ಕಾಂಗ್ರೆಸ್ ದುರಾಡಳಿತ ವಿರುದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಬಿಜೆಪಿ ಮುಖಂಡರನ್ನು ಬಂಧಿಸಿದ ಎ.ಸಿ.ಪಿ.ಚಂದನ್ ಗೌಡ

VK NEWS
By -
0

 *ಕಾಂಗ್ರೆಸ್ ದುರಾಡಳಿತ ವಿರುದ್ದ  ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ  ಬಿಜೆಪಿ ಮುಖಂಡರನ್ನು ಬಂಧಿಸಿದ ಎ.ಸಿ.ಪಿ.ಚಂದನ್ ಗೌಡ



ಗೋವಿಂದರಾಜನಗರ ವಿಧಾನಸಭಾ ಜನಸಂಪರ್ಕ ಕಛೇರಿಯಿಂದ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ದುರಾಡಳಿತದಲ್ಲಿ ಮುಡಾ ಹಗರಣ ಮತ್ತು ವಾಲ್ಕೀಕಿ ನಿಗಮದಲ್ಲಿ 187ಕೋಟಿ ಹಗರಣ ಖಂಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಕೇಂದ್ರ ಸಚಿವರಾದ ವಿ.ಸೋಮಣ್ಣರವರು ಮತ್ತು ರಾಜ್ಯ ಬಿಜೆಪಿ ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣರವರ ಮಾರ್ಗದರ್ಶನದಲ್ಲಿ ಮೈಸೂರು ಪ್ರತಿಭಟನೆ ತೆರಳುತ್ತಿದ್ದ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಪಾಲಿಕೆ ಸದಸ್ಯ ಮೋಹನ್ ಕುಮಾರ್, ಬಿಜೆಪಿ ಮುಖಂಡ ಶ್ರೀಧರ್ ಮತ್ತು ಕಾರ್ಯಕರ್ತರನ್ನು ಎ.ಸಿ.ಪಿ.ಚಂದನ್ ಗೌಡ ರವರ ತಂಡ ಮುಂಜಾಗ್ರತಾ ಕ್ರಮವಾಗಿ ಬಂಧಿಸಿದರು.

*ಬಂಧನ ಖಂಡಸಿ ಡಾ||ಅರುಣ್ ಸೋಮಣ್ಣರವರು* ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕಗನಿಗೂ ಪ್ರತಿಭಟನೆ ಮಾಡುವ ಹಕ್ಕು ಸಂವಿಧಾನ ನೀಡಿದೆ.

ಮೈಸೂರು ನಗರಕ್ಕೆ ಬಿಜೆಪಿ ಪಕ್ಷದ ವತಿಯಿಂದ ಮಾಡುತ್ತಿರುವ ಪ್ರತಿಭಟನೆಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ ಎಂದು ಹೇಳಿದರು.

ವಿಶ್ವನಾಥಗೌಡರವರು ಮಾತನಾಡಿ ಕೇಂದ್ರ ಸಚಿವರಾದ ವಿ.ಸೋಮಣ್ಣರವರ ಮಾರ್ಗದರ್ಶನದಲ್ಲಿ ಮೈಸೂರನಲ್ಲಿ ಜರುಗುತ್ತಿರುವ ಕಾಂಗ್ರೆಸ್ ಪಕ್ಷದ ದುರಾಡಳಿತ ವಿರುದ್ದ ಬಿಜೆಪಿ ಪಕ್ಷ ಪ್ರತಿಭಟನೆಯಲ್ಲಿ ಭಾಗವಹಿಸಿಲು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನೂರಾರು ಕಾರ್ಯಕರ್ತರು ತೆರಳುವಾಗ ನಮ್ಮನ್ನು ಪೊಲೀಸ್ ಬಂಧಿಸಿದರು.

ಪ್ರತಿಭಟನೆ ಮಾಡುವ ಹಕ್ಕು, ನ್ಯಾಯ ಕೇಳುವ ಧ್ವನಿ ಅಡಗಿಸುವ ಕಾರ್ಯ ಕಾಂಗ್ರೆಸ್ ಪಕ್ಷ ಮಾಡುತ್ತಿದೆ.

ಕಾಂಗ್ರೆಸ್ ಪಕ್ಷ ಕಳೆದ 1ವರ್ಷದ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ ಎಂದು ಹೇಳಿದರು.

Post a Comment

0Comments

Post a Comment (0)