ಇತ್ತೀಚಿಗೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜ್ಯ ಮಟ್ಟದ ರಾಯಲ್ ಶೈಲಿಯ ನೃತ್ಯ ಉತ್ಸವ "ನೃತ್ಯಾಂಗನ" ವು ಹೀನಾ ಜೈನ್ ಅವರ ವತಿಯಿಂದ ಆಯೋಜಿಸಲಾಗಿತ್ತು.
ಸಂಗೀತ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಪ್ರದರ್ಶಿಸಲು ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಲಾಗಿತ್ತು.
ದೇಶದ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಭಾಗವಹಿಸಿದ್ದ ಈ ವೇದಿಕೆಯಲ್ಲಿ, ಅವರವರ ಪ್ರತಿಭೆಗಳನ್ನು ಪ್ರದರ್ಶನ ಮಾಡಲು ಅತ್ಯುತ್ತಮ ಅವಕಾಶವನ್ನು ಒದಗಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿನೇಂದ್ರ ಖನಗಾವಿ IPS (ಪೊಲೀಸ್ ವರಿಷ್ಠಾಧಿಕಾರಿ, ಬೆಂಗಳೂರು), ಗೌರವ ಅತಿಥಿಗಳಾಗಿ ವಿಧೂಷಿ ವೈ.ಜಿ.ಶ್ರೀಲತಾ ನಿಕ್ಷಿತ್, ಆರ್.ಜೆ.ರಶ್ಮಿ-93.5 ರೆಡ್ ಎಫ್.ಎಂ., ಲಯನ್ ಟಿ.ಎಂ.ಸೋಮರಾಜು, ಶೋಭಾ ಪಿ.ಎನ್, ಡಾ.ಕುಮೈಲ್ ಅಬ್ಬಾಸ್ ಮತ್ತು ಮೀರ್ ಸಮೀಮ್ ರಜಾ ಉಪಸ್ಥಿತರಿದ್ದರು.
ಸೀಸನ್ 7ರ ಅಗ್ರ 5 ವಿಜೇತರುಗಳಾದ ಸುಪ್ರಿಯಾ ಮಿಶ್ರಾ, ಸ್ಫೂರ್ತಿ ರಾಜೇಶ್, ನಿಶಾ ಪ್ರಸನ್ನ ನಾಯರ್, ಸಂಸ್ಕೃತಿ ಮಿಶ್ರಾ ಮತ್ತು ಪ್ರಿನ್ಸೆಸ್ ಡ್ಯಾನ್ಸ್ ಸ್ಟುಡಿಯೋ ಗುರುಗಳಿಗೆ ಕಿರೀಟ ತೊಡಿಸಿ ಸನ್ಮಾನಿಸುವುದರೊಂದಿಗೆ ಪುರಸ್ಕಾರಗಳನ್ನು ನೀಡಿ ಗೌರವಿಸಲಾಯಿತು.