ಹೊಸಕೋಟೆ ಲಯನ್ ಸಂಸ್ಥೆಗೆ 50 ವರ್ಷ ಪೂರೈಸಿದ ಶುಭ ಸಂದರ್ಭದಲ್ಲಿ ಗೋಲ್ಡನ್ ಜುಬಿಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ಬಿ.ಎಸ್. ರಾಜಶೇಖರಯ್ಯ ರವರು ಉದ್ಘಾಟಿಸಿದರು ನಮ್ಮ ಜಿಲ್ಲೆಯಲ್ಲಿ ಇರುವ ಕ್ಲಬ್ ಗಳಲ್ಲಿ ಹೊಸಕೋಟೆ ಲಯನ್ ಸಂಸ್ಥೆ ಪ್ರತಿಷ್ಠ ಸಂಸ್ಥೆಯಾಗಿದೆ, ಅದು ಐವತ್ತು ವರ್ಷಗಳಿಂದ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
- ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲಯನ್ ಜಿಲ್ಲಾ ಗವರ್ನರ್ ಸಿ.ಎಂ. ನಾರಾಯಣಸ್ವಾಮಿ ಮಾತನಾಡುತ್ತಾ ಹೊಸಕೋಟೆ ಲಯನ್ ಸಂಸ್ಥೆಗೆ ಒಂದು ಇತಿಹಾಸವಿದೆ ಅದು ಅಂತರಾಷ್ಟ್ರೀಯ ಡೈರೆಕ್ಟರ್ ರನ್ನು ನೀಡಿದ ಸಂಸ್ಥೆಯಾಗಿದೆ ಅನೇಕ ಪ್ರತಿಷ್ಠ ಸಂಸ್ಥೆಗಳಲ್ಲಿ ಇದು ಒಂದಾಗಿದೆ ಇದು ಇನ್ನೂ ಉತ್ತಮ ಸೇವೆ ಮಾಡಲೆಂದು ಶುಭ ಹಾರೈಸಿದರು.
ಉಪರಾಜ್ಯಪಾಲರಾದ ರಾಜು ಚಂದ್ರಶೇಖರ್ ಹೊಸಕೋಟೆ ಲೈನ್ಸ್ ಸಂಸ್ಥೆ ಮುಂದೆ ಇನ್ನೂ ನೂರು ವರ್ಷ ಸಾಗಿ ಇನ್ನು ಉತ್ತಮ ಕೆಲಸ ಮಾಡಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಕ್ರಾಂತಿಯ ಅಧ್ಯಕ್ಷ ಸಾಸ, ವಲಯ ಅಧ್ಯಕ್ಷರಾದ ಗೋಪಿನಾಥ್, ಜಿಲ್ಲಾ ಮಾಧ್ಯಮ ಸಲಹೆಗಾರರಾದ ಜಿ.ಎಸ್. ಮಂಜುನಾಥ್, ಸಂಸ್ಥೆಯ ಟ್ರಸ್ಟ್ ಅಧ್ಯಕ್ಷರಾದ ಸಿ.ಶ್ರೀನಿವಾಸಯ್ಯ, ಹಿರಿಯ ಸದಸ್ಯರಾದ ಸಿ.ಎ.ವಿಜಯ, ಕಾರ್ಯದರ್ಶಿ ವಿ.ಎನ್. ಮಂಜುನಾಥ್, ಖಜಾಂಚಿ ಮುರಳಿಧರ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಮಹೇಶ್ ವಹಿಸಿದ್ದರು .
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಒಂದು ಸಾವಿರ ಸ್ಕೂಲ್ ಬ್ಯಾಗ್ ಗಳನ್ನು ವಿತರಿಸಲಾಯಿತು ಹಾಗೂ ಹೊಸಕೋಟೆ ಲಯನ್ ಸಂಸ್ಥೆ ಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಸದಸ್ಯರನ್ನು ಸನ್ಮಾನಿಸಲಾಯಿತು.