ಕೊಳಚೆ ಉಕ್ಕಿ ಹರಿಯುತ್ತಾ... ರಸ್ತೆಯ ನಡುವಿನ ವಿಭಜಕದ ಆ ಬದಿಗೆ ಸೀಮೋಲಾಂಘನೆಗೈದು ದುರ್ನಾತವ ಪಸರುತಿದ್ದರೂ... ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮೂರು ಕೋತಿಗಳ ನೀತಿಯ ಪಾಲಿಸುತ್ತಾ... ಕೆಟ್ಟದ ನೋಡದೆ, ಕೆಟ್ಟದ ಮೂಸದೆ, ಅದರ ಬಗ್ಗೆ ಸಾರ್ವಜನಿಕರ ಛಿ.. ಥೂ... ಗಳನ್ನು ಕೇಳಿಸಿಕೊಳ್ಳದೆ ದಿವ್ಯ ನಿರ್ಲಕ್ಷ್ಯವನ್ನು ತೋರಿದೆ ಎಂದು ವಸಂತನಗರದ ಕಡೆಯಿಂದ ಬೆಂಗಳೂರು ಅರಮನೆಯ ಮುಖ್ಯ ಪ್ರವೇಶ ದ್ವಾರವಿರುವ ಪ್ಯಾಲೇಸ್ ರಸ್ತೆಯ ಮುಖಾಂತರ ಸಂಚರಿಸಿ ಪ್ಯಾಲೇಸ್ ಗುಟ್ಟಹಳ್ಳಿ ಕಡೆಗೆ ಪ್ರತಿ ನಿತ್ಯ ಇದೇ ರಸ್ತೆಯಲ್ಲಿ ಓಡಾಡುವ ಪಾದಚಾರಿಗಳ ಹಾಗೂ ವಾಹನ ಸವಾರರ ಆಪಾದನೆ....
ಪಾಲಿಕೆ ಮುಖ್ಯ ಆಯುಕ್ತರೇ ದಯಮಾಡಿ ಈ ಬಗ್ಗೆ ತಕ್ಷಣ ಗಮನ ಹರಿಸಬೇಕಿದೆ ಎನ್ನುತ್ತಿದ್ದಾರೆ ಇಲ್ಲಿನ ನಿವಾಸಿಗರು....