ದಿನಾಂಕ 10.08.2024 ರ ಶನಿವಾರ ಸಂಜೆ ನಗರದ ಕುಮಾರಸ್ವಾಮಿ ಬಡಾವಣೆಯ "ಗ್ರಂಥದ ಗುಡಿ" ನಗರ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಸಿರಿಕಾಂತವಿಠಲ ಡಾ. ಬ.ಲ.ಸುರೇಶ್ ವಿರಚಿತ "ಶ್ರೀ ವಿಷ್ಣು ಸಹಸ್ರನಾಮ ಮಹಾಕಾವ್ಯ" ಮಹಾ ಗ್ರಂಥದ ದ್ವಿತೀಯ ಮುದ್ರಣದ ಪ್ರತಿಯು ವಿದ್ಯಾ ವಾಚಸ್ಪತಿ ಹರಿದಾಸಭಾಸ್ಕರ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿರವರ ಅಧ್ಯಕ್ಷತೆಯಲ್ಲಿ ವಿದ್ಯುಕ್ತವಾಗಿ ಲೋಕಾರ್ಪಣೆಗೊಂಡಿತು.
ಕೃತಿಯ ಕತೃ ಡಾ. ಬ. ಲ ಸುರೇಶ್ ರವರ ಸಮ್ಮುಖದಲ್ಲಿಸಮಾಜ ಸೇವಕರು ಖ್ಯಾತ ಬರಹಗಾರರು ಆದ ಶ್ರೀ ಕೇಶವ ಗೋಪಾಲ ಅಯ್ಯಂಗಾರ್, ರಂಗಸಾಗರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಶ್ರೀ ಆರ್ ದೇವರಾಜ್ ರವರು, ಬರಹಗಾರರು ಬಾಲ್ ಪೆನ್ ಆರ್ಟಿಸ್ಟ್ ಆದ ಶ್ರೀ ವಿ.ಎಸ್. ಕುಮಾರ್ ರವರು, ರಾಜ್ಯದ ಶ್ರೇಷ್ಠ ಗ್ರಂಥಪಾಲಕರೆಂದೆ ಖ್ಯಾತರಾಗಿರುವ ಶ್ರೀ ಆನಂದ್ ರವರನ್ನೊಳಗೊಂಡಂತೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.