ರೆಂಕೋ (ಬಿ.ಹೆಚ್.ಇ.ಎಲ್) ಹೌಸ್ ಬಿಲ್ಡಿಂಗ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಶಂಕರ್ ಜಿ.ಬೆಲೇರಿ ನಕಲಿ ಖಾತಾ, ನಕಲಿ ಬಿಬಿಎಂಪಿ ಕಂದಾಯ ರಶೀದಿ, 1999 ರಲ್ಲಿ ಪಡೆದ ಅಮಾನ್ಯ ನೋಟರಿ ಜಿಪಿಎ ಮತ್ತು ಮರಣ ಹೊಂದಿರುವವರ ಜಿಪಿಎ ಬಳಸಿ ನಿವೇಶನ ನೋಂದಣಿ ಮಾಡಿ ಸೊಸೈಟಿಗೆ ವಂಚನೆ.
ಬೆಂಗಳೂರು: ರೆಂಕೋ (ಬಿ.ಹೆಚ್.ಇ.ಎಲ್) ಹೌಸ್ ಬಿಲ್ಡಿಂಗ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಅಧ್ಯಕ್ಷರಾದ ವಿಜಯಕುಮಾರ್ ಮತ್ತು ಮಾಜಿ ಅಧ್ಯಕ್ಷರಾದ ಶಂಕರ್ ಜಿ.ಬೇಲೆರಿ ಹಾಲಿ ನಿರ್ದೇಶಕ ಹಾಗೂ ಜಿ.ಜೆ.ಸುರೇಶ ಹಾಲಿ ಉಪಾಧ್ಯಕ್ಷರು ರವರು ಮತ್ತು ಇವರ ಜೊತೆ ಸೇರಿರುವ ಒಂರ್ದಿವ ನಿರ್ದೇಶಕರು ಸೊಸೈಟಿಯಲ್ಲಿ ಹಲವಾರು ಹಗರಣ ಮತ್ತು ಸೊಸೈಟಿ ನಿಯಾಮವಳಿ ಉಲ್ಲಂಘನೆ ಹಾಗೂ ನಕಲಿ ನೋಂದಣಿ ಮತ್ತು ಖಾತೆ ಹಾಗೂ ಖಾಸಗಿಯವರಿಗೆ ಸದಸ್ಯತ್ವ ನೀಡಿ ಬೆಲೆ ಬಾಳುವ ಸೈಟ್ ಗಳನ್ನು ಮಾರಾಟ ಮಾಡಿರುವ ಕುರಿತು ಬಿಹೆಚ್ಇಎಲ್ ನಲ್ಲಿ ಸುಮಾರು 35 ವರ್ಷ ಸೇವೆ ಸಲ್ಲಿಸಿ ಆಡಳಿತಾಧಿಕಾರಿಯಾಗಿ ನಿವೃತ್ತಿ ಹೊಂದಿದ್ದು ಹಾಗೂ ಸೊಸೈಟಿ ಹಿರಿಯ ಸದಸ್ಯರಾದ ಸಿದ್ಧಹನುಮಪ್ಪರವರು ರವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಪಟ್ಟಣಗೆರೆ ಎರಡನೆ ಹಂತದ ಮುಂದುವರೆದ ಬಡಾವಣೆಯಲ್ಲಿ ಉಳಿಕೆ ಜಾಗದ ಸೈಟ್ ಗಳು ಮತ್ತು ಹೆಚ್ಚಿನ ಮಳೆ ನೀರುಗಾಲುವೆ ಪಕ್ಕದಲ್ಲಿ ಇರುವ ಖಾಲಿ ಜಾಗಗಳಿಗೆ ನಕಲಿ ಸೈಟ್ ನಂಬರ್ ಗಳನ್ನು ಹಾಕಿ 13 ಸೈಟ್ ಗಳನ್ನು ಮಾರಾಟ ಮಾಡಿದ್ದಾರೆ.
ಸೈಟ್ ಗಳಿಗೆ ಸಬ್ ರಿಜಿಸ್ಟ್ರಾರ್ ಮೌಲ್ಯಕ್ಕೆ ಸೊಸೈಟಿಯಿಂದ ರಶೀದಿ ಹಾಕಲಾಗಿದ್ದು ಆದರೆ ಈ ಸೈಟ್ ಗಳ ಮಾರುಕಟ್ಟೆ ಬೆಲೆ ಸಬ್ ರಿಜಿಸ್ಟ್ರಾರ್ ಮೌಲ್ಯಕ್ಕಿಂತ 3 ಪಟ್ಟು ಹೆಚ್ಚು ಬೆಲೆಯುಳ್ಳ ಸೈಟ್ ಗಳನ್ನು ಹೊರಗಿನವರಿಗೆ ನೋಂದಣಿ ಮಾಡಿ ವಂಚನೆ ಮಾಡಿರುತ್ತಾರೆ.
ಸೈಟ್ ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸೊಸೈಟಿಯಲ್ಲಿ ಸದಸ್ಯತ್ವ ನೀಡಿ, ಕೆಲವೇ ತಿಂಗಳ ಅಂತರದಲ್ಲಿ ಅವರಿಗೆ ಸೈಟ್ ನೋಂದಣಿ ಮಾಡಿಕೊಟ್ಟಿದ್ದಾರೆ.
ಸೊಸೈಟಿಯ ಸೈಟ್ ಗಳನ್ನು ಖಾಸಗಿಯವರಿಗೆ ಮಾರಾಟ ಸಲುವಾಗಿ ನಕಲಿ ದಾಖಲೆ ಸೃಷ್ಟಿ ಮತ್ತು ನಕಲಿ ಖಾತೆಗಳೊಂದಿಗೆ ಹೆಚ್ಚಿನ ಮೌಲ್ಯಕ್ಕೆ ಮಾರಾಟ ಮಾಡಿರುವ ಬಗ್ಗೆ ಸಹಕಾರ ಇಲಾಖೆ ಸಹಕಾರ ಕಾಯ್ದೆ 1959ರ ಕಲಂ 65 ರ ಅಡಿಯಲ್ಲಿ ಸೊಸೈಟಿಯ ದಾಖಲೆಗಳನ್ನು ಪರಿಶೀಲಿಸಿ 10 ಗಂಭೀರ ಆರೋಪಗಳ ಪಟ್ಟಿಯಲ್ಲಿ 3 ನೇ ಮತ್ತು 4 ನೇ ಹಂತದಲ್ಲಿ ಅಭಿವೃದ್ಧಿಕಾರರಿಗೆ ಹೆಚ್ಚಿನ ಹಣ ಪಾವತಿಸಿ ಸಂಘಕ್ಕೆ ನಷ್ಟ ಉಂಟುಮಾಡಿರುವ ಅಭಿಪ್ರಾಯ ತಿಳಿಸಿ, ಸಹಕಾರ ಇಲಾಖೆಯ ಪರಿವೀಕ್ಷಣಾ ಅಧಿಕಾರಿ ತಮ್ಮ ಅಂತಿಮ ವರದಿಯಲ್ಲಿ ನಮೂದಿಸಿ ಇಲಾಖೆಗೆ ಸಲ್ಲಿಸಿರುತ್ತಾರೆ. ಅದರಂತೆ ಸಹಕಾರ ಸಂಘದ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ, ಅವರು ಕಲಂ 68 ರ ಅಡಿ ಅನುಪಾಲನೆಗೆ ಆದೇಶ ಹೊರಡಿಸಿದ್ದು, ಹಾಗೆಯೇ ಕಲಂ 29 ಸಿ ಅಡಿಯಲ್ಲಿ ಸೊಸೈಟಿಯ 12 ನಿರ್ದೇಶಕರನ್ನು ಅನರ್ಹಗೊಳಿಸಲು ನೋಟಿಸ್ ಜಾರಿ ಮಾಡಿರುತ್ತಾರೆ.
ಕರ್ನಾಟಕ ಮಾನ್ಯ ಲೋಕಾಯುಕ್ತ ರವರಿಗೆ ನಿಗದಿತ ನಮೂನೆಯಲ್ಲಿ ಸೈಟ್ ಗಳ ಸಂಪೂರ್ಣ ದಾಖಲೆಗಳನ್ನು ಲಗತ್ತಿಸಿ ದೂರನ್ನು ಅಶೋಕ್ ಎಸ್ ಕುಳ್ಳಿ ರವರು ಸಲ್ಲಿಸಿ, ತಮ್ಮ ಅರಿಕೆಯಲ್ಲಿ ಕಲಂ 420, 465, 468, 470, 471, 472 r/w 120-ಬಿ ಮತ್ತು ಕಲಂ 34 ರ IPC Code ಮತ್ತು ಕಲಂ 7, 7ಎ, 8, 9, 10 ರ ಪ್ರಿವೆನ್ಸನ್ ಆಪ್ ಕರಪ್ಸೆನ್ ಕಾಯ್ದೆ (ತಿದ್ದುಪಡಿ 2018) ರಂತೆ ಶಿಕ್ಷಾರ್ಹ ಅಪರಾಧಗಳಿಗೆ ಸೂಕ್ತ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲು ಕೋರಿರುತ್ತಾರೆ. ಈ ಬಗ್ಗೆ ಮಾನ್ಯ ಲೋಕಾಯುಕ್ತರು ದಿನಾಂಕ 20.05.2024 ನೋಟಿಸ್ ಜಾರಿ ಮಾಡಿರುತ್ತಾರೆ.
ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಉಪ ಆಯುಕ್ತರು ರವರು ನಕಲಿ ಖಾತಾ ಮತ್ತು ನಕಲಿ ಬಿಬಿಎಂಪಿಯ ಕಂದಾಯ ರಶೀದಿ ಸಲ್ಲಿಸಿ ಸೈಟ್ ಗಳನ್ನು ನೋಂದಣಿ ಮಾಡಿರುವ ಬಗ್ಗೆ ದೂರಿಗೆ ಸಂಬಂಧಿಸಿ ದಿನಾಂಕ 29.07.2024 ರಂದು ನೋಟಿಸ್ ಜಾರಿ ಮಾಡಿರುತ್ತಾರೆ.
ಈ ನೋಟಿಸ್ ಗಳ ಅಂಶಗಳಿಗೆ ಪೂರಕ ದಾಖಲೆಗಳನ್ನು ನೀಡದೆ ತಮ್ಮ ಅಧಿಕಾರ ಮತ್ತು ಇತರೆ ಅಂಶಗಳ ಪ್ರಭಾವದಿಂದ ವಾಮ ಮಾರ್ಗಗಳನ್ನು ಅನುಸರಿಸಿ ಸಮಯ ಮುಂದೂಡುವ ಸಂಚು ರೂಪಿಸಿರುತ್ತಾರೆ.
ಇದರ ಸಂಪೂರ್ಣ ದಾಖಲೆ ಇದ್ದು, ಸೊಸೈಟಿ ನೈಜ ಮತ್ತು ಹಿರಿಯ ಸದಸ್ಯರಿಗೆ ಸೈಟ್ ಸಿಗಬೇಕು ಎಂಬುದು ನಮ್ಮ ಹೋರಾಟ ಎಂದು ಹೇಳಿದರು.