ಬೆಂಗಳೂರು, ಜೂನ್ 20: ಸೋಷಿಯಲ್ ಮೀಡಿಯಾದಲ್ಲಿ ಮನಬಂದಂತೆ ಆವಾಜ್ ಹಾಕಿದೆ ನಟ ದರ್ಶನ್ ಅಭಿಮಾನಿಗಳ ಲಿಸ್ಟ್ ಪೊಲೀಸರ ಕೈ ಸೇರಿದೆ. ದರ್ಶನ್ ಆಂಡ್ ಗ್ಯಾಂಗ್ ಇಂದು ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಪಡಿಸಲಿದ್ದಾರೆ. ಎಲ್ಲ ಆರೋಪಿಗಳಿಗೆ ನ್ಯಾಯಾಂಗ ಬಂಧನವಾಗುವ ಸಾಧ್ಯತೆಗಳು ಇವೆ. ಇದಾಗುತ್ತಿದ್ದಂತೆ ಪೊಲೀಸರು ದರ್ಶನ್ ಅಭಿಮಾನಿಗಳಿಗೆ ಚಳಿ ಬಿಡಿಸಲಿದ್ದಾರೆ.
ದರ್ಶನ್ ಬಂಧನವಾಗುತ್ತಿದ್ದಂತೆ ಆತನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತರು, ಕಲಾವಿದರು, ಇತರರ ಕುಟುಂಬಗಳ ವಿರುದ್ಧ ಜೀವ ಬೆದರಿಕೆ ಹಾಕಿದ್ದಾರೆ. ನಟ ಪ್ರಥಮ್ಗೆ ತಡರಾತ್ರಿ ಕರೆ ಮಾಡಿ ಪ್ರಾಣ ತೆಗೆಯುವುದಾಗಿ ಹೆದರಿಸಿದ್ದಾರೆ. ಇದೆಲ್ಲ ಬೆಳವಣಿಗೆ ನೋಡಿದರೆ ಕಾನೂನಿನ ಭಯ ನಟನಿಗೂ, ಅವನ ಅಭಿಮಾನಿಗಳಿಗೂ ಇಲ್ಲವೆಂಬುದು ಗೊತ್ತಾಗುತ್ತದೆ.
ದರ್ಶನ್ ಪರವಾಗಿ ಮಾತನಾಡುವ ಭರದಲ್ಲಿ ಯಾರೆಲ್ಲ ಸಾಮಾಜಿಕ ಜಾಲತಾಣದಲ್ಲಿ ಬಾಲ ಬಿಚ್ಚಿದ್ದರು, ಜೀವ ಬೆದರಿಕೆ ಹಾಕಿದ್ದರು, ಅವಾಚ್ಯವಾಗಿ ಮನ ಬಂದಂತೆ ಇತರರನ್ನು, ಕುಟುಂಬಗಳನ್ನು ನಿಂದಿಸಿ ರೌಡಿ ವರ್ತನೆ ತೋರಿದ್ದರೋ ಅವರಿಗೆ ಬುದ್ಧಿ ಕಲಿಸಲು, ಕಾನೂನಿನ ಪರಿಜ್ಞಾನವನ್ನು ಅವರಲ್ಲಿ ಮೂಡಿಸಲು ಪೊಲೀಸರು ಸಜ್ಜಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಬೆದರಿಕೆ ಹಾಕಿಸಿಕೊಂಡವರಿಂದ ಮೊಬೈಲ್ ನಂಬರ್ ಇಸಿದುಕೊಂಡಿದ್ದಾರೆ. ನಾನುಎ ಒನ್ ಆರೋಪಿಯಾದರೂ ಪರವಾಗಿಲ್ಲ ನಿನ್ನ ಕೊಲೆ ಮಾಡುತ್ತೇನೆ ಎಂದಿದ್ದಾರೆ. ಈ ರಾಜ್ಯದ ಈ ಜಿಲ್ಲೆ ತಾಲೂಕು, ಗ್ರಾಮದವನು ಎಂದು ಅಭಿಮಾನಿಗಳ ಧಮ್ಕಿ ಹಾಕಿದ್ದಾರೆ.
ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ತಾವು A1 ಆರೋಪಿಯಾದರೂ ಪರವಾಗಿಲ್ಲ ನಿನ್ನ ಬಿಡಲ್ಲ, ಕೊಲೆ ಮಾಡುತ್ತೇವೆ, ನಿನ್ನ ಕೈಮಾ ಮಾಡುತ್ತೇವೆ ಎಂದೆಲ್ಲ ಆವಾಜ್ ಹಾಕಿದ್ದಾರೆ. ಹೌದು ರೌಡಿಗಳು ಏನು ಬೇಕಾದರೂ ಮಾಡಲು ಸಿದ್ಧ ಎಂದು ಮಾಧ್ಯಮಗಳ ಮುಂದೆಯೇ ಬಹಿರಂಗವಾಗಿ ಹೇಳಿದರೂ ಇದ್ದಾರೆ. ಮಾಧ್ಯಮದವರಿಗೆ, ಪತ್ರಕರ್ತರಿಗೂ ಮನ ಬಂದಂತೆ ಮಾತನಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ದರ್ಶನ್ ಹುಚ್ಚು ಅಭಿಮಾನಿಗಳಲ್ಲಿ ಒಬ್ಬ, ನಾನು ಕರ್ನಾಟಕದ ಈ ಜಿಲ್ಲೆಯ, ಈ ತಾಲೂಕಿನ ಇಂತಹ ಗ್ರಾಮದವನು ಎಂದು ಅಡ್ರೆಸ್ ಎಲ್ಲ ಹೇಳಿ ಬೈದು ಮಾತನಾಡಿದ್ದಾನೆ. ನಿಮ್ಮ ಕೈಲಿ ಏನಾಗುತ್ತೋ ಮಾಡಿಕೊಳ್ಳಿ ಎಂದು ಗೂಂಡಾ ವರ್ತನೆ ತೋರಿದ್ದಾನೆ. ಇದೆಲ್ಲ ನೋಡಿದರೆ ದರ್ಶನ್ ಅಂಧಾಭಿಮಾನಿಗಳಿಗೆ ಕಾನೂನಿನ ಬಗ್ಗೆ ಕಿಂಚಿತ್ತು ಹೆದರಿಕೆ ಇಲ್ಲದಂತೆ ಕಾಣುತ್ತದೆ. ದರ್ಶನ್ ಒಬ್ಬನೇ ಸುಪ್ರಿಂ ಎಂಬಂತೆ ಅಭಿಮಾನಿಗಳು ಪರ ವಹಿಸಿ ಮಾತನಾಡುತ್ತಿದ್ದಾರೆ.
ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜ್ಯ ಪೊಲೀಸರು ದರ್ಶನ್ ಆಂಡ್ ಗ್ಯಾಂಗ್ ಜೈಲಿಗೆ ಬಿಡುತ್ತಿದ್ದಂತೆ ಹುಚ್ಚು ಅಭಿಮಾನಿಗಳನ್ನು ಪೊಲೀಸ್ ಭಾಷೆಯಲ್ಲಿ ವಿಚಾರಿಕೊಳ್ಳಲಾಗುತ್ತದೆ. ಇದಕ್ಕಾಗಿ ಪೊಲೀಸ್ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಜೀವ ಬೆದರಿಕೆ, ನಿಂದನೆ, ಧಮ್ಕಿ, ರೌಡಿ ವರ್ತನೆ, ಕಾನೂನು ಬಾಹಿರವಾಗಿ ನಡೆದುಕೊಂಡವರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಪೊಲೀಸರು ಶೀಘ್ರವೇ ದರ್ಶನ್ ಬಂಧನ ಬಳಿಕ ಬೆಂಗಳೂರು ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಸಕ್ರಿಯಗೊಂಡ ನಟ ಹಿಂಬಾಲಕರಿಗೆ ಬೆಂಡೆತ್ತಲಿದ್ದಾರೆ. ದರ್ಶನ್ ಬಂಧನಕ್ಕೂ ಮೊದಲು ಯಾದಗಿರಿಯಲ್ಲಿ ವ್ಯಕ್ತಿಯೊಬ್ಬ, 'ಬೇರೆ ನಟರನ್ನು ಯಾಕೆ ಆರಾಧಿಸಿತ್ತೀರಿ, ನಿಮ್ಮ ಅಪ್ಪ ಅಮ್ಮನನ್ನು ಆರಾಧಿಸಿ' ಎಂದು ಪೋಸ್ಟ್ ಹಾಕಿದ್ದ. ಇದನ್ನು ಆಕ್ಷೇಪಿಸಿ ಆ ವ್ಯಕ್ತಿಗೆ ಜೀವ ಬೆದರಿಕೆ ಹಾಕಿದ ದರ್ಶನ್ ಅಭಿಮಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನೇಕ ಜಿಲ್ಲೆಗಳಲ್ಲಿ 'ಪೊರ್ಕಿ' ಅಭಿಮಾನಿಗಳು ಇಂತಹ ವರ್ತನೆ ತೋರಿದ್ದಾರೆ ಎನ್ನಲಾಗಿದೆ.