ಸಮಾಜ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಕಾಯಕ ಸೌಧ ಲೋಕಾರ್ಪಣೆ

VK NEWS
By -
0

ಬೆಂಗಳೂರು:  ಸುಸಜ್ಜಿತ ರಾಜಾಜಿನಗರ ನಿರ್ಮಾಣ, ನಾಗರಿಕರ ಸಮಸ್ಯೆಗಳ ನಿವಾರಣೆಗಾಗಿ ಕಾಯಕಸೌಧ ಜನರ ಉಪಯೋಗಕ್ಕೆ- ಎಸ್.ಸುರೇಶ್ ಕುಮಾರ್*

ರಾಜಾಜಿನಗರ ವಿಧಾನಸಭಾ ಕ್ಷೇತ್ರ: ರಾಜಾಜಿನಗರ ವಾರ್ಡ್ ನಲ್ಲಿ ಬಿಬಿಎಂಪಿ *ಕಾಯಕ ಸೌಧ* ಬಹು ಉಪಯೋಗಿ ಕಛೇರಿಗಳ ಕಟ್ಟಡ ಮತ್ತು ಶಾಸಕರ ಜನಸಂಪರ್ಕ ಕಛೇರಿ ಲೋಕಾರ್ಪಣಾ ಸಮಾರಂಭ.






ಮಾಜಿ ಶಿಕ್ಷಣ ಸಚಿವಎಸ್.ಸುರೇಶ್ ಕುಮಾರ್ ರವರು , ಕಾರ್ಯಪಾಲಕ ಅಭಿಯಂತರರಾದ ಗಂಗಾಧರ್ ರವರು, ಮಾಜಿ ಉಪಮಹಾಪೌರ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ದೀಪ ನಾಗೇಶ್ ರವರು ಲೋಕರ್ಪಣೆ ಮಾಡಿದರು.

ಕಾಯಕಸೌಧ ಬಹುಪಯೋಗಿ ನಾಲ್ಕು ಮಹಡಿ ಕಟ್ಟಡವಾಗಿದ್ದು, ಶಾಸಕರ ಜನಸಂಪರ್ಕ ಕಛೇರಿ, ಕಾರ್ಯಪಾಲಕ, ಸಹಾಯಕ ಕಾರ್ಯಪಾಲಕ ಅಭಿಯಂತರುಗಳ ಕಛೇರಿ ಮತ್ತು ಬಿಬಿಎಂಪಿ ಆರೋಗ್ಯ, ಕಂದಾಯ ಕಛೇರಿಗಳು ಹಾಗೂ ರೂಫ್ ಟಾಪ್ ಮೀಟಿಂಗ್ ಹಾಲ್ ನಿರ್ಮಾಣವಾಗಿದೆ.

*ಶಾಸಕರಾದ ಎಸ್.ಸುರೇಶ್ ಕುಮಾರ್ ರವರು* ಮಾತನಾಡಿ ಕಾಯಕಯೋಗಿ ಶ್ರೀ ಬಸವೇಶ್ವರರ ಕಾಯಕ ತತ್ವ ಮತ್ತು ಸಿದ್ದಾಂತದದ ಪೇರಣೆ ಸ್ಪೂರ್ತಿಯಿಂದ ನೂತನ ಕಟ್ಟಡಕ್ಕೆ ಕಾಯಕಸೌಧ ಎಂದು ನಾಮಕರಣ ಮಾಡಲಾಗಿದೆ.

 ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಸಿಗಬೇಕು, ಸಾರ್ವಜನಿಕರ ಸಮಸ್ಯೆಗಳ ನಿವಾರಣೆಯಾಗಬೇಕು.

ಸುಸಜ್ಜಿತ ರಾಜಾಜಿನಗರ ವಿಧಾನಸಭಾ ಕ್ಷೇತ್ರ ನಿರ್ಮಾಣವಾಗಬೇಕು ಎಂದು ಕಾಯಕ ಸೌಧ ಕಛೇರಿ ಸಾರ್ವಜನಿಕರಿಗೆ ಉಪಯೋಗವಾಗಲಿದೆ.

ಮುಂದಿನ ತಿಂಗಳು ರಾಜಾಜಿನಗರ ನವರಂಗ್ ಮೇಲು ಸೇತುವೆ ಬಳಿ ಶ್ರೀ ಬಸವೇಶ್ವರರ ಪ್ರತಿಮೆ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಸಹಾಯಕ ಕಾರ್ಯಪಾಲಕ ಅಭಿಯಂತರಾದ ಯೋಗೇಶ್, ಸಹಾಯಕ ಅಭಿಯಂತರು ಸುಭಾಶ್ ಪಾಟೀಲ್ ಮತ್ತು ಬಿಜೆಪಿ ಮುಖಂಡರುಗಳಾದ ರಾಘವೇಂದ್ರರಾವ್, ಸುದರ್ಶನ್, ಬಿ.ಎನ್.ಶ್ರೀನಿವಾಸ್, ಯಶಸ್ ನಾಯಕ್, ಗಿರೀಶ್ ಗೌಡ ಮತ್ತು ದೇವಿಕಾ ರಾಜ್ ರವರು ಭಾವಹಿಸಿದ್ದರು.

Post a Comment

0Comments

Post a Comment (0)