*ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್ ಮಾದರಿ ವಾರ್ಡ್ ಎಂಬ ಹೆಗ್ಗಳಿಕೆ - ಎಂ.ಮುನಿರಾಜು*

VK NEWS
By -
0

ದಯಾನಂದನಗರ ವಾರ್ಡ್ ಮಾಜಿ ಬಿಬಿಎಂಪಿ ಸದಸ್ಯ ಎಂ.ಮುನಿರಾಜುರವರ ಹುಟ್ಟುಹಬ್ಬದ ಅಚರಣೆಯನ್ನು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಅಚರಿಸಿದರು.







ಎಂ.ಮುನಿರಾಜುರವರು ಬಿಜೆಪಿ ಕಾರ್ಯಕರ್ತರ ಜೊತೆಯಲ್ಲಿ ಕೇಕ್ ಕತ್ತರಿಸಿ ಅಚರಿಸಿದರು.

ದಯಾನಂದನಗರ ವಾರ್ಡ್ ಬಿಜೆಪಿ ಪಕ್ಷದಿಂದ ಆತ್ಮೀಯವಾಗಿ ಅಭಿನಂದಿಸಿದರು.

ಎಂ.ಮುನಿರಾಜುರವರು ಮಾತನಾಡಿ ದಯಾನಂದನಗರ ವಾರ್ಡ್ ನಾಗರಿಕರು ಎರಡು ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ.

ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ದಯಾನಂದನಗರ ವಾರ್ಡ್ ಆನ್ನು ಮಾದರಿ ವಾರ್ಡ್ ಆಗಿ ರೂಪಿಸಲಾಗಿದೆ.

ದಯಾನಂದನಗರ ವಾರ್ಡ್ ನಲ್ಲಿ ಪ್ರತಿಯೊಂದು ಕಾಮಗಾರಿ ಯೋಜನೆಗಳಿಗೆ ರಾಷ್ಟ್ರದ ಗಣ್ಯ ಮಹನೀಯರುಗಳಾದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ರವರು, ಸ್ವಾಮಿ ವಿವೇಕಾನಂದ,ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸುಧಾಮೂರ್ತಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಲವಾರು ಮಹನೀಯರುಗಳ ಹೆಸರುಗಳನ್ನು ಇಡಲಾಗಿದೆ.

ಬೆಂಗಳೂರುನಗರ ವ್ಯಾಪ್ತಿಯಲ್ಲಿ ವಾರ್ಡ್ ನಲ್ಲಿ ಪ್ರಪ್ರಥಮ ಬಾರಿಗೆ ಸಿ.ಸಿ.ಕ್ಯಾಮರ ಆಳವಡಿಸಿದ ಕೀರ್ತಿ ದಯಾನಂದನಗರ ವಾರ್ಡ್ ಗೆ ಸಲ್ಲಲಿದೆ.

ದಯಾನಂದನಗರ ವಾರ್ಡ್ ಒಂಟಿ ಮನೆ ಯೋಜನೆ, ಶುದ್ದ ಕುಡಿಯುವ ನೀರಿನ ಘಟಕ, ಕಾಂಕ್ರೀಟ್ ರಸ್ತೆ, ಪ್ರತಿ ರಸ್ತೆಗಳಿಗೆ ಸಿ.ಸಿ.ಕ್ಯಾಮರ ಮತ್ತು ರೆಫರಲ್ ಆಸ್ಪತ್ರೆ ಗ್ರಂಥಾಲಯ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.

ದಯಾನಂದನಗರ ವಾರ್ಡ್ ಬೆಂಗಳೂರಿನ ಮಾದರಿ ವಾರ್ಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.

ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಶಕೀಲ ಮುನಿರಾಜು, ಬಿಜೆಪಿ ಯುವ ಮುಖಂಡ ಸಂಜಯ್ ಕುಮಾರ್ ಮತ್ತು ಪೌರ ಕಾರ್ಮಿಕರ ಮುಖಂಡರಾದ ಸುರೇಶ್ ಬಾಬು, ಬಿಜೆಪಿ ಮುಖಂಡರುಗಳಾದ ಗುರುಮೂರ್ತಿ, ಕುಮಾರ್,ಮದನ್,  ಕುಮಾರೇಶ್, ಮುದ್ದಣ್ಣರವರು ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

Post a Comment

0Comments

Post a Comment (0)