ಬೆಂಗಳೂರು : ರಾಜಾಜಿನಗರದ ಶ್ರೀ ವಿಠಲ ಮಂದಿರ ಟ್ರಸ್ಟ್ ವತಿಯಿಂದ ಆಗಸ್ಟ್ 20, 21 ಮತ್ತು 22ರಂದು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಪ್ರಯುಕ್ತ ಮೂರು ದಿನಗಳಲ್ಲಿಯೂ ಬೆಳಗ್ಗೆ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಜರುಗುತ್ತವೆ.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು :
ಆಗಸ್ಟ್ 20, ಮಂಗಳವಾರ ಸಂಜೆ 5-30ಕ್ಕೆ ಶ್ರೀಮತಿ ಸುಷ್ಮಾ ಶ್ರೇಯಸ್ ಮತ್ತು ಸಂಗಡಿಗರಿಂದ "ದಾಸವಾಣಿ" ನಂತರ ಶ್ರೀ ಪ್ರಸನ್ನ ಕೊರ್ತಿ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ",
ಆಗಸ್ಟ್ 21, ಬುಧವಾರ ಸಂಜೆ 5-30ಕ್ಕೆ ರೇವಣಕರ್ ಸ್ಕೂಲ್ ಆಫ್ ಆರ್ಟ್ಸ್ ಅಕಾಡೆಮಿಯ ವಿ|| ಮೇಘನಾ ರೇವಣಕರ್ ಮತ್ತು ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ" ನಂತರ ವಿ|| ಗೀತಾ ಶ್ಯಾಮಪ್ರಸಾದ್ ಮತ್ತು ಸಂಗಡಿಗರಿಂದ "ವೀಣಾವಾದನ".
ಆಗಸ್ಟ್ 22, ಗುರುವಾರ ಬೆಳಗ್ಗೆ ಬೀದಿ 9ಕ್ಕೆ ರಾಜಾಜಿನಗರದ ರಾಜಬೀದಿಯಲ್ಲಿ ರಥೋತ್ಸವ, ಸಂಜೆ 6-30ಕ್ಕೆ ಕಾಸರವಳ್ಳಿ ಸಹೋದರಾದ ವಿ|| ರೂಪಾ, ವಿ|| ದೀಪಾ ಮತ್ತು ಸಂಗಡಿಗರು "ದಾಸವಾಣಿ" ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಶ್ರೀ ಜಯಸಿಂಹ ತಿಳಿಸಿದ್ದಾರೆ.