ಬೀದಿ ಬದಿ ವ್ಯಾಪಾರಿಗಳಿಗೆ ಬೃಹತ್ ಛತ್ರಿ ವಿತರಣ*

VK NEWS
By -
0

ಶ್ರೀ ಮಹದೇವಪ್ಪ ಪ್ರತಿಷ್ಠಾನ: ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

ಶಂಕರಮಠ: ಶ್ರೀ ಮಹದೇವಪ್ಪ ಪ್ರತಿಷ್ಠಾನದ ವತಿಯಿಂದ ಡಾಸೋಲಂಕಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಯಾ ಶಿಬಿರ ಆಯೋಜನೆ.

ಮಾಜಿ ರಾಜ್ಯಸಭಾ ಸದಸ್ಯರಾದ ಪ್ರೋ.ರಾಜೀವ್ ಗೌಡರವರು, ನಟ, ನಿರ್ದೇಶಕ ಎಸ್.ನಾರಾಯಣ್, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಸ್.ಕೇಶವಮೂರ್ತಿ, ಆಡಳಿತ ಪಕ್ಷದ ಮಾಜಿ ನಾಯಕರಾದ ಎಮ್.ಶಿವರಾಜುರವರು, ಮಾಜಿ ನಗರ ಪಾಲಿಕೆ ಸದಸ್ಯೆ ಶ್ರೀಮತಿ ಮಹದೇವಮ್ಮ, ಸೋಲಂಕಿ ಆಸ್ಪತ್ರೆ ವೈದ್ಯರಾದ ಡಾ||ಹರ್ಪತ್ ಸೋಲಂಕಿರವರು, ಕಾಂಗ್ರೆಸ್ ಪಕ್ಷದ ಮುಖಂಡರಾದ ಜನಾರ್ಧನ್ ರವರು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು.

ಬೀದಿ ಬದಿಯ ವ್ಯಾಪಾರಿಗಳಿಗೆ ಮಳೆ, ಗಾಳಿಯಿಂದ ರಕ್ಷಣೆಗಾಗಿ ಬೃಹತ್ ಛತ್ರಿಗಳನ್ನು ವಿತರಿಸಲಾಯಿತು.

*ಪ್ರೋ.ರಾಜೀವ್ ಗೌಡರು* ಮಾತನಾಡಿ ವಿಡಿಯೊ ಗೇಮ್ಸ್ ಮತ್ತು ಮೊಬೈಲ್ ಸತತವಾಗಿ ವೀಕ್ಷಣೆಯಿಂದ ಮಕ್ಕಳಿಂದ ಹಿಡಿದು ಎಲ್ಲರ ವಯಸ್ಸರಲ್ಲಿ ಕಣ್ಣಿನ ದೋಷ ಬರುತ್ತಿದೆ.

ಪ್ರತಿಯೊಬ್ಬರು ಆರೋಗ್ಯವಂತರಾಗಿ ಇರಲು ದೃಹಿಕ ಚಟುವಟಿಕೆಗಳಾದ ವಾಕಿಂಗ್ ಮತ್ತು ವ್ಯಾಯಾಮ ಮಾಡಬೇಕು, ಉತ್ತಮ ಆಹಾರ ಪದ್ದತಿಯನ್ನು ಜೀವನಶೈಲಿಯಾಗಬೇಕು.

ಆರೋಗ್ಯ ಕ್ಷೇತ್ರದಲ್ಲಿ ರಾಜ್ಯದ ಕಾಂಗ್ರೆಸ್ ಪಕ್ಷದ ಸರ್ಕಾರ ಬಡಜನರಿಗೆ ಉತ್ತಮ ಸೇವೆ ಕೊಡುತ್ತಿದೆ ಎಂದು ಹೇಳಿದರು.

*ನಟ, ನಿರ್ದೇಶಕ ಎಸ್.ನಾರಾಯಣ್* ರವರು ಮಾತನಾಡಿ  ಜನಗಳ ನಡುವೆ, ಜನರಿಗೆ ಸೇವೆ ಮಾಡುವವರು ನಿಜವಾದ ರಾಜಕಾರಣಿ. ಉತ್ತಮ ಜನರು ರಾಜಕಾರಣಕ್ಕೆ ಬರಬೇಕು.

ಮೂರು ತಿಂಗಳಿಗೆ ಒಮ್ಮೆ ಆರೋಗ್ಯ ತಪಾಸಣೆ ಮಾಡಿಸಬೇಕು ಅದರೆ ಆರ್ಥಿಕವಾಗಿ ಹಿಂದುಳಿದವರು ತಪಾಸಣೆಗೆ ಹೋಗುವುದಿಲ್ಲ,  ಉಚಿತ ಆರೋಗ್ಯ ತಪಾಸಣೆ ಶಿಬಿರದಿಂದ ಅವರಿಗೆ ಅನುಕೂಲವಾಗಲಿದೆ.

ಕೆಟ್ಟ ಸಹವಾಸ, ಕೆಟ್ಟ ವ್ಯಸನಗಳಾದ ಸಿಗರೇಟ್, ಕುಡಿತದ ಚಟಗಳಿಂದ ದೂರ ಇರಿ, ಉತ್ತಮ ಆರೋಗ್ಯ ಚಟುವಟಿಕೆಗಳನ್ನು ಆಳವಡಿಸಿಕೊಳ್ಳಿ ಎಂದು ಹೇಳಿದರು.

*ಎಸ್.ಕೇಶವಮೂರ್ತಿರವರು* ಮಾತನಾಡಿ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ ಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸತತವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ.

ಬಡಜನರ ಸೇವೆ ದೇವರ ಸೇವೆ ಮಾಡಿದಂತೆ. ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ನಾಡಿನ ಪ್ರತಿ ಕುಟುಂಬಕ್ಕೆ ತಲುಪಿಸಿ ನಾಡಿನ ಜನರ ಸೇವೆ ಮಾಡಿದೆ ಎಂದು ಹೇಳಿದರು.

*ಎಮ್.ಶಿವರಾಜುರವರು* ಮಾತನಾಡಿ ಶ್ರೀ ಮಹದೇವಪ್ಪ ಪ್ರತಿಷ್ಠಾನ ಶಿಕ್ಷಣ, ಆರೋಗ್ಯ ಮತ್ತು ಪರಿಸರದ ಕುರಿತು ಸಾಮಾಜಿಕ ಸೇವೆ ಮಾಡುತ್ತಿದೆ.

27 ಸರ್ಕಾರಿ ಮತ್ತು ಬಿಬಿಎಂಪಿ ಶಾಲೆ 50ನೋಟ್ ಪುಸ್ತಕವನ್ನು ಉಚಿತವಾಗಿ ಈ ವರ್ಷ ವಿತರಿಸಲಾಗಿದೆ.

ನಮ್ಮ ಪ್ರತಿಷ್ಠಾನದ ವತಿಯಿಂದ 500ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಯೆ ಮಾಡಿಸಲಾಗಿದೆ.

ಶ್ರೀ ಮಹದೇವಪ್ಪ ಪ್ರತಿಷ್ಠಾನ ಜನಸೇವೆಯೆ  ಉದ್ದೇಶವಾಗಿದೆ ಎಂದು ಹೇಳಿದರು.

Post a Comment

0Comments

Post a Comment (0)