ಪ್ರವರ್ಗ ಬಿ ಮತ್ತು ಸಿ ದರ್ಜೆಯ 42 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆಗೆ ತೀರ್ಮಾನ.

VK NEWS
By -
0

 ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆ !

ಪ್ರವರ್ಗ ಬಿ ಮತ್ತು ಸಿ ದರ್ಜೆಯ 42 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆಗೆ ತೀರ್ಮಾನ.


ಉಡುಪಿ :  ಜಿಲ್ಲಾ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನೆರವೇರಿತು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಇಂದಿನ ಸಭೆಯಲ್ಲಿ ಉಡುಪಿ ಜಿಲ್ಲೆಯ ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ದರ್ಜೆಯ ದೇವಸ್ಥಾನಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ ಮತ್ತು ಈ ದೇವಸ್ಥಾನವು ಹಿಂ.ದಾ.ದ ಇಲಾಖೆಗೆ ಸೇರಿದೆ ಎಂಬ ಸ್ಪಷ್ಟ ಉಲ್ಲೇಖ ಮಾಡುವುದು, ಪ್ರವರ್ಗ ಬಿ ಯ 4 ದೇವಾಲಯಗಳು ಮತ್ತು ಪ್ರವರ್ಗ ಸಿ  ಯ 38 ಸೇರಿದಂತೆ ಒಟ್ಟು 42 ದೇವಾಲಯಗಳಿಗೆ ನೂತನ ವ್ಯವಸ್ಥಾಪನಾ ಸಮಿತಿ ರಚಿಸಲು ಅನುಮೋದನೆ ಪಡೆಯಲಾಯಿತು.ಈ ಬಾರಿ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿಗಳನ್ನು ಸ್ವೀಕರಿಸಿ  ಆಯ್ಕೆ ಪ್ರಕ್ರಿಯೆ ನಡೆಸುವ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಕುಮಾರ ಶೆಟ್ಟಿ, 

ಶ್ರೀ ವೆಂಕಟೇಶ ಅಡಿಗ ಉಳ್ತೂರು( ವೇದ),

ಶ್ರೀ ರಾಜೇಶ ನಡ್ಯತಿಲ್ಲಾಯ( ಆಗಮ),

ಶ್ರೀ ಶಶಿಧರ ಶೆಟ್ಟಿ ( ಕಾನೂನು),

ಶ್ರೀ ನಾಗಪ್ಪ ಕೊಠಾರಿ (ಹಿಂದುಳಿದ ವರ್ಗ),

ಶ್ರೀ ಶ್ರೀನಿವಾಸ ಹೆಬ್ಬಾರ್ ( ಸಾಮಾನ್ಯ),

ಪದ್ಮನಾಭ ಬಂಗೇರ( ಸಾಮಾನ್ಯ),

ಶ್ರೀ ಸದಾನಂದ ಹೇರೂರು( ಸಾಮಾನ್ಯ),

ಶ್ರೀ ಆಶಾ ಚಂದ್ರಶೇಖರ್ ( ಮಹಿಳಾ) ಮುಂತಾದವರು ಭಾಗವಹಿಸಿದ್ದರು.

Post a Comment

0Comments

Post a Comment (0)