ಎಕ್ಸಿಟ್ ಪೋಲ್ ರಿಪೋರ್ಟ್ - ಮೋದಿ ಹ್ಯಾಟ್ರಿಕ್!

VK NEWS
By -
0

 


ನವದೆಹಲಿ: ಲೋಕಸಭೆ ಚುನಾವಣೆಗೆ  ತೆರೆ ಬಿದ್ದಿದ್ದು, ಮತಗಟ್ಟೆ ಸಮೀಕ್ಷೆಗಳು ಹೊರಬೀಳತೊಡಗಿವೆ. ಲೋಕಸಭೆ ಚುನಾವಣೆ ಕುರಿತು ಪಿ ಮಾರ್ಕ್‌ ಸಮೀಕ್ಷಾ ವರದಿ ಪ್ರಕಟಿಸಿದ್ದು, ಚುನಾವಣೆಯಲ್ಲಿ ಎನ್‌ಡಿಎ 359 ಕ್ಷೇತ್ರ, ಇಂಡಿಯಾ ಒಕ್ಕೂಟ 154 ಹಾಗೂ ಇತರೆ ಅಭ್ಯರ್ಥಿಗಳು 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು ಇಂಡಿಯಾ ಟುಡೇ ತಮಿಳುನಾಡಿನ ಸಮೀಕ್ಷೆ ವರದಿ ಪ್ರಕಟಿಸಿದೆ. ಅಷ್ಟೇ ಅಲ್ಲ, ಪೋಲ್‌ ಸ್ಟ್ರ್ಯಾಟ್‌ ಕರ್ನಾಟಕದ ಸಮೀಕ್ಷಾ ವರದಿ ತಿಳಿಸಿದೆ.

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಏರಲಿದ್ದು ಮೂರನೇ ಬಾರಿ ನರೇಂದ್ರ ಮೋದಿ  ಅಧಿಕಾರಕ್ಕೆ ಏರಲಿದ್ದಾರೆ ಎಂದು ಚುನಾಣೋತ್ತರ ಸಮೀಕ್ಷೆ  ಭವಿಷ್ಯ ನುಡಿದಿವೆ.

ಕಳೆದ ಎರಡು ತಿಂಗಳಿಂದ ತೀವ್ರ ಚರ್ಚೆ, ಪ್ರಚಾರ, ಹೇಳಿಕೆ, ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಲೋಕಸಭೆ ಚುನಾವಣೆಯು ಶನಿವಾರ ಮುಕ್ತಾಯಗೊಂಡಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗುತ್ತಿವೆ. ಯಾವ ಪಕ್ಷಕ್ಕೆ ಹೆಚ್ಚಿನ ಕ್ಷೇತ್ರ? ಯಾವ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂಬುದಕ್ಕೆ ಮತಗಟ್ಟೆ ಸಮೀಕ್ಷೆ ದಿಕ್ಸೂಚಿಯಾಗಿದೆ. ಆ ಮತಗಟ್ಟೆ ಸಮೀಕ್ಷೆಯ ಮಾಹಿತಿ ಇಲ್ಲಿದೆ.

ಇದರೊಂದಿಗೆ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗುವುದು ಖಚಿತವಾಗಿದೆ. ಲೋಕಸಭೆ ಚುನಾವಣೆಯುದ್ದಕ್ಕೂ ಇಂಡಿಯಾ ಒಕ್ಕೂಟ ಅಬ್ಬರದ ಪ್ರಚಾರ ನಡೆಸಿದರೂ, ಮೂರನೇ ಬಾರಿಗೂ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂಬುದು ಬಹುತೇಕ ಸಮೀಕ್ಷಾ ವರದಿಗಳ ಲೆಕ್ಕಾಚಾರವಾಗಿದೆ. ಅದರಲ್ಲೂ, ತಮಿಳುನಾಡಿನಲ್ಲಿ ಬಿಜೆಪಿಯು ಖಾತೆ ತೆರೆಯಲು ಮುಂದಾಗಿರುವುದು ಬಿಜೆಪಿಗೆ ಪಾಲಿಗೆ ದಕ್ಷಿಣ ಭಾರತದಲ್ಲಿ ವರದಾನವಾಗಲಿದೆ. 

ಪಿ ಮಾರ್ಕ್‌: ಎನ್‌ಡಿಎ: 359,  ಇಂಡಿಯಾ: ಒಕ್ಕೂಟ 154, ಇತರೆ: 30
ವಿಸ್ತಾರ ನ್ಯೂಸ್‌-COPS: ಎನ್‌ಡಿಎ: 330-350, ಇಂಡಿಯಾ ಒಕ್ಕೂಟ: 130-150, ಇತರೆ: 20-30
ಇಂಡಿಯಾ ಟುಡೇ: ತಮಿಳುನಾಡು: ಡಿಎಂಕೆ: 20-22, ಬಿಜೆಪಿ: 1-3,
ಪೋಲ್‌ ಸ್ಟ್ರ್ಯಾಟ್: ಕರ್ನಾಟಕ : ಬಿಜೆಪಿ 18, ಕಾಂಗ್ರೆಸ್‌: 8, ಜೆಡಿಎಸ್‌: 2
ಇಂಡಿಯಾ ನ್ಯೂಸ್‌: ಎನ್‌ಡಿಎ: 371, ಇಂಡಿಯಾ ಒಕ್ಕೂಟ: 125,
ಮ್ಯಾಟ್ರಿಜ್: ‌ಎನ್‌ಡಿಎ: 353-368, ಇಂಡಿಯಾ ಒಕ್ಕೂಟ: 120
ಮ್ಯಾಟ್ರಿಜ್-‌ ಉತ್ತರ ಪ್ರದೇಶ: ಎನ್‌ಡಿಎ: 69-74, ಇಂಡಿಯಾ ಒಕ್ಕೂಟ: 6-11
ಟಿವಿ9 ಪೋಲ್‌ಸ್ಟ್ರಾಟ್‌ ಪೀಪಲ್ಸ್ ಇನ್‌ಸೈಟ್‌ನ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿ 18 ಸ್ಥಾನಗಳನ್ನು ಗಳಿಸಲಿದೆ ಎಂದಿದೆ.

ಒಟ್ಟು 28 ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಇದರಲ್ಲಿ ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವ ಸಾಧ್ಯತೆ ಇದೆ. ಕಾಂಗ್ರೆಸ್ 8 ಸ್ಥಾನಗಳನ್ನು ಗೆಲ್ಲುವ ಸಂಭವವಿದೆ ಎಂದು ಈ ಸಮೀಕ್ಷೆ ಹೇಳಿದೆ.

ನ್ಯೂಸ್ 18 ನಡೆಸಿದ ಎಕ್ಸಿಟ್‌ ಪೋಲ್‌ನಲ್ಲಿ ಕರ್ನಾಟಕದಲ್ಲಿ ಬಿಜೆಪಿ 21ರಿಂದ 24 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 3ರಿಂದ 7 ಸ್ಥಾನಗಳನ್ನು ಗೆಲ್ಲಲಿದೆ. ಇತರೆ ಯಾವ ಪಕ್ಷಗಳೂ ರಾಜ್ಯದಲ್ಲಿ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದೆ.

ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 23ರಿಂದ 25 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್‌ 3ರಿಂದ 5 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದಿದೆ.

ಮುಂಬೈ ಸಟ್ಟಾ ಬಜಾರ್‌ ವರದಿ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿಯು 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿತ್ತು. ಕಾಂಗ್ರೆಸ್‌ ಈ ಬಾರಿ 55-65 ಕ್ಷೇತ್ರಗಳಲ್ಲಿ ಮಾತ್ರ ಜಯಿಸಲಿದೆ. ಇನ್ನು, ರಾಮಮಂದಿರ ಕಾರಣದಿಂದ ಬಿಜೆಪಿಗೆ ಪ್ರಮುಖವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 64-66 ಕ್ಷೇತ್ರಗಳು ಲಭಿಸಲಿವೆ ಎಂದು ವರದಿ ತಿಳಿಸಿದೆ. ಇದಕ್ಕೂ ಮೊದಲು ಮುಂಬೈ ಸಟ್ಟಾ ಬಜಾರ್‌ ಸಮೀಕ್ಷೆಯು ಬಿಜೆಪಿ 270-280 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಕಾಂಗ್ರೆಸ್‌ 70-80 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ತಿಳಿಸಿತ್ತು. ಈಗ ಬಹುತೇಕ ಸಮೀಕ್ಷೆಗಳು ಇದೇ ಅಂಶವನ್ನು ಉಲ್ಲೇಖಿಸಿವೆ.

ಬಿಜೆಪಿಯು ಮತ್ತೊಂದು ಸಾರ್ವತ್ರಿಕ ಚುನಾವಣೆಯ ವಿಜಯವನ್ನು ಪಡೆಯುತ್ತದೆ ಎಂದು ಚುನಾವಣಾ ರಣತಂತ್ರಗಾರ ಯೋಗೇಂದ್ರ ಯಾದವ್‌ ಅವರು ಭವಿಷ್ಯ ನುಡಿದಿದ್ದಾರೆ. ಭಾರತೀಯ ಜನತಾ ಪಕ್ಷದ ಪರವಾಗಿ ತಮ್ಮ ಭವಿಷ್ಯವಾಣಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಯಾದವ್‌ ಅಚ್ಚರಿ ಮೂಡಿಸಿದ್ದಾರೆ. ಯಾದವ್ ಪ್ರಕಾರ ಬಿಜೆಪಿ 240-260 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷಗಳು 34-45 ಸ್ಥಾನಗಳನ್ನು ಗೆಲ್ಲಬಹುದು. ಅಂದರೆ ಎನ್‌ಡಿಎ (NDA) ಒಟ್ಟು 275 ಮತ್ತು 305 ಸ್ಥಾನಗಳ ನಡುವೆ ಸುಳಿದಾಡಬಹುದು.

ಚುನಾವಣೆ ತಜ್ಞ, ರಾಜಕೀಯ ಪರಿಣತರಾದ ಪ್ರಶಾಂತ್‌ ಕಿಶೋರ್‌ ಅವರು ಕೂಡ ದೇಶದಲ್ಲಿ ಮೋದಿ ಹ್ಯಾಟ್ರಿಕ್‌ ಗಳಿಸಲಿದ್ದಾರೆ ಎಂದು ಹೇಳಿದ್ದಾರೆ. “ದೇಶದಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾದರೂ ಜನಕ್ಕೆ ಅವರ ಮೇಲೆ ಸಿಟ್ಟಿಲ್ಲ. ಹಾಗಾಗಿ, ಬಿಜೆಪಿ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ” ಎಂದು ತಿಳಿಸಿದ್ದಾರೆ. ಹಾಗೆಯೇ, ವಿರೋಧ ಪಕ್ಷಗಳ ಕಾರ್ಯ ವೈಖರಿಯನ್ನೂ ಅವರು ಟೀಕಿಸಿದ್ದಾರೆ. ಬಿಜೆಪಿ ವಿರುದ್ಧ ಪ್ರಯೋಗಿಸಬಹುದಾದ ಅನೇಕ ಅಸ್ತ್ರಗಳನ್ನು, ಅವಕಾಶಗಳನ್ನು ʼಇಂಡಿಯಾʼ ಮೈತ್ರಿಕೂಟ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

Post a Comment

0Comments

Post a Comment (0)