ಹೊಸದಿಲ್ಲಿ: ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ಮುಖಂಡ ಅಮಿತ್ ಮಾಳವಿಯಾ, ನ. 7, 1966ರಂದು ಸರ್ಕಾರಿ ನೌಕರರ ಮೇಲೆ ಸಂವಿಧಾನಿಕ ರೀತಿಯಲ್ಲಿ ಈ ನಿರ್ಬಂಧ ವಿಧಿಸಲಾಗಿತ್ತು. ಅಂದು ಗೋಹತ್ಯೆ ವಿರುದ್ಧ ಸಂಸತ್ನಲ್ಲಿ ಪ್ರತಿಭಟನೆ ನಡೆದಿತ್ತು. ಆರೆಸ್ಸೆಸ್-ಜನಸಂಘ ಲಕ್ಷಾಂತರ ಜನರ ಬೆಂಬಲ ಸಂಗ್ರಹಿಸಿತ್ತು. ಪೋಲೀಸರ ಗುಂಡಿನ ದಾಳಿಯಲ್ಲಿ ಹಲವರು ಸತ್ತರು. 30 ನವೆಂಬರ್ 1966 ರಂದು, ಆರ್ಎಸ್ಎಸ್-ಜನಸಂಘದ ಪ್ರಭಾವಕ್ಕೆ ಸರ್ಕಾರವೇ ನಲುಗಿತ್ತು. ಇದಾದ ಬಳಿಕ ಇಂದಿರಾ ಗಾಂಧಿ ಸರ್ಕಾರಿ ಸಿಬ್ಬಂದಿಯನ್ನು ಆರ್ಎಸ್ಎಸ್ಗೆ ಸೇರುವುದನ್ನು ನಿಷೇಧಿಸಿದರು. ಇಂದಿರಾ ಗಾಂಧಿಯವರು ಫೆಬ್ರವರಿ 1977 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖಂಡರನ್ನು ಭೇಟಿ ಮಾಡಿ, ತಮ್ಮ ಚುನಾವಣಾ ಪ್ರಚಾರಕ್ಕೆ ಬೆಂಬಲ ನೀಡಬೇಕಾಗಿ ಮನವಿ ಮಾಡಿದರು. ಇದಕ್ಕೆ ಬದಲಾಗಿ ನಿಷೇಧವನ್ನು ತೆಗೆದುಹಾಕುವ ಪ್ರಸ್ತಾಪವನ್ನಿಟ್ಟಿದ್ದರು.
ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘ ದ ಚಟುವಟಿಕೆಯಲ್ಲಿ ಭಾಗಿಯಾಗುವುದನ್ನು ನಿಷೇಧಿಸಿ ಜಾರಿಗೊಳಿಸಲಾಗಿದ್ದ ಕಾನೂನನ್ನು ಈಗ ಹಿಂಪಡೆಯಲಾಗಿದೆ