿ.ಪ್ರಶಸ್ತಿ ಪ್ರದಾನ*
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ನೊ.)ವತಿಯಿಂದ ಸರ್.ಎಂ. ವಿಶ್ವೇಶ್ವರಯ್ಯ ಜಯಂತಿ
ಪ್ರಯುಕ್ತ ಇಂಜಿನಿಯರ್ ದಿನಾಚರಣೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ನೌಕರರ ಭವನ, ಬಸವ ಸಭಾಂಗಣದಲ್ಲಿ ದಿನಾಂಕ : 18-09-2024, ಬುಧವಾರ ಬೆಳಗ್ಗೆ 11-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾಧ್ಯಮಗಳಿಗೆ ಮಾಹಿತಿ ನೀಡಿ ಸಂಘದ ವತಿಯಿಂದ ಪ್ರಪ್ರಥಮವಾಗಿ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ ಪ್ರಯುಕ್ತ ದಿನಾಂಕ: 18-09-2024 ರ ಬುಧವಾರದಂದು ಬೆಳಗ್ಗೆ:9:30 ಕ್ಕೆ ಕೆ.ಆರ್.ಸರ್ಕಲ್‌ನಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯರವರ "ಪುತ್ಥಳಿಗೆ ಮಾರ್ಲಾಪಣೆ" ಹಾಗೂ ಬೆಳಿಗ್ಗೆ 11:30 ಗಂಟೆ ನಂತರ ಸಭಾ ಕಾರ್ಯಕ್ರಮ ಇಂಜಿನಿಯರ್ ದಿನಾಚರಣೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಬಿಬಿಎಂಪಿ ನೌಕರರ ಭವನದ ಬಸವ ಸಭಾಂಗಣ ಕೇಂದ್ರ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು, ಮುಖ್ಯ ಅತಿಥಿಗಳಾಗಿ ವಿಶೇಷ ಆಯುಕ್ತರುಗಳಾದ ಡಾ|| ಅವಿನಾಶ್ ಮೆನನ್‌ರಾಜೇಂದ್ರನ್ (ಆಡಳಿತ) ಡಾ| ಹರೀಶ್‌ಕುಮಾರ್ ಕೆ.ಮತ್ತು ಉಪ ಆಯುಕ್ತರಾದ ಡಾ|| ಮಂಜುನಾಥಸ್ವಾಮಿ ಬಿ.ಎಸ್. ಪ್ರಧಾನ ಅಭಿಯಂತರಾದ ಬಿ.ಎಸ್. ಪ್ರಹ್ಲಾದ್, ವಿಶೇಷ ಆಹ್ವಾನಿತರಾಗಿ ಉಪಮುಖ್ಯ ಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಕೆ.ಟಿ.ನಾಗರಾಜ್ ರವರು, ಕರ್ನಾಟಕ ರಾಜ್ಯ ಇಂಜಿನಿಯರುಗಳ ಸಂಘದ ಮಾಜಿ ಅಧ್ಯಕ್ಷರಾದ ನಾಗರಾಜುರವರು ಉದ್ಘಾಟನೆ ಮತ್ತು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪುರಸ್ಕೃತರಗಳಾದ ಬಸವರಾಜ್ ಆರ್. ಕಬಾಡೆ ಮುಖ್ಯ ಪ್ರಧಾನ ವ್ಯವಸ್ಥಾಪಕರು (ಬಿ.ಎಸ್.ಡಬ್ಲೂ.ಎಂ.ಎಲ್)
ಶ್ರೀಮತಿ ಸುಗುಣ,ಮುಖ್ಯ ಅಭಿಯಂತರರು ಪೂರ್ವ ರಾಕೇಶ್ ಕುಮಾರ್ ಜಂಟಿ ನಿರ್ದೇಶಕರು, ಟೌನ್ ಪ್ಲಾನಿಂಗ್
ಹೆಚ್.ಎಸ್.ಮಹದೇಶ್,ಅಧೀಕ್ಷಕ ಅಭಿಯಂತರರು ,ರೂಪೇಶ್, ಕಾರ್ಯಪಾಲಕ ಅಭಿಯಂತರರು ಮುನಿರೆಡ್ಡಿ,ಕಾರ್ಯಪಾಲಕ ಅಭಿಯಂತರರು ,ಎಲ್ ವೆಂಕಟೇಶ್, ಕಾರ್ಯಪಾಲಕ ಅಭಿಯಂತರರು (ಕೆರೆಗಳು)
ರಾಮಚಂದ್ರಪ್ಪ ಹೆಚ್.ಎಸ್.,ಕಾರ್ಯಪಾಲಕ ಅಭಿಯಂತರರು(ಜೆ.ಡಿ.ಟಿ.ಪಿ ದಕ್ಷಿಣ) ರಾಜಣ್ಣಕಾರ್ಯಪಾಲಕ ಅಭಿಯಂತರರು (ಟಿ.ವಿ.ಸಿ.ಸಿ) ,ಬಿ. ಶರತ್,ಕಾರ್ಯಪಾಲಕ ಅಭಿಯಂತರರು (ಎಂ.ಪಿ.ಇ.ಡಿ) , ಬಿ.ಎನ್.ಪ್ರದೀಪ್,ಕಾರ್ಯಪಾಲಕ ಅಭಿಯಂತರರುಶ್ರೀಮತಿ ಅಶಾ, ಸಹಾಯಕ ಕಾರ್ಯಪಾಲಕ ಅಭಿಯಂತರರು (ಟಿ.ವಿ. ದಕ್ಷಿಣ ವಲಯ) ಚಂದ್ರಶೇಖರ್ ನಾಯಕ್ ಸಹಾಯಕ ಅಭಿಯಂತರರು (ಟಿ.ಡಿ.ಆರ್) ಸರ್.ಎಂ.ವಿ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಹೇಳಿದರು.