ಕಾಂಗ್ರೆಸ್ ಭವನ: 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಯುವ ಕಾಂಗ್ರೆಸ್ ಪಕ್ಷದ ವತಿಯಿಂದ ಅದ್ದೂರಿಯಾಗಿ ಅಚರಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಜವಾಹರಲಾಲ್ ರವರ ಬಾವಚಿತ್ರಕ್ಕೆ ಪುಷ್ಪನಮನವನ್ನು ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥಗೌಡರು ಸಲ್ಲಿಸಿದರು, ಯುವ ಕಾಂಗ್ರೆಸ್ ಪಕ್ಷದ ನೂರಾರು ಪದಾಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹೆಚ್.ಎಸ್.ಮಂಜುನಾಥಗೌಡರವರು ಮಾತನಾಡಿ ದೇಶ ಸ್ವಾತಂತ್ರ್ಯ ಲಭಿಸಿಲು ಯುವಕ, ಯುವತಿಯರು ಮಹತ್ವವಾದ ಪಾತ್ರ ವಹಿಸಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಪಾಲ್ಗೊಂಡಿರುವ ಹೆಮ್ಮೆಯ ಸಂಗತಿಯಾಗಿದೆ. ದೇಶದ ಐಕ್ಯತೆ ,ಏಕತೆ, ಸಮಗ್ರತೆ ಸಂವಿಧಾನ ರಕ್ಷಣೆಗಾಗಿ ಪಣ ತೊಡೋಣ.
ಮಹಾತ್ಮ ಗಾಂದಿಜೀ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವ ಸಮೂಹ ಸಾಗಬೇಕು.
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಮತ್ತು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ನೇತೃತ್ವದಲ್ಲಿ 5 ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಕುಟುಂಬಗಳಿಗೆ ಯೋಜನೆ ಲಭಾ ಲಭಿಸಿದೆ.
ಯುವ ಸಮೂಹಕ್ಕೆ ಕಾಂಗ್ರೆಸ್ ಪಕ್ಷ ಹೆಚ್ಚು ಸಹಕಾರ, ಬೆಂಬಲ ನೀಡುತ್ತಿದೆ, ಇಂದಿನ ಯುವ ಸಮೂಹವೇ ದೇಶದ ಸಂಪತ್ತು ಎಂದು ಹೇಳಿದರು.