ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಸಿಎನ್ ಮಂಜುನಾಥ್ 1ಲಕ್ಷ ಲೀಡ್ ದಾಟಿದ ಬೆನ್ನಲ್ಲೇ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಡಿಕೆ ಸುರೇಶ್ಗೆ ಹಿನ್ನಡೆಯ ಕಾರಣ ಡಿಕೆ ಶಿವಕುಮಾರ್ ಮನೆಯತ್ತ ನಾಯಕರು, ಬೆಂಬಲಿಗರು, ಕಾರ್ಯಕರ್ತರು ಸುಳಿಯುತ್ತಿಲ್ಲ. ಸದಾ ಬೆಂಬಲಿಗರಿಂದ ಗಿಜುಗುಡುತ್ತಿದ್ದ ಡಿಕೆಶಿ ನಿವಾಸ ಬಿಕೋ ಎನ್ನುತ್ತಿದೆ. ಅತ್ತ ಮನೆಯಿಂದ ಹೊರಗೆ ಬಾರದ ಡಿಕೆ ಬ್ರದರ್ಸ್, ಮನೆಯಲ್ಲೇ ಕುಳಿತು ಫಲಿತಾಂಶ ವೀಕ್ಷಣೆ ಮಾಡುತ್ತಿದ್ದಾರೆ.