ಮುಳಿಯ ಪಾಕೋತ್ಸವ
ಜುಲೈ 14 ರಂದು ಶ್ರೀಮತಿ ಸಂಧ್ಯಾ ಜಯರಾಂ ಸಹಯೋಗದೊಂದಿಗೆ ಡಿಕೆನ್ಸೆನ್ ರಸ್ತೆ, ಮಣಿಪಾಲ್ ಸೆಂಟರ್ ನಲ್ಲಿರುವ ಮುಳಿಯ ಜ್ಯುವೆಲ್ಸ್ ಅಗ್ನಿರಹಿತ ಪಾಕೋತ್ಸವ ಸ್ಪರ್ಧೆ ಏರ್ಪಾಡು ಮಾಡಿದ್ದರು.ಬೆಳಗ್ಗಿನ ವೇಳೆಯಲ್ಲಿ ದಂಪತಿಗಳಿಗೆ, ಶ್ರೀಮಾನ್ ಶ್ರೀಮತಿ ವಿಭಾಗ ಇತ್ತು.ಮಧ್ಯಾಹ್ನದ ಸಮಯದಲ್ಲಿ ಬಂಧು ಮಿತ್ರರ ಸಹಯೋಗದ ವಿಭಾಗ ಇತ್ತು.ಸ್ಪರ್ಧೆ ಸಸ್ಯಾಹಾರ ವಿಭಾಗ ಮಾತ್ರ ಇತ್ತು.
ಬೆಳಗ್ಗಿನ ಸ್ಪರ್ಧಾ ವಿಭಾಗದ ಅತಿಥಿಗಳು ಗಾಯಕಿ ಶ್ವೇತ ಪ್ರಭು ಹಾಗು ವಿಜಯಲಕ್ಷ್ಮಿ, ವರದಿಗಾರ್ತಿ, ಸಂಯುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆ.
ಮದ್ಯಾಹ್ನದ ಅತಿಥಿಗಳು ವಿನೋದ್ ಅಡಿಗ, ಪಾಕಶಾಲ ಹೋಟೆಲ್ ಫೌಂಡರ್ ಹಾಗು ನವಿತ ಜೈನ್, ನ್ಯೂಸ್ 18 ಕನ್ನಡ ನ್ಯೂಸ್ ಚಾನಲ್ ನಿರೂಪಕಿ.ಕಾರ್ಯಕ್ರಮದ ತೀರ್ಪುಗಾರರು ವಿನುತ ಹಾಗು ಸ್ವಾತಿ ಶರ್ಮಾ.
ಸಂಜೆ ಸುಮಾರು 4 ಗಂಟೆಗೆ ಎರಡು ಸಮಯದ ವಿಭಾಗಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ದಂಪತಿಗಳ ಸುತ್ತಿನ ಸ್ಪರ್ಧಾ ವಿಜೇತರು ಮೊದಲ ಬಹುಮಾನ ಪುಷ್ಪಲತ ಮತ್ತು ಕೃಷ್ಣಾನಂದ.ಖಾದ್ಯ ಲಜ ಮಖನ ಇಮ್ಯುನಿಟಿ ಚಾಟ್. ಸವಿತ ಸುರೇಶ್ ಮತ್ತು ಕೆ. ಸುರೇಶ್
ಖಾದ್ಯ: ಸಾನಿಧ್ಯ ಸಲಾಡ್
ದ್ವಿತೀಯ ಬಹುಮಾನ.
ಮದ್ಯಾಹ್ನದ ಸುತ್ತಿನ ಸ್ಪರ್ಧಾ ವಿಜೇತರು ಪ್ರಥಮ ಬಹುಮಾನ ತಾಯಿ- ಮಗಳು ದಿವ್ಯ ಕೃಷ್ಣಾಚಾರ್ ಹಾಗು ಹರ್ಷಿಕಾ ವಿಶ್ವನಾಥ್.ಖಾದ್ಯ ಮಾವಿನ ಸಾಲ್ಸ ಹಾಗು ಬಾದಾಮಿ ಪಿಸಿನ್ ಪೇಯ.ದ್ವಿತೀಯ ಬಹುಮಾನ ಮೈತ್ರಿ ಭಟ್ ಹಾಗು ಭವಾನಿ ಭಟ್ .ಖಾದ್ಯ ಅತಿಮಧುರ ಬೈಟ್ಸ್.
ಇಡೀ ಕಾರ್ಯಕ್ರಮದ ಪ್ರಾಯೋಜಕರು ಮುಳಿಯ ಜ್ಯುವೆಲ್ಸ್.ಮುಳಿಯ ಜ್ಯುವೆಲ್ಸ್ ನ ಮಾಲೀಕರಾದ ಶ್ರೀ ಕೇಶವಪ್ರಸಾದ್ ಮುಳಿಯ, ವೇಣು ಶರ್ಮಾ, ಸುಬ್ರಹ್ಮಣ್ಯ ಭಟ್ ರವರ ಭಾಗವಹಿಸುವಿಕೆ ಹಾಗು ಸಮಾರಂಭದಲ್ಲಿ ಅವರ ಸಕ್ರಿಯ ಪಾತ್ರ,ಸ್ಪರ್ಧಿಗಳಿಗೆ ಹಾಗು ಇತರೆ ವೀಕ್ಷಕರಿಗೆ ಅವರ ಪ್ರೋತ್ಸಾಹದಾಯಕ ಮಾತುಗಳು ಗಮನಾರ್ಹ ವಾದುದು.ಕಾರ್ಯಕ್ರಮದ ನಡುವೆ ಗಾಯಕಿ ಶ್ವೇತ ಪ್ರಭು ಸುಮಧುರ ಗೀತೆಗಳನ್ನು ಹಾಡಿದರು.
ಬೆಳಗ್ಗಿನ ಸುತ್ತು ತೃತೀಯ ಬಹುಮಾನ ಅಕ್ಷಯ್ ಕುಕ್ಕಾಜೆ ಹಾಗು ಸ್ವಾತಿ ಸುಬ್ರಹ್ಮಣ್ಯ .ಖಾದ್ಯ ಸ್ಮೋಕೀ ಫಿಯೇಸ್ಟ
ಮದ್ಯಾಹ್ನದ ಸುತ್ತು ತೃತೀಯ ಬಹುಮಾನ ಕೆ. ಮಹಾಲಕ್ಷ್ಮಿ ಹಾಗು ವಂದನಾ ವಿಜಯಕುಮಾರ್, ತಾಯಿ ಮಗಳು.ಖಾದ್ಯ ಕುಂಬಳ ಚಟ್ನಿ, ಕ್ಯಾಪ್ಸಿಕಂ ಚಟ್ನಿ
ಮದ್ಯಾಹ್ನದ ಸುತ್ತು k s ಹೇಮಲತಾ ರೇವಣ್ಣ ಹಾಗು ಜ್ಞಾನೇಶ್ವರಿ ದ್ವಿತೀಯ ಬಹುಮಾನ.
ಒಟ್ಟಿನಲ್ಲಿ ಎಲ್ಲರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂತು.ಮುಳಿಯ ಜ್ಯುವೆಲ್ಸ್ ನಿಂದ ಮತ್ತಷ್ಟು ಕಾರ್ಯಕ್ರಮಗಳನ್ನು ಮುಂಬರುವ ದಿನಗಳಲ್ಲಿ ಆಶಿಸೋಣ.
ರಾಧಿಕಾ ಜಿ.ಎನ್
ಟೀವೀ ಹೋಸ್ಟ್
7019990492